Karnataka Rains: ಭಾರೀ ಮಳೆಗೆ ಪ್ರವಾಹ, ಜನ-ಜೀವನ ಅಸ್ತವ್ಯಸ್ತ! ಒಳಚರಂಡಿ ಕಾಮಗಾರಿಗೆ 1,00,00,000 ರೂ...
ಬೆಂಗಳೂರು, ಆಗಸ್ಟ್ 09: ರಾಜ್ಯದಲ್ಲಿ ಕಳೆದ ಕೆಲವು ವಾರಗಳಿಂದ ಭಾರೀ ಮಳೆ ಸುರಿಯುತ್ತಿದೆ. ಈ ಪೈಕಿ ಬೆಳಗಾವಿ ಹಾಗೂ ವಿಜಯಪುರದಲ್ಲಿ ವ್ಯಾಪಕ ಮಳೆ ಆಗಿದೆ. ಮಳೆಗೆ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ತುರ್ತು ಕ್ರಮಕ್ಕೆ ಮುಂದಾಗಿದೆ. ಒಚರಂಡಿ ಕಾಮಗಾರಿಗೆ ತುರ್ತು ಪರಿಹಾರ ನಿಧಿಯಿಂದ 1,00,00,000 ರೂಪಾಯಿ ಬಳಸಿಕೊಳ್ಳುವಂತೆ ಸಚಿವರು ತಿಳಿಸಿದ್ದಾರೆ.
ಹೌದು ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರಿಸಿದೆ. ಈ ಪೈಕಿ ವಿಜಯಪುರದಲ್ಲಿ ಉತ್ತಮ ಮಳೆ ಆಗಿದೆ. ವಿಜಯಪುರ ನಗರದಲ್ಲಿ ಎಡಬಿಡದೆ ಸುರಿದ ಮಳೆಯಿಂದ ಉಂಟಾದ ಅನಾಹುತ ಕುರಿತು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಜೊತೆಗೆ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಶನಿವಾರ ತುರ್ತು ಸಭೆ ನಡೆಸಿದರು. ಈ ವೇಳೆ ಮಹತ್ವದ ಸೂಚನೆ ನೀಡಿದರು.

ಭಾರೀ ಮಳೆಗೆ ವಿಜಯಪುರದಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಕೆಲವೆಡೆ ಓಣಿಗಳು ಕೆರೆಯಂತಾಗಿವೆ. ಮನೆಯಿಂದ ಹೊರ ಬರಲು ಕಷ್ಟವಾಗಿದೆ. ಜನ-ಜಾನುವಾರುಗಳ ಸಾವು, ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿ, ಮನೆಗಳಿಗೆ ಉಂಟಾಗಿರುವ ಧಕ್ಕೆ, ಗ್ರಾಮೀಣ ರಸ್ತೆಗಳ ಹಾನಿ ಆಗಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಜನರ ದೂರುಗಳ ಮಾಹಿತಿ ನೀಡಿದರು. ಸಭೆಯಲ್ಲಿ ಈ ಎಲ್ಲ ವಿಷಯಗಳ ಕುರಿತು ಚರ್ಚಿಸಿ ಶೀಘ್ರ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾಗಿ ಸಚಿವರು ತಿಳಿಸಿದ್ದಾರೆ.
ವಿಜಯಪುರ ಮಹಾನಗರ ಪಾಲಿಕೆಯ ರಾಮನಗರದಲ್ಲಿ ತೀವ್ರ ಹಾನಿಯಾಗಿದೆ. ಆದ್ದರಿಂದ ತುರ್ತು ಪರಿಹಾರ ನಿಧಿಯಿಂದ ₹1 ಕೋಟಿ ಬಳಸಿಕೊಂಡು ಚರಂಡಿ ಕಾಮಗಾರಿ ಕೈಗೊಳ್ಳಲಬೇಕು. ಇಬ್ರಾಹಿಂ ರೋಜಾ ಸಮೀಪ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಿ, ನೀರಿನ ಸರಾಗ ಓಟಕ್ಕೆ ಅವಕಾಶ ಕಲ್ಪಿಸಲು- ಕಾನೂನುಬದ್ಧವಾಗಿ ಪರಿಹಾರ ಪಡೆಯಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದರು.

