ಗೋಪಾಲ ಹೊಸೂರು ಪುತ್ರ ಸಹ ಐಎಎಸ್ ಗೆ ಆಯ್ಕೆ

ಬೆಂಗಳೂರು, ಮೇ 5: ಐಟಿ-ಬಿಟಿ ಎಂದು ಕಳೆದುಹೋಗದೆ ಅಪ್ಪನ ಹಾದಿಯಲ್ಲೇ ಸಾಗಿರುವ ರಾಜ್ಯದ ಇಬ್ಬರು ಹಿರಿಯ ಅಧಿಕಾರಿಗಳ ಇಬ್ಬರು ಮಕ್ಕಳು, ಕಾರ್ಗಿಲ್ ಸೇನಾ ಯೋಧ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಸೇರಿದಂತೆ ಬಿಎಂಟಿಸಿ ಡ್ರೈವರೊಬ್ಬರ ಪುತ್ರಿ ರಾಧಿಕಾ 2012ನೇ ಸಾಲಿನ ಐಎಎಸ್/ ಐಪಿಎಸ್ ಗೆ ಆಯ್ಕೆಗೊಂಡಿದ್ದಾರೆ.

upsc-2012-karnataka-ias-ips-toppers

ಕಳೆದ ಜೂನ್‌ನಲ್ಲಿ ನಡೆದಿದ್ದ ಭಾರತೀಯ ನಾಗರಿಕ ಸೇವೆಗಳ ಪರೀಕ್ಷೆ (ಯುಪಿಎಸ್‌ಸಿ) ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಅತ್ಯಧಿಕ ಅಂದರೆ 65 ಮಂದಿ ನೇಮಕಗೊಂಡಿದ್ದಾರೆ. ಆಯ್ಕೆಯಾದವರಲ್ಲಿ 23 ಮಂದಿ ಮುಖ್ಯ ಪರೀಕ್ಷೆಯಲ್ಲಿ ಕನ್ನಡವನ್ನು ಒಂದು ವಿಷಯವಾಗಿ ತೆಗೆದುಕೊಂಡಿದ್ದಾರೆ ಎಂಬುದು ವಿಶೇಷ.

ದೇಶದಾದ್ಯಂತ ಒಟ್ಟು 910 ಅಭ್ಯರ್ಥಿಗಳು ಐಎಎಸ್, ಐಎಫ್‌ಎಸ್, ಐಪಿಎಸ್ ಹಾಗೂ ಕೇಂದ್ರ ಸೇವೆಯ ಎ ಮತ್ತು ಬಿ ದರ್ಜೆಯ ಹುದ್ದೆಗಳಿಗೆ ಆಯ್ಕೆ ಆಗಿದ್ದಾರೆ. ಒಟ್ಟು 2,43,003 ಮಂದಿ ಪರೀಕ್ಷೆ ಬರೆದಿದ್ದರು.

ರಾಜ್ಯ ಗುಪ್ತದಳ ಐಜಿಪಿ ಗೋಪಾಲ ಬಿ. ಹೊಸೂರು ಅವರ ಪುತ್ರ ಶ್ರೇಯಸ್ ಜಿ. ಹೊಸೂರು 532ನೇ Rank ಪಡೆದು, ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಮತ್ತೊಬ್ಬ ಹಿರಿಯ ಐಎಎಸ್ ಐಆರ್ ಪೆರುಮಾಳ್ ಅವರ ಪುತ್ರಿ ದೀಪ್ತಿ ಸಹ ಐಎಎಸ್ ಗೆ ಆಯ್ಕೆಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+