ಸರ್ಕಾರಿ ಕೆಲಸಕ್ಕೆ ಅನಧಿಕೃತ ರಜೆ; ಮಹಿಳಾ ಉದ್ಯೋಗಿ ವಜಾ ಕ್ರಮ ಕುರಿತು ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ

ಬೆಂಗಳೂರು, ಅಕ್ಟೋಬರ್ 25: ಮಾತೃತ್ವ ರಜೆ ಮುಗಿದ ಬಳಿಕ ಅನಧಿಕೃತ ಗೈರುಹಾಜರಿ ಸಮರ್ಥನೀಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಮಾತೃತ್ವ ರಜೆಯ ಅವಧಿ ಪೂರ್ಣಗೊಂಡ ನಂತರವೂ ಸೂಕ್ತ ಮೇಲಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಅನಧಿಕೃತವಾಗಿ ಕೆಲಸಕ್ಕೆ ಗೈರುಹಾಜರಾಗಿ, ಅದನ್ನು ಸಮರ್ಥಿಸಿಕೊಳ್ಳಲು ಮಾತೃತ್ವ ರಜೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

Karnataka High Court on Maternity Leave Unauthorised Absence After Leave Can Lead to Dismissal

ಅನಧಿಕೃತ ಗೈರುಹಾಜರಿಗೆ ಬ್ರೇಕ್

ಅನಧಿಕೃತ ಗೈರುಹಾಜರಿಯ ಕಾರಣಕ್ಕೆ ಮಹಿಳಾ ನೌಕರರೊಬ್ಬರನ್ನು ಸೇವೆಯಿಂದ ವಜಾಗೊಳಿಸಿದ್ದ ನ್ಯಾಯಾಂಗ ಇಲಾಖೆಯ ಕ್ರಮವನ್ನು ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ಸೇವೆಯಿಂದ ತಮ್ಮನ್ನು ವಜಾಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಪ್ರೊಬೇಷನರಿ ಅವಧಿಯಲ್ಲಿದ್ದ ಮಹಿಳಾ ಸಾಫ್ಟ್‌ವೇರ್ ತಂತ್ರಜ್ಞರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ.

ನ್ಯಾಯಾಲಯವು ತನ್ನ ಆದೇಶದಲ್ಲಿ ಮಾತೃತ್ವ ರಜೆಯು ಘನತೆ, ಮಾತೃತ್ವ ಮತ್ತು ಸಾಮಾಜಿಕ ಸಮಾನತೆ ಮೇಲಿನ ಸಾಂವಿಧಾನಿಕ ಬದ್ಧತೆಯಾಗಿದೆ ಎಂಬುದನ್ನು ಒಪ್ಪಿಕೊಂಡಿದೆ. ಆದರೆ, ಈ ಸೌಲಭ್ಯವನ್ನು ಅನಧಿಕೃತ ಗೈರುಹಾಜರಿಗೆ 'ಅಕ್ಷಯ ಪಾತ್ರೆ'ಯನ್ನಾಗಿ ವಿಸ್ತರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಕರ್ನಾಟಕ ಹೈಕೋರ್ಟ್ ಮಹತ್ವದ ಹೇಳಿಕೆ

ಅರ್ಜಿದಾರರು ತಮಗೆ ಕಾನೂನುಬದ್ಧವಾಗಿ ಸಿಗಬೇಕಾದ ಮಾತೃತ್ವ ರಜೆಯನ್ನು ಪೂರ್ಣವಾಗಿ ಬಳಸಿಕೊಂಡ ನಂತರವೂ ಅನುಮತಿಯಿಲ್ಲದೆ ದೀರ್ಘಕಾಲ ಕೆಲಸಕ್ಕೆ ಹಾಜರಾಗದೇ ಇರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ಪೀಠ ತಿಳಿಸಿದೆ. ಮುಂದುವರೆದು ಸರ್ಕಾರಿ ಉದ್ಯೋಗದ ಜವಾಬ್ದಾರಿಯ ಕುರಿತು ಹೈಕೋರ್ಟ್ ಮಹತ್ವದ ಹೇಳಿಕೆ ನೀಡಿದೆ.

