ತಕ್ಷಣ ನನ್ನನ್ನು ಸೇವೆಯಿಂದ ಮುಕ್ತಿಗೊಳಿಸಿ: ಖಡಕ್ ಐಜಿಪಿ

Karnataka IGP Gopal Hosur seeks voluntary retirement
ಬೆಂಗಳೂರು, ಸೆಪ್ಟೆಂಬರ್ 20: 'ವೈಯಕ್ತಿಕ ಕಾರಣಗಳಿಂದಾಗಿ ನಾನು ಸೇವೆಯಲ್ಲಿ ಮುಂದುವರಿಯಲಾಗುತ್ತಿಲ್ಲ. ಆದ್ದರಿಂದ ತಕ್ಷಣ ನನ್ನನ್ನು ಸೇವೆಯಿಂದ ಮುಕ್ತಿಗೊಳಿಸಿ' ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಮೊನ್ನೆ ಮಂಗಳವಾರ ಸರಕಾರದ ಮೊರೆಹೋಗಿದ್ದಾರೆ.

ಯಾರಪ್ಪಾ ಅಂತಹ ಖಡಕ್ ಅಧಿಕಾರಿ ಸೇವೆಯಿಂದ ಮುಕ್ತಿ ಬಯಸಿರುವವರು ಅಂದರೆ ನಾಗರಿಕ ರಕ್ಷಣೆ ಮತ್ತು ಹೋಮ್ ಗಾರ್ಡ್ಸ್ ವಿಭಾಗದ ಪೊಲೀಸ್ ಮಹಾ ನಿರೀಕ್ಷಕ, ನಿರಂತವಾಗಿ ರಾಜ್ಯಕ್ಕೆ ತಮ್ಮ ಅನುಪಮ ಸೇವೆ ಸಲ್ಲಿಸುತ್ತಾ ಬಂದಿರುವ ಗೋಪಾಲ್ ಬಿ ಹೊಸೂರ್.

ಒಂದು ಮೂಲದ ಪ್ರಕಾರ ಹಾಲಿ ಕಾಂಗ್ರೆಸ್ ಸರಕಾರ ತಮ್ಮನ್ನು ಅವಗಣನೆ ಮಾಡಿದೆ ಎಂದು ಅಸಮಾಧಾನಗೊಂಡು ಹೊಸೂರ್ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಅಂದಹಾಗೆ ಕಳೆದ ವರ್ಷ ರಾಜ್ಯ ಗುಪ್ತದಳ ಐಜಿಪಿಯಾಗಿದ್ದಾಗ ಗೋಪಾಲ ಬಿ. ಹೊಸೂರು ಅವರ ಪುತ್ರ ಶ್ರೇಯಸ್ ಜಿ. ಹೊಸೂರು ಅವರು 532ನೇ Rank ಪಡೆದು, ನಾಗರಿಕ ಸೇವಾ ಪರೀಕ್ಷೆಯಲ್ಲಿ (IAS) ತೇರ್ಗಡೆಯಾಗಿದ್ದಾರೆ.

ಅಂದಹಾಗೆ superannuationನಲ್ಲಿದ್ದ ಗೋಪಾಲ್ ಹೊಸೂರ್ ಅವರು 2014ರ ಫೆಬ್ರವರಿಗೆ ಅವರು ಅಧಿಕೃತವಾಗಿ ಸೇವೆಯಿಂದ ನಿವೃತ್ತವಾಗಬೇಕಿತ್ತು. ಆದರೆ ಅನಿರೀಕ್ಷಿತವಾಗಿ, ಖಾಸಗಿ ಕಾರಣಗಳನ್ನು ಮುಂದೊಡ್ಡಿ ನಾಲ್ಕು ತಿಂಗಳ ಮುಂಚೆಯೇ ನಿವೃತ್ತಿ ಬಯಸಿದ್ದಾರೆ.

ಈ ಸಂಬಂಧ ಹೋಮ್ ಗಾರ್ಡ್ಸ್ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರಿಗೆ ಗೋಪಾಲ್ ಹೊಸೂರ್ ಅವರು ಸೆ. 17ರಂದು ಪತ್ರ ಬರೆದಿದ್ದಾರೆ. ತಕ್ಷಣವೇ ಹೊಸೂರ್ ಅರ್ಜಿ ಮುಖ್ಯಕಾರ್ಯದರ್ಶಿ ಟೇಬಲ್ ತಲುಪಿಕೊಂಡಿದೆ.

ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಗೋಪಾಲ್ ಹೊಸೂರ್ ಅವರು ಗುಪ್ತಚರ ದಳದ ಮುಖ್ಯಸ್ಥರಾಗಿದ್ದರು. ಆದರೆ ಇತ್ತೀಚೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಗೋಪಾಲ್ ಹೊಸೂರ್ ಅವಕೃಪೆಗೊಳಗಾದರು. ಹೆಚ್ಚು ಪೊಲೀಸ್ ಅಧಿಕಾರವಿಲ್ಲದ ಹೋಮ್ ಗಾರ್ಡ್ಸ್ ವಿಭಾಗಕ್ಕೆ ಅವರನ್ನು ಅಟ್ಟಲಾಗಿತ್ತು.

1980ರಲ್ಲಿ Karnataka State Police Service officer ಆಗಿದ್ದ ಗೋಪಾಲ್ ಹೊಸೂರ್ ಮುಂದೆ ಐಪಿಎಸ್ ಅಧಿಕಾರೊಯಾಗಿ ಬಡ್ತಿ ಪಡೆದಿದ್ದರು. ಕುಖ್ಯಾತ ಕಾಡುಗಳ್ಳ ವೀರಪ್ಪನ್ ಬೇಟೆ ಸೇರಿದಂತೆ ಅನೇಕ ವಿಶೇಷ ಕಾರ್ಯಪಡೆಗಳಲ್ಲಿ ಅವರು ದಕ್ಷ ಸೇವೆ ಸಲ್ಲಿಸಿದ್ದಾರೆ.

1993ರಲ್ಲಿ ವೀರಪ್ಪನ್ ವಿರುದ್ಧ ಜೀವದ ಹಂಗು ತೊರೆದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ವೀರಪ್ಪನ್ ಸಿಡಿಸಿದ ಗುಂಡಿನ ಚೂರುಗಳು ಗೋಪಾಲ್ ಹೊಸೂರ್ ಅವರ ಕತ್ತನ್ನು ಸೀಳಿತ್ತು. ಆರು ತಿಂಗಳ ಕಾಲ ಗುಂಡಿನ ಚೂರುಗಳೊಂದಿಗೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+