ಕರ್ನಾಟಕಕ್ಕೆ 5 ಸಚಿವ ಸ್ಥಾನ , ಕೆಲವರಿಕೆ ಖಾತೆ ವಿಚಾರದಲ್ಲಿ ನಿರಾಸೆ?: ವಿ.ಸೋಮಣ್ಣ ಏನಂದ್ರು?

ಬೆಂಗಳೂರು, ಜೂನ್‌ 14: ಮೋದಿ ಕ್ಯಾಬಿನೆಟ್‌ ನಲ್ಲಿ ಪ್ರಭಾವಿ ಖಾತೆ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದ ಹಲವು ಮಂದಿ ನಾಯಕರು ಅಸಮಾಧಾನಗೊಂಡಿದ್ದಾರೆ. ನರೇಂದ್ರ ಮೋದಿ ಅವರ ಸಚಿವ ಸಂಪುಟ ದಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರಿಗೆ ಕೃಷಿ ಖಾತೆ ಸಿಗಲಿದೆ ಎಂಬ ಮಾತುಗಳು ಕೇಳಿಬಂದಿದ್ದು, ಈ ಬಗ್ಗೆ ಕೇಂದ್ರ ಸಚಿವ ವಿ ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಕೇಂದ್ರ ಸಚಿವ ವಿ ಸೋಮಣ್ಣ ಮಾತನಾಡಿ, ನಮ್ಮ ಜವಾಬ್ದಾರಿ ಸ್ವೀಕರಿಸಿದ್ದು, ಹಲವಾರು ಸಭೆಗಳನ್ನು ಮಾಡುತ್ತಿದ್ದೇನೆ. ನರೇಂದ್ರ ಮೋದಿಜೀ ಅವರು ದೇಶದ ಅಭಿವೃದ್ಧಿಗಾಗಿ ಕರ್ನಾಟಕಕ್ಕೆ 5 ಸ್ಥಾನಗಳನ್ನು ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರು ತಿಳಿಸಿದರು.

Karnataka Has Been Given 5 Seats For The Development Of The Country Says V Somanna

ರಾಷ್ಟ್ರದ ಅಭಿವೃದ್ಧಿಯ ಹರಿಕಾರರು, ವಿಶ್ವದ ಭೂಪಟದಲ್ಲಿ ಭಾರತವನ್ನು ಮುಂದುವರಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪ ತೊಟ್ಟಿರುವ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ನನಗೆ ಎರಡು ಜವಾಬ್ದಾರಿ ನೀಡಿದ್ದಾರೆ. ನಾನು ಅದನ್ನು ಸಮನಾಗಿ ಸ್ವೀಕಾರ ಮಾಡುವೆ ಎಂದು ತಿಳಿಸಿದರು. ಕರ್ನಾಟಕದ ಜನತೆಯ ಪರವಾಗಿ ಪ್ರಧಾನಿಯವರಿಗೆ ಧನ್ಯವಾದಗಳನ್ನು ತಿಳಿಸಿದರು. ಬೆಂಗಳೂರು, ರಾಜ್ಯದ ಅಭಿವೃದ್ಧಿ ಸಂಬಂಧ ಸಮಗ್ರ ಮಾಹಿತಿ ಪಡೆದು ಮತ್ತೆ ಮಾಧ್ಯಮ ಪ್ರತಿನಿಧಿಗಳನ್ನು ಭೇಟಿ ಮಾಡುವುದಾಗಿ ಹೇಳಿದರು.

ಇದು ಹಗೆತನದ ರಾಜಕೀಯವಲ್ಲವೇ?- ಸಿಎಂಗೆ ಛಲವಾದಿ ಪ್ರಶ್ನೆ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿಚಾರದಲ್ಲಿ ರಾಜ್ಯ ಸರಕಾರವು ಹಗೆತನದ ರಾಜಕೀಯ ಮಾಡುತ್ತಿದೆ. ಇದು ಹಗೆತನದ ರಾಜಕಾರಣ ಅಲ್ಲವೇ ಎಂದು ಮುಖ್ಯಮಂತ್ರಿಯವರು ಉತ್ತರ ಕೊಡಬೇಕು ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ಹಗೆತನದ ರಾಜಕೀಯ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಯವರು ಭಾಷಣದಲ್ಲಿ ಹೇಳಿದ್ದರು. ಆದರೆ, ಇದೀಗ ಹಗೆತನದ ರಾಜಕಾರಣ ಮಾಡಿದ್ದು, ರಾಜ್ಯದ ಜನರು ಇದನ್ನು ಪ್ರಶ್ನೆ ಮಾಡಲಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೋಕ್ಸೋ ಪ್ರಕರಣ ದಾಖಲಿಸಿ 4 ತಿಂಗಳ ಕಾಲ ನೀವೆಲ್ಲಿ ಮಲಗಿದ್ದಿರಿ ಎಂದೂ ಜನರು ಕೇಳುವಂತಾಗಿದೆ. ಆರಂಭದಲ್ಲಿ ಈ ಕೇಸಿನಲ್ಲಿ ಹುರುಳಿಲ್ಲ ಎಂದು ಗೃಹ ಸಚಿವರು ಹೇಳಿದ್ದರಲ್ಲವೇ ಎಂದು ಕೇಳಿದ್ದಾರೆ.

