ಶಿವಮೊಗ್ಗ, ಗುಲ್ಬರ್ಗಕ್ಕೆ ಹೊಸ ಜಿಲ್ಲಾಧಿಕಾರಿಗಳು
ಬೆಂಗಳೂರು, ಸೆ. 10 : ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಸರ್ಕಾರ ಮತ್ತೊಮ್ಮೆ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಜಿಲ್ಲಾಧಿಕಾರಿ, ಸಿಇಓ, ಉಪವಿಭಾಗಾಧಿಕಾರಿ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸೇರಿ 21 ಅಧಿಕಾರಿಗಳನ್ನು ಮಂಗಳವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಇಲ್ಲಿದೆ
* ಎನ್.ವಿ. ಪ್ರಸಾದ್ - ಹೆಚ್ಚುವರಿ ಆಯುಕ್ತ (ಕಲ್ಯಾಣ) ಬಿಬಿಎಂಪಿ
* ವಿಪುಲ್ ಬನ್ಸಾಲ್ - ಜಿಲ್ಲಾಧಿಕಾರಿ ಗುಲ್ಬರ್ಗ
* ವಿ.ಪಿ. ಇಕ್ಕೇರಿ - ಜಿಲ್ಲಾಧಿಕಾರಿ, ಶಿವಮೊಗ್ಗ
* ಉಜ್ವಲ್ ಕುಮಾರ್ ಘೋಷ್ - ಜಿಲ್ಲಾಧಿಕಾರಿ, ಉತ್ತರಕನ್ನಡ
* ಸಿ.ಪಿ. ಶೈಲಜಾ - ಸಿಇಓ, ಬೆಂಗಳೂರು ಗ್ರಾಮಾಂತರ.
* ಎಂ.ಕೆ. ಶ್ರೀರಂಗಯ್ಯ- ಆಡಳಿತಾಧಿಕಾರಿ, ಭದ್ರ ಕಾಡಾ, ಶಿವಮೊಗ್ಗ [ಆರು ಐಎಎಸ್ ಅಧಿಕಾರಿಗಳ ವರ್ಗಾವರ್ಗಿ]

ಉಪ ವಿಭಾಗಾಧಿಕಾರಿಗಳು
* ರಂಗಪ್ರಿಯ - ಉಪವಿಭಾಗಾಧಿಕಾರಿ, ಕೋಲಾರ
* ಎಂ. ಸುಂದರೇಶ ಬಾಬು - ಉಪವಿಭಾಗಾಧಿಕಾರಿ, ಧಾರವಾಡ
* ಪವನಕುಮಾರ್ ಮಳಪತಿ-ಉಪವಿಭಾಗಾಧಿಕಾರಿ, ಶಿರಸಿ
* ಚಾರುಲತಾ ಸೋಮಲ್ - ಉಪವಿಭಾಗಾಧಿಕಾರಿ, ಸಕಲೇಶಪುರ
* ಕೆ. ರಾಕೇಶ ಕುಮಾರ್ - ಉಪವಿಭಾಗಾಧಿಕಾರಿ, ಜಮಖಂಡಿ
* ಆರ್. ರಾಮಚಂದ್ರನ್ - ಉಪವಿಭಾಗಾಧಿಕಾರಿ, ಬೈಲಹೊಂಗಲ
* ಸುರಳ್ಕರ್ ವಿಕಾಸ್ ಕಿಶೋರ್ - ಉಪವಿಭಾಗಾಧಿಕಾರಿ, ಬಾಗಲಕೋಟ
* ನಿತೇಶ್ ಪಾಟೀಲ್ - ಉಪವಿಭಾಗಾಧಿಕಾರಿ, ಸಾಗರ
ಹುದ್ದೆಯ ನಿರೀಕ್ಷೆಯಲ್ಲಿದ್ದ ಐವರು ಐಪಿಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡಲಾಗಿದೆ
* ನಿಖಂ ಪ್ರಕಾಶ್ ಅಮ್ರಿತ್ - ಎಎಸ್‌ಪಿ, ನಂಜನಗೂಡು ಉಪವಿಭಾಗ
* ಭೀಮ ಶಂಕರ್ ಗುಳೇದ್ - ಎಎಸ್‌ಪಿ, ಹೊಳನರಸೀಪುರ ಉಪವಿಭಾಗ
* ರಾಹುಲ್ ಕುಮಾರ್ ಶಹಪುರ್ ವಾಡ್ - ಎಎಸ್‌ಪಿ, ಬಂಟ್ವಾಳ ಉಪವಿಭಾಗ
* ಧರ್ಮೇಂದರ್ ಕುಮಾರ್ ಮೀನ - ಎಎಸ್‌ಪಿ, ಹುಮ್ನಾಬಾದ್ ಉಪವಿಭಾಗ
* ಜಿ. ರಾಧಿಕಾ - ಎಎಸ್‌ಪಿ, ಚಿಕ್ಕಬಳ್ಳಾಪುರ ಉಪವಿಭಾಗ












Click it and Unblock the Notifications