Tour Package: ರಾಜ್ಯ ಸರ್ಕಾರದಿಂದ ಟೂರ್ ಪ್ಯಾಕೇಜ್! ಧಾರ್ಮಿಕ ಸ್ಥಳ, ಜಲಪಾತ ಪ್ರವಾಸಿಗರಿಗೆ ಇಲ್ಲಿದೆ ಗುಡ್ ನ್ಯೂಸ್
ಬೆಂಗಳೂರು, ಜುಲೈ 07: ಮುಂಗಾರು ಮಳೆ ಜೋರಾಗಿದೆ. ಭಾರೀ ಮಳೆಗೆ ನದಿಗಳು, ಜಲಪಾತಗಳು ಧುಮ್ಮಿಕ್ಕುತ್ತಿವೆ. ಜಲಪಾತಗಳ ಭೋರ್ಗರೆತ ಕಣ್ತುಂಬಿಕೊಳ್ಳಲು, ಧಾರ್ಮಿಕ ಹಾಗೂ ಇತರ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇದೀಗ ಕರ್ನಾಟಕ ಜಲಪಾತಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲು ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ಕ್ಯುರೇಟೆಡ್ ಟೂರ್ ಪ್ಯಾಕೇಜ್ ಆರಂಭಿಸಿದೆ. ಅದಕ್ಕಾಗಿ ಸರ್ಕಾರವು ಖಾಸಗಿ ಅಡ್ವೆಂಚರ್ ಟೂರ್ ಗ್ರೂಪ್‌ಗಳ ಪಾಲುದಾರಿಕೆ ಹೊಂದಿದೆ.
ಸರ್ಕಾರದ ದತ್ತಿ ಇಲಾಖೆ, ಕಂದಾಯ, ನೀರಾವರಿ ಹಾಗೂ ಅರಣ್ಯ ಇಲಾಖೆ ಸಹಕಾರದಲ್ಲಿ ರಾಜ್ಯದ ವಿವಿಧ ಜಲಪಾತಗಳು, ಧಾರ್ಮಿಕ ಮತ್ತು ವನ್ಯಜೀವಿ ಪ್ರವಾಸಗಳನ್ನು ಆರಂಭಿಸುತ್ತಿದೆ. ಈ ಟೂರ್ ಪ್ಯಾಕೇಜ್‌ನಲ್ಲಿ ಖಾಸಗಿ ಟೂರ್ ಸಂಸ್ಥೆಗಳು, ಅಡ್ವೆಂಚರ್ ಗುಂಪುಗಳನ್ನು ಒಳಗೊಂಡಿರಲಿವೆ. ಪ್ರವಾಸ ಭಾಗವಾಗಿ ಜಲಪಾತ, ಧಾರ್ಮಿಕ ಮತ್ತು ಇತರ ಪ್ರವಾಸಿ ಸ್ಥಳಗಳ ಭೇಟಿಗಾಗಿ ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಗೋಕಾಕ್, ಬೆಳಗಾವಿ, ಹಾಸನ, ಚಿಕ್ಕಮಗಳೂರು ಹಾಗೂ ಪಶ್ಚಿಮ ಘಟ್ಟದ ಕೆಲವು ಸ್ಥಳಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು TNIE ವರದಿ ಮಾಡಿದೆ.