ವಿಜಯಪುರದ ಇತರೆ ವಾರ್ಡ್ ಗಳ ಸಮಸ್ಯೆ ಪರಿಹಾರಕ್ಕಾಗಿ ಆಗಸ್ಟ್ 11ರಂದು ಪಾಲಿಕೆ ಸದಸ್ಯರ ಸಭೆ ಕರೆಯಲಾಗಿದೆ. ಅಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಸಮಯೋಚಿತ ಕ್ರಮಗಳಿಂದ ವಿಜಯಪುರ ಶೀಘ್ರದಲ್ಲೇ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಅವರು ಹೇಳಿದರು.
ಸವದತ್ತಿ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಭಾರೀ
ಇತ್ತ ಬೆಳಗಾವಿಯಲ್ಲಿ ಶುಕ್ರವಾರ ವ್ಯಾಪಕ ಮಳೆ ಆಗಿದೆ. ಇದರಿಂದಾಗಿ ಪ್ರಸಿದ್ಧ ಸವದತ್ತಿ ಶ್ರೀ ರೇಣುಕಾ ಯಲಮ್ಮ ದೇವಿ ದೇವಸ್ಥಾನ ಅಕ್ಷರಶಃ ಕರೆಯಂತಾಗಿದೆ. ಸುನಾಮಿ ರೀತಿಯಲ್ಲಿ ದೇಗಲ ಆವರಣದಲ್ಲಿ ನಾಲ್ಕೈದು ಅಡಿಯಷ್ಟು ಮಳೆ ನೀರು ಭೋರ್ಗರೆಯಿತು. ಕಸ ಕಡ್ಡಿ ದೇವಸ್ಥಾನ ಸುತ್ತಮುತ್ತ ನಿಂತದ್ದು ಕಂಡು ಬಂತು. ಶನಿವಾರ ಹುಣ್ಣಿಮೆ ಹಿನ್ನೆಲೆ ಸವದತ್ತಿಗೆ ತೆರಳಿದ್ದ ಭಕ್ತರಿಗೆ ಕೊಂಚ ಕಿರಿ ಕಿರಿ ಉಂಟಾಯಿತು. ಗಂಟೆಗಳಿಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಮಳೆ ನೀರು ತುಂಬಿ ಹರಿಯಿತು.
ಪ್ರತಿ ಭಾರಿ ಜೋರು ಮಳೆ ಆದಾಗ ಇದೇ ರೀತಿ ದೇಗುಲ ಆವರಣ, ದೇವಸ್ಥಾನ ಒಳಭಾಗಕ್ಕೂ ನೀರು ನುಗ್ಗುತ್ತದೆ. ಮಾರನೇ ದಿನ ಎಂದಿನಂತೆ ಸ್ವಚ್ಛತಾ ಕಾರ್ಯ ನಡೆಯುತ್ತದೆ. ಇಂದು ಶನಿವಾರ ಸಹ ಸ್ವಚ್ಚತೆಯಲ್ಲಿ ದೇವಸ್ಥಾನ ಸಿಬ್ಬಂದಿ, ಭಕ್ತರು ನಿರತವಾಗಿದ್ದು ಕಂಡು ಬಂತು. ಇದಕ್ಕೆ ಸರ್ಕಾರ ಶಾಸ್ವತ ಪರಿಹಾರ ಕಂಡು ಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಲೇ ಬಂದಿದ್ದಾರೆ. ಸರ್ಕಾರ ಕಿವಿ ಇದ್ದು ಕಿವುಡನಂತೆ ವರ್ತಿಸುತ್ತಿದೆ.
yallammana gudda today after heavy rains Video by Mallanagouda Patil pic.twitter.com/FfRjx3ow7u
— All About Belgaum | Belagavi News (@allaboutbelgaum) August 8, 2025
ರಾಜ್ಯಕ್ಕೆ ಭಾರೀ ಮಳೆ
ಕರ್ನಾಟಕದ ಕರಾವಳಿ ಹಾಗೂ ಒಳನಾಡು ಭಾಗಗಳಲ್ಲಿ ಮುಂದಿನ ಮೂರು ದಿನ ವ್ಯಾಪಕ ಮಳೆ ನಿರೀಕ್ಷೆ ಇದೆ. ಮಲೆನಾಡು ಕರಾವಳಿಗೆ ಭಾರೀ ಮಳೆ ಸುರಿದರೆ, ಒಳನಾಡು ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಶನಿವಾರ ಮುನ್ಸೂಚನೆ ನೀಡಿದೆ.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications