ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾಮಾನ ಇಲಾಖೆಯಿಂದ ಭಾರೀ ಮಳೆ ಮುನ್ನೆಚ್ಚರಿಕೆ

|
Google Oneindia Kannada News

ಬೆಂಗಳೂರು, ಮೇ. 5: ಬೆಳಗ್ಗೆ ಪ್ರಖರವಾದ ಬಿಸಿಲು, ಮಧ್ಯಾಹ್ನ ಮೋಡ ಕವಿದ ವಾತಾವರಣ, ಸಂಜೆ ಗುಡುಗು ಸಹಿತ ಮಳೆ ಇದು ರಾಜ್ಯದ ಪ್ರತಿದಿನದ ಕತೆಯಾಗಿದೆ. ಧರೆಗುರುಳುವ ಮರಗಳು, ಸಂಚಾರ ಅಸ್ತವ್ಯಸ್ತ, ಬೆಳೆ ನಾಶ ಇವು ನಿತ್ಯದ ಪರಿಣಾಮ.

ರಾಜ್ಯದಲ್ಲಿ ಪ್ರತಿದಿನ ಬೀಳುತ್ತಿರುವ ಅಕಾಲಿಕ ಮಳೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಇನ್ನು ಒಂದು ವಾರ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮೇ 5 ರಿಂದ 9 ರವರೆಗೆ ಮಳೆಯಾಗುವ ಸಂಭವವಿದೆ. [ಗಾಳಿ ಮಳೆಗೆ ತತ್ತರಿಸಿದ ಬೆಂಗಳೂರು 'ಮಹಾನಗರ']

rain

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ), ಹಾನಗಲ್ (ಹಾವೇರಿ) ಮುಂಡಗೋಡು, ಶಿರಸಿ, (ಉತ್ತರ ಕನ್ನಡ) ಶಿಗ್ಗಾಂವ್, ಬಾಗಲಕೋಟೆ, ಭಾಗಮಂಡಲ(ಕೊಡಗು), ಬೆಂಗಳೂರು ಸೇರಿದಂತೆ ಹಲವೆಡೆ ಸೋಮವಾರ ಮಳೆಯಾಗಿದೆ. ದಕ್ಷಿಣ ಒಳನಾಡಿನ ಹಲವೆಡೆ ಮಳೆ ಮುಂದುವರಿಯಲಿದೆ.[ಶುರುವಾಯಿತು ಮಳೆ, ಬೆಂಗಳೂರಲ್ಲಿ ಆತಂಕದ ಹೊಳೆ]

ಹುಬ್ಬಳ್ಳಿಯಲ್ಲಿ ಸೋಮವಾರ ಸಂಜೆ ಆಲಿಕಲ್ಲು ಸಮೇತ ಸುಮಾರು ಒಂದು ತಾಸು ರಭಸದ ಮಳೆಯಾಗಿದೆ. ಹೊಸೂರು, ದೇಶಪಾಂಡೆ ನಗರ, ಆನಂದ ನಗರ ಮುಂತಾದೆಡೆಗೆ ಮುಖ್ಯ ರಸ್ತೆಗಳು ಜಲಾವೃತವಾಗಿ, ವಾಹನ ಸಂಚಾರಕ್ಕ ಅಡಚಣೆಯಾಗಿತ್ತು. ಕೆಲವೆಡೆ ಮರಗಳು ಉರುಳಿಬಿದ್ದಿವೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಮುದೇನೂರು ಗ್ರಾಮದಲ್ಲಿ ಸೋಮವಾರ ಸಂಜೆ ಬಿರುಗಾಳಿ ಸಹಿತ ಮಳೆ ಸುರಿದಿದ್ದರಿಂದ ಹತ್ತಾರು ಮರಗಳು ಧರೆಗೆ ಉರುಳಿದ್ದವು.[ಕರ್ನಾಟಕದಲ್ಲಿ ಅಕಾಲಿಕ ಮಳೆ, ಯಾಕೆ ಹೀಗೆ?]

rain 1

ತಾಪಮಾನ ಏರುಪೇರು
ತಾಪಮಾನ ಏರಿಕೆ ಮತ್ತು ಇಳಿಕೆ ಮಳೆಗೆ ಮೂಲ ಕಾರಣವಾಗಿದ್ದರೆ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ನೇಪಾಳ ಮತ್ತು ಅಂಡಮಾನ್ ನಿಕೊಬಾರ್ ಭೂಕಂಪಗಳು ರಾಜ್ಯದ ಮೇಲೆ ಪರಿಣಾಮ ಬೀರದಿದ್ದರೂ ಸಮುದ್ರ ತೀರದಲ್ಲಿನ ವಾತಾವರಣದ ಬದಲಾವಣೆಗೆ ಕಾರಣವಾಗಿದೆ.

ಬೆಂಗಳೂರು ಟ್ರಾಫಿಕ್ ಪೊಲೀಸ್ ಸಹ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

English summary
Heavy rainfall warning from IMD (Indian Meteorological Department) between 5th May to 9th May in Bengaluru city & other part of the Karnataka also. Rain would occur at many places over South Interior Karnataka and at a few paces over Coastal Karnataka and North Interior Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X