ಕರ್ನಾಟಕ ಸರ್ಕಾರದ ಈ ಪ್ರವಾಸದ ಪ್ಯಾಕೇಜ್ ಮೂಲಕ ಪ್ರವಾಸಕ್ಕೆ ಬರುವವರು ಪ್ರಯಾಣ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ಆಯ್ಕೆಯಲ್ಲಿ ಮೂರು ಪ್ರವಾಸಿ ಸ್ಥಳಗಳು ಇರಬೇಕು. ಹೆಣ್ಣು ಮಕ್ಕಳು, ವಿದ್ಯಾರ್ಥಿಗಳಿಗೆಂದು ಪ್ರತ್ಯೇಕ ಟೂರ್ ಆಯೋಜಿಸಲು ತಿರ್ಮಾನಿಸಲಾಗಿದೆ. ಮಹಿಳೆಯರ ಗುಂಪುಗಳು, ಕಾಲೇಜು ವಿದ್ಯಾರ್ಥಿಗಳು ಇಲ್ಲವೇ ಕಾರ್ಪೊರೇಟ್ ಉದ್ಯೋಗಿಗಳು ಪ್ರವಾಸಕ್ಕೆ ತೆರಳುವುದು ಹೆಚ್ಚಾಗಿದೆ. ಹೀಗಾಗಿ ವಯಸ್ಸು, ಪುರುಷ, ಮಹಿಳೆಯರಿಗೆ ಪ್ರತ್ಯೇಕ ಪ್ರವಾಸ ಪ್ಯಾಕೇಜ್ ಸಹ ಲಭ್ಯ ಇವೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಂದು ವಾರದ KSRTC ಟೂರ್ ಪ್ಯಾಕೇಜ್...
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRT) ಈವರೆಗೆ ಮಂಡ್ಯ ಜಿಲ್ಲೆಯ ಗಗನಚುಕ್ಕಿ-ಬರಚುಕ್ಕಿ ಜಲಪಾತ, ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ ಅಥವಾ ಇತರ ಅಂತಹ ಸ್ಥಳಗಳಿಗೆ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದವು. ಇದು ಒಂದು ಇಲ್ಲವೇ ಮೂರು ದಿನಗಳ ಟ್ರಿಪ್ ಆಗಿದ್ದು, ಇದೀಗ ಅದನ್ನು ಒಂದು ವಾರದ ಇಲ್ಲವ ವಾರಾಂತ್ಯದ 'ಕ್ಯುರೇಟೆಡ್' ಪ್ರವಾಸಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸರ್ಕಾರ ಖಾಸಗಿ ಪ್ರವಾಸಿ ಗುಂಪು, ಅಡ್ವೆಂಚರ್ ಗುಂಪುಗಳನ್ನು ಆಹ್ವಾನಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಿದೆ. ಅವರು ಪ್ರವಾಸ ಭಾಗವಾಗುವ ಜೊತೆಗೆ ಇದುವರೆಗೂ ನೋಡಿದ ಮತ್ತು ನೋಡಿರದ ಪ್ರೇಕ್ಷಣಿಯ ಸ್ಥಳಗಳನ್ನು ಪಟ್ಟಿ ಮಾಡಲಾಗುತ್ತದೆ.
ಜೂನ್ ನಲ್ಲಿ ಮಳೆಗಾಳ ಆಂಭವಾಗುತ್ತಿದ್ದಂತೆ ಮಾನ್ಸೂನ್ ಪ್ರವಾಸಗಳನ್ನು ಜನ ಆರಂಭಿಸುತ್ತಾರೆ. ಸದ್ಯ ಜುಲೈ ತಿಂಗಳಾಗಿದ್ದು, ಪ್ರವಾಸ ಆರಂಭವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಕೆ.ವಿ. ರಾಜೇಂದ್ರ ಅವರು, ಈಗಾಗಲೇ ವಿಳಂಬವಾಗಿದೆ. ಮುಂದಿನ ಎರಡೇ ವಾರದಲ್ಲಿ ಪ್ರವಾರ ಆರಂಭಿಸಲಾಗುವುದು. ಮುಂಗಾರು ಮಳೆ ಋತುಮಾನವಾಗಿರುವ ಮುಂಗಾರು ಸ್ಥಿರವಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ, ವಿವಿಧ ಟೂರ್ ಪ್ಯಾಕೇಜ್‌ಗಳಲ್ಲಿ ಮೂರು ದಿನ, ಒಂದು ವಾರ, ವಸತಿ, ಪ್ರತ್ಯೇಕ ಗುಂಪುಗಳ ಆಧಾರದಲ್ಲಿ ಪ್ಯಾಕೇಜ್ ಘೋಷಿಸಲಾಗುವದು ಎಂದು ಹೇಳಿದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications