ಇನ್ಮುಂದೆ ಹೈವೇ ರಸ್ತೆ ಮಧ್ಯೆ ಮದ್ಯ ಸಿಗೋಲ್ಲಾರೀ

ಆದರೆ ಇದನ್ನು ತಡೆಗಟ್ಟಲು ಸರಕಾರವು ಮೂಲಕ್ಕೇ ಕೊಡಲಿ ಪೆಟ್ಟು ಹಾಕಿದ್ದು, ಹೆದ್ದಾರಿಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸುವುದಕ್ಕೆ ಮುಂದಾಗಿದೆ. ಆದರೆ ಇದು ಮುಂದಿನ ಜೂನ್ ತಿಂಗಳಿಂದ ಜಾರಿಗೆ ಬರಲಿದ್ದು, ಅಲ್ಲಿಯವರೆಗೂ ಸಾವಕಾಶವಾಗಿ/ ನಿರಾಂತಕವಾಗಿ ಹೆದ್ದಾರಿ ಸವಾರರು ಮದ್ಯ ಸೇವನೆಯನ್ನು ಅಬಾಧಿತವಾಗಿ ಮುಂದುವರಿಸಬಹುದಾಗಿದೆ.
ತಕ್ಷಣಕ್ಕೆ ಹೆದ್ದಾರಿಗಳಲ್ಲಿರುವ ಮದ್ಯದಂಗಡಿಗಳನ್ನು ಮುಚ್ಚಿಸಲಾಗುವುದಿಲ್ಲ. ಸ್ವಲ್ಪ ಸಮಯ ನೀಡಿ, ಲೈಸೆನ್ಸ್ ನವೀಕರಿಸದಂತೆ ಕೋರಿ ಅಬಕಾರಿ ಇಲಾಖೆಗೆ ಪತ್ರ ಬರೆಯುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಮಂತ್ರಾಲೋಚನೆ ನಡೆಸಲಾಗಿದೆ. ಮುಖ್ಯವಾಗಿ ಲಾರಿ ಮಾಲೀಕರುಗಳ ಒಕ್ಕೂಟವೂ ಈ ಪ್ರಸ್ತಾವನೆಗೆ ಅಂಕಿತವಾಗಿದೆ.
ಈ ಮಧ್ಯೆ ಆಟೋ ರಿಕ್ಷಾಗಳ ಬದಲಿಗೆ ನ್ಯಾನೋ ಕಾರಿನಂತಹ ಸಣ್ಣ ಕಾರುಗಳ ಬಳಕೆ ಬಗ್ಗೆಯೂ ಮಂತ್ರಾಲೋಚನೆ ನಡೆದಿದೆ. ಆದರೆ ಈ ಹಿಂದಿನ ಸರಕಾರವೂ ಈ ಪ್ರಸ್ತಾವನೆ ಬಗ್ಗೆ ಆಲೋಚನೆ ನಡೆಸಿತ್ತು.












Click it and Unblock the Notifications