• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿನಿಮಾ, ಧಾರಾವಾಹಿ ಶೂಟಿಂಗ್ ಆರಂಭಿಸಲು ತೀರ್ಮಾನ

|

ಬೆಂಗಳೂರು, ಮೇ 04: ಲಾಕ್‌ಡೌನ್‌ನಿಂದಾಗಿ ಸಿನೆಮಾ, ಧಾರಾವಾಹಿಗಳ ಶೂಟಿಂಗ್ ಆಗುತ್ತಿಲ್ಲ. ಕಳೆದ ಸುಮಾರು 40 ದಿನಗಳಿಂದ ಧಾರಾವಾಹಿಗಳ ಹೊಸ ಎಪಿಸೋಡ್ ಟಿವಿಗಳಲ್ಲಿ ಪ್ರಸಾರವಾಗಿಲ್ಲ. ನೋಡಿದ್ದನ್ನೆ ನೋಡಿ ನೋಡಿ ಮನೆಯಲ್ಲಿ ಲಾಕ್‌ಡೌನ್ ಬಂಧಿಯಾಗಿರುವವರಿಗೂ ಬೇಜಾರಾಗಿದೆ. ಆದರೆ ಇದೀಗ ಸಿನೆಮಾ ಹಾಗೂ ದಾರಾವಾಹಿಗಳ ಶೂಟಿಂಗ್ ಮಾಡಲು ಅವಕಾಶ ಕೊಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ರೀತೀಯ ಚಿತ್ರೀಕರಣ ಮಾಡಬಾರದು ಎಂದು ಸರ್ಕಾರ ಆದೇಶ ಮಾಡಿತ್ತು. ಹೀಗಾಗಿ ಲಾಕ್‌ಡೌನ್ ಆರಂಭದಲ್ಲಿ ಒಂದೆರಡು ಎಪಿಸೋಡ್‌ಗಳನ್ನು ಬಿಟ್ಟರೆ ಮತ್ತೆ ಹೊಸದಾಗಿ ಯಾವುದೇ ಸಿನೆಮಾ, ದಾರಾವಾಹಿಗಳು ಪ್ರಸಾರ ಆಗಿರಲಿಲ್ಲ.

ಇದೀಗ ಧಾರಾವಾಹಿಗಳ ಶೂಟಿಂಗ್ ಮಾಡಲು ಅನುಮತಿ ಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿರುವ ಕಂದಾಯ ಸಚಿವ ಆರ್. ಅಶೋಕ್್ ಅವರು, ಸಿನಿಮಾ, ಧಾರವಾಹಿ ಶೂಟಿಂಗ್ ಯಾವಗ ಆರಂಭಿಸಬಹುದು ಎಂಬುದನ್ನು ಎಂದು ನಾಳೆ ಹೇಳುತ್ತೇವೆ. ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಈ ಬಗ್ಗೆ ಚರ್ಚೆ ಮಾಡುತ್ತೇವೆ.

ಚಿತ್ರರಂಗ ಹಾಗೂ ಟಿವಿ ಧಾರಾವಾಹಿ ನಿರ್ಮಾಕರು, ನಿರ್ದೇಶಕರು ಸಾಮಾಜಿಕ ಅಂತರ ಪಾಲನೆ ಹಾಗೂ ಲಾಕ್‌ಡೌನ್ ನಿಯಮಗಳನ್ನು ಪಾಲನೆ ಮಾಡುತ್ತೇವೆ ಎಂಬ ಭರವಸೆ ಕೊಟ್ಟಿದ್ದಾರೆ. ಈ ಕುರಿತು ನನ್ನೊಂದಿಗೆ ಮಾತುಕತೆ ನಡೆಸಿದ್ದಾರೆ. ನಾಳೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ದಾರಾವಾಹಿಗಳ ಚಿತ್ರೀಕರಣ ಆರಂಭಿಸಲು ಅನುಮತಿ ಕೊಡಲು ತೀರ್ಮಾನ ಮಾಡುತ್ತೇವೆ ಎಂದು ಆರ್. ಅಶೋಕ್ ಹೇಳಿದ್ದಾರೆ.

English summary
The state government has decided to allow the shooting of movies and serials soon. We will discuss with the chief minister Yediyurappa tomorrow and decide to grant permission to start shooting said Ashok.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X