ರಾಹುಲ್ ಗಾಂಧಿಯವರು ಕೋರ್ಟಿಗೆ ಬಂದ ಕಾರಣ ಬಿಜೆಪಿಯವರನ್ನು ಕೋರ್ಟಿಗೆ ತಂದು ನಿಲ್ಲಿಸಬೇಕೆಂಬ ಕಾಂಗ್ರೆಸ್ ಪಕ್ಷದ ದುರುದ್ದೇಶವು ಈಗ ಜಗಜ್ಜಾಹೀರಾಗಿದೆ. ಅದನ್ನು ಬಿಜೆಪಿಯ ನಾವೆಲ್ಲರೂ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ. ನಮ್ಮ ಪಕ್ಷದ ಹಿರಿಯರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿಚಾರದಲ್ಲಿ ಕೋರ್ಟಿನಿಂದ ಬಂದ ಆದೇಶವನ್ನು ನಾವು ಗೌರವಿಸುತ್ತೇವೆ.

ಆದರೆ, ಇದು ಒಂದು ರಾಜಕೀಯ ಷಡ್ಯಂತ್ರದ ಅಥವಾ ರಾಜಕೀಯ ಪ್ರೇರಿತ ವಿಚಾರ ಎಂದು ಟೀಕಿಸಿದ್ದಾರೆ. ಫೆಬ್ರವರಿ 2ರಂದು ಘಟನೆ ನಡೆದಿದೆ ಎಂದು ಮಾರ್ಚ್‍ನಲ್ಲಿ ಕೇಸ್ ಕೊಟ್ಟಿದ್ದು, ಪ್ರಕರಣ ದಾಖಲಾಗಿದೆ. ಆಗ, ಯಡಿಯೂರಪ್ಪನವರು ಪೊಲೀಸ್ ಠಾಣೆಗೆ ತೆರಳಿ ಹೇಳಿಕೆ ನೀಡುವುದಾಗಿ ತಿಳಿಸಿದ್ದರು. ನಂತರ ಪೊಲೀಸಿನವರು ಬರುವ ಅವಶ್ಯಕತೆ ಇಲ್ಲ ಎಂದಿದ್ದರು. ಮನೆಯಲ್ಲಿ ಹೇಳಿಕೆಯನ್ನೂ ಪಡೆದಿದ್ದರು ಎಂದಿದ್ದಾರೆ.

ಈ ಕೇಸಿನಲ್ಲಿ ಸತ್ಯ- ಸತ್ವ ಇಲ್ಲವೆಂದು ಸಾಬೀತಾಗಿದೆ. ಅದಾದ ಬಳಿಕ ಮಾನ್ಯ ಗೃಹಸಚಿವರು, ಕೇಸು ದಾಖಲಿಸಿದವರು ಮಾನಸಿಕ ಅಸ್ವಸ್ಥೆ ಇದ್ದಾರೆ. ಐಎಎಸ್, ಐಪಿಎಸ್ ಹಾಗೂ ರಾಜಕಾರಣಿಗಳ ಮೇಲೆ 60ಕ್ಕೂ ಹೆಚ್ಚು ಕೇಸು ದಾಖಲಿಸಿದ್ದಾರೆ. ಆದ್ದರಿಂದ ಆ ಕೇಸಿಗೆ ಮಹತ್ವ ಇಲ್ಲ ಎಂಬ ಮಾತನ್ನು ಹೇಳಿದ್ದರು ಎಂದು ಅವರು ಗಮನ ಸೆಳೆದಿದ್ದಾರೆ.

