ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರದಿಂದ ಕೊರತೆ ನೀಗಿಸಲು 1,000 ಮೆ.ವ್ಯಾಟ್ ವಿದ್ಯುತ್ ಖರೀದಿ

By Sachhidananda Acharya
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19: ಇದೇ ಬುಧವಾರದಿಂದ ಆರಂಭಿಸಿ 8 ತಿಂಗಳ ಕಾಲ ಕರ್ನಾಟಕ ಸರಕಾರ 1,000 ಮೆಗಾವ್ಯಾಟ್ ವಿದ್ಯುತ್ ಖರೀದಿಸಲಿದೆ.

ಮಳೆ ಕೊರತೆ, ಸರಕಾರದಿಂದ 1,000 ಮೆಗಾ ವ್ಯಾಟ್ ವಿದ್ಯುತ್ ಖರೀದಿ ಮಳೆ ಕೊರತೆ, ಸರಕಾರದಿಂದ 1,000 ಮೆಗಾ ವ್ಯಾಟ್ ವಿದ್ಯುತ್ ಖರೀದಿ

ರಾಜ್ಯಕ್ಕೆ ನಿಗದಿಯಾಗಿರುವ ವಿದ್ಯುತ್ ಪೂರೈಕೆಯಲ್ಲಿ ಕಡಿತವಾಗಿರುವ ಕಾರಣ ವಿದ್ಯುತ್ ಖರೀದಿ ನಡೆಸಲಾಗುತ್ತಿದೆ. ಇದಕ್ಕಾಗಿ ಟೆಂಡರ್ ಕೂಡಾ ಮುಗಿದಿದ್ದು, ಒಟ್ಟು ನಾಲ್ಕು ಕಂಪನಿಗಳು ವಿದ್ಯುತ್ ಪೂರೈಕೆ ಮಾಡಲಿವೆ. ಪ್ರತಿ ಯೂನಿಟ್ ವಿದ್ಯುತನ್ನು 4.08 ರೂಪಾಯಿಯಂತೆ ಖರೀದಿ ಮಾಡಲಾಗುತ್ತದೆ.

Karnataka to import 1,000 MW power from private companies to meet the demand

ಕರ್ನಾಟಕದಲ್ಲಿ ಒಟ್ಟಾರೆ 3,300 ಮೆಗಾ ವ್ಯಾಟ್ ವಿದ್ಯುತ್ ಕೊರತೆ ಇದೆ. ಮಳೆ ಕೊರತೆಯಿಂದಾಗಿ ಜಲ ವಿದ್ಯುತ್ ಪೂರೈಕೆಯಲ್ಲಿ 520 ಮೆಗಾ ವ್ಯಾಟ್, ಬಳ್ಳಾರಿ ಪವರ್ ಪ್ಲಾಂಟ್ ನಿಂದ 700 ಮೆಗಾ ವ್ಯಾಟ್, ಯೆರಮುರಸ್ ವಿದ್ಯುತ್ ಉತ್ಪಾದನಾ ಕೇಂದ್ರದಿಂದ 1,600 ಮೆಗಾ ವ್ಯಾಟ್ ವಿದ್ಯುತ್ ಕಡಿಮೆ ಸರಬರಾಜಾಗುತ್ತಿದೆ. ಜತೆಗೆ ಕೂಡಕುಲಂ ಅಣು ಸ್ಥಾವರದಲ್ಲಿ ನಿರ್ವಹಣೆ ನಡೆಯುತ್ತಿರುವುದರಿಂದ ನಿಗದಿಗಿಂತ 200 ಮೆಗಾ ವ್ಯಾಟ್ ವಿದ್ಯುತ್ ಕಡಿಮೆ ಪೂರೈಕೆಯಾಗುತ್ತಿದೆ.

ಇವೆಲ್ಲದರ ಜತೆಗೆ ಸಾಮಾನ್ಯವಾಗಿ ಸೆಪ್ಟೆಂಬರ್ ನಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿರುತ್ತದೆ. ಇದನ್ನು ನೀಗಿಸಲು ಕರ್ನಾಟಕ ಸರಕಾರ ವಿದ್ಯುತ್ ಖರೀದಿ ಮಾಡುತ್ತಿದೆ.

English summary
Karnataka will buy 1,000 MW of power for eight months, starting from September 20. Karnataka facing a shortage of power supply from plants designated to the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X