Karnataka Heatwave: ಅಕ್ಟೋಬರ್‌ನಲ್ಲೇ ಬೇಸಿಗೆಯ ಬಿಸಿಲು! ಕಲಬುರಗಿ, ಹಾವೇರಿ, ಮೈಸೂರಲ್ಲಿ ಅಧಿಕ ತಾಪಮಾನ

ಬೆಂಗಳೂರು: ಮುಂಗಾರು ಮಳೆ ಅಂತ್ಯಗೊಂಡಿದ್ದು, ಅರ್ಧ ರಾಜ್ಯದಲ್ಲಿ ಹಿಂಗಾರು ಮಳೆ ಸಕ್ರಿಯವಾಗಿದೆ. ಆದರೆ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಗಾಲ ಮುನ್ನವೇ ಮೈಸುಡುವ ಬಿಸಿಲು ದಾಖಲಾಗಿದೆ. ಕಲಬುರಗಿ, ಹಾವೇರಿಯಲ್ಲಿ ದಾಖಲೆಯ ತಾಪಮಾನ ದಾಖಲಾಗಿದೆ. ದಾವಣಗೆರೆ, ವಿಜಯಪುರ ಅಷ್ಟೇ ಏಕೆ ಮೈಸೂರಲ್ಲೂ ಭರ್ಜರಿ ಉಷ್ಣಾಂಶ ಕಂಡು ಬಂದಿದ್ದು, ಇದು ಸಾಮಾನ್ಯಕ್ಕಿಂತ ಸುಮಾರು 3 ಡಿಗ್ರಿ ಸೆಲ್ಸಿಯಸ್ ಅಧಿಕ ತಾಪಮಾನವಾಗಿದೆ. ತೇವಾಂಶ ಕಡಿಮೆ ಆಗಿದ್ದು, ಎಲ್ಲೆಡೆ ಒಣಹವೆ, ಶಾಖದ ಅಲೆಯು ನಿರ್ಮಾಣವಾಗಿದೆ.

ಕಳೆದ ನಾಲ್ಕು ತಿಂಗಳಿನಲ್ಲಿ ಪ್ರತಿ ತಿಂಗಳು ಮಳೆ ಕೊರತೆ (ಶೇ.35) ಉಂಟಾಗಿದೆ. ಉತ್ತಮ ಹಿಂಗಾರು ಮಳೆ ನಿರೀಕ್ಷೆ ಇರುವ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಅತೀ ಶಾಖದ ವಾತಾವರಣ ಜನರನ್ನು ಹೈರಾಣು ಮಾಡಿದೆ. ಅಕ್ಟೋಬರ್ ಮೊದಲ ವಾರ ವಾಡಿಕೆಗಿಂತ ಹೆಚ್ಚಿನ ತಾಪಮಾನ ಕಂಡು ಬಂದಿದೆ.

Karnataka Heatwave Alert

ಕಲಬುರಗಿ, ಹಾವೇರಿಯಲ್ಲಿ ದಾಖಲೆ ತಾಪಮಾನ

ಬೇಸಿಗೆಯಲ್ಲಿ ದಾಖಲಾಗುವಂತೆ ಮಳೆಗಾಲದಲ್ಲೇ ಕಲಬುರಗಿಯಲ್ಲಿ ಇಂದು ಮಂಗಳವಾರ (ಅಕ್ಟೋಬರ್ 6) ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ತಾಪಮಾನ, ಹಾವೇರಿಯಲ್ಲಿ 35 ಡಿಗ್ರಿ ಸೆಲ್ಸಿಯಸ್, ರಾಯಚೂರು 35 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದ್ದು, ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾಣವಾಗಿದೆ.

ಈ ಜಿಲ್ಲೆಗಳಲ್ಲಿ ಶಾಖದ ಅಲೆ! ಜನ ತತ್ತರ

ಇನ್ನೂ ಬೀದರ್, ವಿಜಯಪುರ ಜಿಲ್ಲೆಗಳಲ್ಲಿ ತಲಾ 34 ಡಿಗ್ರಿ ಸೆಲ್ಸಿಯಸ್, ಅದೇ ರೀತಿ ಕೊಪ್ಪಳ, ಗದಗ, ಧಾರವಾಡ, ಚಿಂತಾಮಣಿ, ದಾವಣಗೆರೆ, ಮೈಸೂರು ಜಿಲ್ಲೆಗಳಲ್ಲಿ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 30 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ಬಿಸಿಲು ದಾಖಲಾಗಿದೆ. ಈ ಪೈಕಿ ಉತ್ತರ ಒಳನಾಡಿನಲ್ಲಿ ತೀವ್ರ ಶಾಖ, ಸೆಖೆ ಉಂಟಾಗಿದ್ದು, ಜನರು ತತ್ತರಿಸುತ್ತಿದ್ದಾರೆ. ಕಳೆದ ವಾರದ ಬಂದ ಉತ್ತಮ ಮಳೆಗೆ ಹಿಂಗಾರು ಹಂಗಾಮು ಬಿತ್ತನೆ ಸಹ ಶುರುವಾಗಿದೆ. ಬಿತ್ತನೆ ಮಾಡಿದ ರೈತರು ಈ ಒಣಹವೆ, ಅಧಿಕ ಬಿಸಿಲು ಕಂಡು ಆತಂಕದಲ್ಲಿದ್ದಾರೆ.

ಕರಾವಳಿಯಲ್ಲಿ ಹೇಗಿದೆ ವಾತಾವರಣ?

ಕರಾವಳಿ ಭಾಗದಲ್ಲಿ ವಾತಾವರಣ ಸಾಮಾನ್ಯವಾಗಿದೆ. ಇಲ್ಲಿ ಗರಿಷ್ಠ ತಾಪಮಾನ 29-30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮದ್ದೂರು, ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗ, ಚಾಮರಾಜನಗರ, ತುಮಕೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ಅಕ್ಟೋಬರ್ ಮೊದಲ ವಾರವೇ ಹಿಂಗಾರು ಇಲ್ಲಿ ಸಕ್ರಿಯವಾಗಿದೆ. ಮುಂದಿನ ಕೆಲವು ದಿನಗಳು ಇಲ್ಲಿ ಮಳೆ ಆಗಲಿದೆ.

ಉತ್ತಮ ಹಿಂಗಾರು, ಅಧಿಕ ಬಿಸಿಲು

2026ರಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಆದರೆ ಉತ್ತಮ ಹಿಂಗಾರು ಮಳೆ, ವಾಡಿಕೆಯಷ್ಟು ಮಳೆ ಆಗುವ ಸಾಧ್ಯತೆ ಇದೆ. ಇದರ ನಡುವೆ ಆಗಾಗ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ತೀವ್ರ ಬಿಸಿಲು, ಒಣ ಹವೆ ಉಂಟಾಗಲಿದೆ ಎಂದು ಐಎಂಡಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+