• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಕಾಂಗ್ರೆಸ್ ಟ್ವಿಟ್ಪರ್ ನಿರ್ಬಂಧದ ಆದೇಶಕ್ಕೆ ಹೈಕೋರ್ಟ್ ತಡೆ

|
Google Oneindia Kannada News

ಬೆಂಗಳೂರು, ನವೆಂಬರ್ 07: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್-2 ಚಿತ್ರದ ಹಾಡನ್ನು ಬಳಸಿದ ಹಿನ್ನೆಲೆ ಕಾಂಗ್ರೆಸ್‌ನ ಟ್ವಿಟ್ಪರ್ ಹ್ಯಾಂಡಲ್ ಅನ್ನು ನಿರ್ಬಂಧಿಸಿದ ಕೆಳಹಂತದ ಕೋರ್ಟ್ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಸೋಮವಾರವಷ್ಟೇ ಕಾಪಿರೈಟ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆ ಕಾಂಗ್ರೆಸ್ ಮತ್ತು ಭಾರತ್ ಜೋಡೋ ಯಾತ್ರಾ ಅಭಿಯಾನದ ಟ್ವಿಟ್ಪರ್ ಹ್ಯಾಂಡಲ್‌ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಬೆಂಗಳೂರಿನ ವಾಣಿಜ್ಯ ನ್ಯಾಯಾಲಯವು ಆದೇಶವನ್ನು ಹೊರಡಿಸಿತ್ತು.

ಕೆಜಿಎಫ್-2 ಸಂಗೀತ ಬಳಕೆ: ಕಾಂಗ್ರೆಸ್ ಟ್ವಿಟ್ಟರ್ ನಿರ್ಬಂಧ, ವಾಣಿಜ್ಯ ಕೋರ್ಟ್ ಆದೇಶದಲ್ಲೇನಿದೆ?ಕೆಜಿಎಫ್-2 ಸಂಗೀತ ಬಳಕೆ: ಕಾಂಗ್ರೆಸ್ ಟ್ವಿಟ್ಟರ್ ನಿರ್ಬಂಧ, ವಾಣಿಜ್ಯ ಕೋರ್ಟ್ ಆದೇಶದಲ್ಲೇನಿದೆ?

ಆದರೆ ಕರ್ನಾಟಕ ಹೈಕೋರ್ಟ್ ಬೆಂಗಳೂರು ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿದೆ. ಬುಧವಾರದೊಳಗೆ ಕಾಂಗ್ರೆಸ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಟ್ವಿಟ್ಪರ್, ಫೇಸ್‌ಬುಕ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್‌ನಿಂದ ಎಲ್ಲಾ ಹಕ್ಕುಸ್ವಾಮ್ಯ ವಸ್ತುಗಳನ್ನು ತೆಗೆದುಹಾಕಲು ಹೈಕೋರ್ಟ್‌ನ ಆದೇಶದಲ್ಲಿ ಸೂಚನೆ ನೀಡಲಾಗಿದೆ.

ಸೋಮವಾರ ತಡೆಯಾಜ್ಞೆ ನೀಡಿದ್ದ ಕೋರ್ಟ್:

ಕೆಜಿಎಫ್-2 ಚಿತ್ರದ ಹಾಡನ್ನು ಬಳಕೆ ಮಾಡಿರುವುದರ ಹಿನ್ನೆಲೆ ಭಾರತ್ ಜೋಡೋ ಯಾತ್ರಾ ಅಭಿಯಾನದ ಟ್ವಿಟ್ಪರ್ ಹ್ಯಾಂಡಲ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಬೆಂಗಳೂರಿನ ವಾಣಿಜ್ಯ ಕೋರ್ಟ್ ಆದೇಶಿಸಿತು. ಭಾರತ್ ಜೋಡೋ ಯಾತ್ರಾ ಪ್ರಚಾರದ ವಿಡಿಯೊಗಳಲ್ಲಿ ಕೆಜಿಎಫ್-2 ಹಾಡುಗಳನ್ನು ಬಳಸಿರುವ ಬಗ್ಗೆ ಮ್ಯೂಸಿಕ್ ಕಂಪನಿಯು ಆರೋಪಿಸಿತ್ತು.

ಭಾರತ್ ಜೋಡೋ ಯಾತ್ರೆಯ ವಿಡಿಯೋಗಳಲ್ಲಿ ರಾಹುಲ್ ಗಾಂಧಿ ಅನ್ನು ಕೆಜಿಎಫ್ 2 ಚಿತ್ರದ ಸಂಗೀತವನ್ನು ಬಳಸಿ ತೋರಿಸಲಾಗಿತ್ತು. ಇದಕ್ಕಾಗಿ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರಿನೇಟ್ ವಿರುದ್ಧ ಕೃತಿಸ್ವಾಮ್ಯ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಕಳೆದ ಶುಕ್ರವಾರ, ನವೆಂಬರ್ 4 ರಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ. ಎಂಆರ್‌ಟಿ ಮ್ಯೂಸಿಕ್‌ನ ಎಂ. ನವೀನ್ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ನಾಯಕರ ಮೇಲೆ ದೂರು ದಾಖಲಾಗಿದೆ.

English summary
Karnataka High Court stays to Bengaluru court order about block Congress and Bharat Jodo Yatra Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X