'ಸರ್ಕಾರಿ ಉದ್ಯೋಗವು ಅತ್ಯಂತ ಜವಾಬ್ದಾರಿಯುತ ಸ್ಥಾನವಾಗಿದ್ದು, ಕರ್ತವ್ಯನಿಷ್ಠೆ ಮತ್ತು ಶಿಸ್ತನ್ನು ಬಯಸುತ್ತದೆ. ದೇಶದಲ್ಲಿ ಅಸಂಖ್ಯಾತ ಅರ್ಹ ಯುವ ಸಮುದಾಯ ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುವಾಗ, ಸಿಕ್ಕ ಅವಕಾಶವನ್ನು ಉದಾಸೀನ ಮಾಡಬಾರದು. ಮಗು ಹುಟ್ಟಿದೆ ಎಂಬ ಒಂದೇ ಕಾರಣ ನೀಡಿ ಸರ್ಕಾರಿ ಉದ್ಯೋಗದ ಜವಾಬ್ದಾರಿಗಳಿಂದ ಸದಾ ದೂರ ಉಳಿಯಲು ಅವಕಾಶವಿಲ್ಲ,' ಎಂದು ಖಡಕ್ ಆಗಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಅರ್ಜಿದಾರ ಮಹಿಳೆಯು 2019ರ ಜೂನ್ 6ರಂದು ನ್ಯಾಯಾಂಗ ಇಲಾಖೆಯಲ್ಲಿ ಸಾಫ್ಟ್‌ವೇರ್ ತಂತ್ರಜ್ಞರಾಗಿ ಸೇವೆಗೆ ಸೇರಿದ್ದರು. 2023ರ ಜುಲೈ 1ರಂದು ಮಾತೃತ್ವ ರಜೆ ಪಡೆದಿದ್ದ ಅವರು, ಬಳಿಕ ಹಲವು ಕಾರಣ ನೀಡಿ 2024ರ ಆಗಸ್ಟ್ 14ರವರೆಗೆ ರಜೆಯನ್ನು ವಿಸ್ತರಿಸಿಕೊಂಡಿದ್ದರು. ನಂತರ 2024ರ ಸೆಪ್ಟೆಂಬರ್ 25ರಂದು ಕರ್ತವ್ಯಕ್ಕೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿತ್ತು.

ಇದಕ್ಕೆ ಉತ್ತರಿಸಿದ್ದ ಅವರು, ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲದೇ ಇರುವುದು ಹಾಗೂ ಮಗುವಿಗೆ ಪದೇ ಪದೇ ಆರೋಗ್ಯ ಸಮಸ್ಯೆ ಎದುರಾಗುತ್ತಿರುವುದಾಗಿ ತಿಳಿಸಿ ಮತ್ತಷ್ಟು ದಿನ ರಜೆ ಕೋರಿದ್ದರು. ಆದರೆ ರಜಾ ಅವಧಿ ಮುಗಿದರೂ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಅವರು ಹುದ್ದೆಗೆ ಸೂಕ್ತವಲ್ಲ ಎಂದು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಸೇವೆಯಿಂದ ಬಿಡುಗಡೆಗೊಳಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯ ಈಗ ವಜಾಗೊಳಿಸಿದೆ.

ಈ ಮೂಲಕ ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ನ್ಯಾಯಲಯವು, ರಿಜಿಸ್ಟ್ರಾರ್ ಜನರಲ್ ಅವರು ಕೈಗೊಂಡಿದ್ದ ಸೇವೆಯಿಂದ ವಜಾಗೊಳಿಸುವ ನಿರ್ಧಾರ ಕಾನೂನುಬದ್ಧವಾಗಿದೆ ಎಂದು ಎತ್ತಿಹಿಡಿದು ಮಹಿಳೆ ಅರ್ಜಿಯನ್ನು ವಜಾಗೊಳಿಸಿದೆ. ಇದು ಸುಮ್ಮನೆ ಯಾವುದೋ ನೆಪವೊಡ್ಡಿ ರಜೆ ಪಡೆಯುತ್ತಿದ್ದವರಿಗೆ ಸೂಕ್ತ ಪಾಠವಾಗಿದೆ ಅಂದರೆ ತಪ್ಪಾಗಲರಾದು. ಒಟ್ಟಿನಲ್ಲಿ ಹೈಕೋರ್ಟ್‌ನ ಈ ಮಹತ್ವದ ಆದೇಶವರು ನಿಜವಾಗಿಯೂ ರಜೆ ಪಡೆಯಲು ಅನಿವಾರ್ಯತೆ ಇರುವವರಿಗೆ ತುಂಬಾ ಸಹಾಯವಾಗಿದೆ ಅಂತಲೂ ಹೇಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+