ಸರಕಾರವೇ ಒಮ್ಮೆ ಹೇಳಿದ್ದರಿಂದ ಈ ಕೇಸಿಗೆ ಮಹತ್ವ ಇಲ್ಲ. ಅದಾದ ಬಳಿಕ ಯಡಿಯೂರಪ್ಪನವರು ಹೇಳಿಕೆ ಕೊಡಲು ಬರುವುದಾಗಿ ಅನೇಕ ಬಾರಿ ಹೇಳಿದರೂ ಪೊಲೀಸರು, ಯಾವುದೇ ಅವಶ್ಯಕತೆ ಇಲ್ಲ; ಧ್ವನಿ ಸ್ಯಾಂಪಲ್ ಕೊಡಿ ಸಾಕು ಎಂದಿದ್ದರು ಎಂದು ವಿವರಿಸಿದ್ದಾರೆ. ಬಳಿಕ ಏಪ್ರಿಲ್‍ನಲ್ಲಿ ಧ್ವನಿ ಸ್ಯಾಂಪಲನ್ನೂ ಪಡೆದಿದ್ದರು ಎಂದಿದ್ದಾರೆ.

ಕೇಸಿನ ಬಿ ರಿಪೋರ್ಟ್ ನಿರೀಕ್ಷೆಯಲ್ಲಿತ್ತು. ಆದರೆ, ಕಳೆದೆರಡು ಮೂರು ದಿನಗಳಲ್ಲಿ ದೊಡ್ಡ ಬೆಳವಣಿಗೆ ಆಗಿದೆ. ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ವಾರ ಕೋರ್ಟ್ ಮೆಟ್ಟಿಲು ಹತ್ತುವ ಪರಿಸ್ಥಿತಿ ಬಂದಿದೆ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಮ್ಮ ಪಕ್ಷದ ವಿರುದ್ಧ ಶೇ 40 ಕಮೀಷನ್ ಪಡೆಯುವ ವಿಚಾರದಲ್ಲಿ ಕಾಂಗ್ರೆಸ್ ಆಪಾದನೆ ಮಾಡಿದ್ದಲ್ಲದೇ ಪೋಸ್ಟರ್ ಅಂಟಿಸಿದ್ದರು. ಅದನ್ನು ಪ್ರಶ್ನಿಸಿ ನಮ್ಮ ಕಾರ್ಯಕರ್ತರು ಕೋರ್ಟಿಗೆ ಹೋಗಿದ್ದರು. ತನಿಖೆಗಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯನ್ನು ಕರೆಸಿದ್ದರು. ಇದರಲ್ಲಿ ಎಐಸಿಸಿ ಹಿಂದಿನ ಅಧ್ಯಕ್ಷ, ಈಗಿನ ಸಂಸದ ರಾಹುಲ್ ಗಾಂಧಿಯವರ ಹೆಸರೂ ಇತ್ತು ಎಂದು ವಿವರಿಸಿದ್ದಾರೆ.

ರಾಹುಲ್ ಗಾಂಧಿಯವರು ಇಲ್ಲಿ ಬಂದು ಕೋರ್ಟ್ ಕಟೆಕಟೆಯಲ್ಲಿ ನಿಂತು ವಾಪಸ್ ಹೋದ ಬಳಿಕ ಇವರೆಲ್ಲರೂ ಬಿಜೆಪಿ ಮೇಲೆ ಮುಯ್ಯಿಗೆ ಮುಯ್ಯಿ- ಹಗೆತನ ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಇದೇ ಉದ್ದೇಶದಿಂದ ಸುರ್ಜೇವಾಲಾ ಅವರ ಆದೇಶದಡಿ ಮಾನ್ಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು ಸೇರಿ ಈ ಷಡ್ಯಂತ್ರ ಮಾಡಿದ್ದಾಗಿ ಆರೋಪಿಸಿದ್ದಾರೆ.

ಕೇಸು ಕೊಟ್ಟವರು ತೀರಿಕೊಂಡಿದ್ದಾರೆ. ಕೇಸು ಕೊಟ್ಟ ಮಹಿಳೆಯ ಮಗನ ದೂರು ಪಡೆದು ತಕ್ಷಣಕ್ಕೆ ಕೋರ್ಟಿಗೆ ಹೋದ ಪೊಲೀಸರು ಹೀಗೆ ಮಾಡಿದ್ದಾರೆ. ಯಡಿಯೂರಪ್ಪನವರು ದೆಹಲಿಯಲ್ಲಿ ಇದ್ದು, ಎರಡು ದಿನಗಳಲ್ಲಿ ಬರುವುದಾಗಿ ಹೇಳಿದ್ದರೂ ಅರ್ಜೆನ್ಸಿ ಮಾಡಿದ್ದಾರೆ. 4 ತಿಂಗಳು ಇಲ್ಲದ ಅರ್ಜೆನ್ಸಿ ಕಾಂಗ್ರೆಸ್ಸಿಗೆ ಇವತ್ತು ಒಂದೇ ದಿನ ಬಂದಿದೆ; ಇವತ್ತು ಜಾಮೀನುರಹಿತ ವಾರಂಟ್ ಪಡೆದು ಅರೆಸ್ಟ್ ಮಾಡಲು ಹೋಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+