Govt Schools: ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣಕ್ಕೆ ಭರ್ಜರಿ ಬಲ: 31 ಜಿಲ್ಲೆಗಳಲ್ಲಿ ಅಧಿಕಾರಿಗಳ ತಂಡ ರಚನೆ

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಇದೇ ವರ್ಷದಿಂದಲೇ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಜಾರಿಯಾದ ದ್ವಿಭಾಷಾ ನೀತಿಯನ್ನು ಮತ್ತಷ್ಟು ಪರಿಣಾಮಕಾರಿಗೆ ಅನುಷ್ಠಾನಕ್ಕೆ ತರಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರತಿ ಜಿಲ್ಲೆಗಳಲ್ಲಿ ಅಧಿಕಾರಿಗಳ ಸಂಪನ್ಮೂಲ ತಂಡವನ್ನು ರಚಿಸಿದೆ. ಈ ತಂಡಕ್ಕೆ ಬೆಂಗಳೂರಿನಲ್ಲಿ ಮೊದಲ ಯಶಸ್ವಿ ತರಬೇತಿ ಸಹ ಜರುಗಿತು.

ಕರ್ನಾಟಕ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣವನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಶಾಲಾ ಮಟ್ಟದಲ್ಲಿ ಶೈಕ್ಷಣಿಕ ನಾಯಕತ್ವವನ್ನು ಬಲಪಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಆಯಾಮದಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಅಧಿಕಾರಿಗಳ ಸಂಪನ್ಮೂಲ ತಂಡ ರಚಿಸಿದೆ.

Karnataka Govt

ರಚನೆಯಾದ ಒಟ್ಟು 31 ತಂಡಗಳ ಸದಸ್ಯರಿಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಮತ್ತು ಬೆಂಗಳೂರಿನ ದಕ್ಷಿಣ ಭಾರತದ ಪ್ರಾದೇಶಿಕ ಇಂಗ್ಲಿಷ್ ಸಂಸ್ಥೆ (RIESI) ಹಾಗೂ ಬೆಂಗಳೂರಿನ ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸಂಯುಕ್ತವಾಗಿ 'ರಾಜ್ಯ ಮಟ್ಟದಲ್ಲಿ ಓರಿಯಂಟೇಶನ್ ತರಬೇತಿ' ನಡೆಸಲಾಯಿತು.

ಕಳೆದ ಆಗಸ್ಟ್ 13 ಮತ್ತು 14 ರಂದು ಬೆಂಗಳೂರಿನ ಜ್ಞಾನಭಾರತಿಯಲ್ಲಿರುವ RIESI ಆವರಣದಲ್ಲಿ ಮೊದಲ ತಂಡಕ್ಕೆ ಓರಿಯಂಟೇಶನ್ ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡಿತು. ಬೆಂಗಳೂರು ವಿಭಾಗದ ಎಲ್ಲಾ ಜಿಲ್ಲೆಗಳ ಹಾಗೂ ಮೈಸೂರು ವಿಭಾಗದ ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.

ತಂಡದಲ್ಲಿ ಯಾರಿರುತ್ತಾರೆ?

ಈ ತರಬೇತಿಗೆ ಪ್ರತಿ ಜಿಲ್ಲೆಯಿಂದ ತಂಡದಲ್ಲಿರುವ ಡಯಟ್ ಪ್ರಾಂಶುಪಾಲರು, ಡಿವೈಪಿಸಿ, ಶಿಕ್ಷಣಾಧಿಕಾರಿಗಳು, ಇಎಂಟಿಟಿ ನೋಡಲ್ ಅಧಿಕಾರಿಗಳು, ವಿಷಯ ಪರಿವೀಕ್ಷಕರು ಹಾಗೂ ಜಿಲ್ಲಾ ಡಿಆರ್‌ ಟಿ ತಂಡದ ಸದಸ್ಯರು ಒಳಗೊಂಡಂತೆ ಒಟ್ಟು 08 ಅಧಿಕಾರಿಗಳು ಈ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ತರಬೇತಿ ಪಡೆದವರು ಜಿಲ್ಲಾ ಮಟ್ಟದಲ್ಲಿ ಶಾಲಾ ಮುಖ್ಯಸ್ಥರಿಗೆ ಅವರ ಪಾತ್ರ ಮತ್ತು ಜವಾಬ್ದಾರಿಗಳ ಕುರಿತು ತರಬೇತಿ ನೀಡಿ, ಶೈಕ್ಷಣಿಕ ನಾಯಕತ್ವದ ಸಾಮರ್ಥ್ಯವನ್ನು ಬಲಪಡಿಸಲಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ನಡೆದ ಮೊದಲ ತರಬೇತಿಯಲ್ಲಿ ದಕ್ಷಿಣ ಭಾರತದ ಪ್ರಾದೇಶಿಕ ಇಂಗ್ಲಿಷ್ ಸಂಸ್ಥೆಯ ನಿರ್ದೇಶಕಿ ಸುಮಂಗಲಾ, ಡಿಎಸ್‌ಇಆರ್‌ಟಿಯ ನಿರ್ದೇಶಕ ರಂಗಯ್ಯ ಹಾಗೂ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಅಧಿಕಾರಿಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಮೊದಲ ತಂಡದ ತರಬೇತಿಯು ಯಶಸ್ವಿಯಾಗಿ ಪೂರ್ಣಗೊಂಡಿದೆ.

ಇಂದಿನಿಂದ ಬೆಳಗಾವಿ, ಕಲಬುರಗಿಯಲ್ಲಿ ತರಬೇತಿ

ಇನ್ನು ಎರಡು ತಂಡಗಳಿಗೆ ಅಂದರೆ, ಬೆಳಗಾವಿ ವಿಭಾಗದ 123 ಅಧಿಕಾರಿಗಳಿಗೆ ಆಗಸ್ಟ್ 17-18 ರಂದು, ಕಲಬುರಗಿ ವಿಭಾಗದ 129 ಅಧಿಕಾರಿಗಳಿಗೆ ಆಗಸ್ಟ್ 19-20 ರಂದು ತರಬೇತಿ ನೀಡಲಾಗುತ್ತದೆ.

ಯಾವ ವಿಷಯಗಳ ಮೇಲೆ ತರಬೇತಿ?

ಈ ತರಬೇತಿ ಕಾರ್ಯಕ್ರಮವು ಬಹಳ ಮುಖ್ಯವಾಗಿ, ಮಾದರಿ ಶಾಲೆಗಳ (Flagship schools) ಪರಿಕಲ್ಪನೆ ಮತ್ತು ಶೈಕ್ಷಣಿಕ ನಾಯಕತ್ವ, ದ್ವಿಭಾಷಾ ಮಾಧ್ಯಮ ಶಿಕ್ಷಣದ ಪರಿಕಲ್ಪನೆ ಮತ್ತು ಜಾರಿ, ಪಠ್ಯಪುಸ್ತಕಗಳ ಪರಿಚಯ, ಪ್ರತ್ಯಕ್ಷ ಬೋಧನಾ ತರಗತಿಗಳು (Demonstration lessons), ತರಗತಿ ವೀಕ್ಷಣೆ ಮತ್ತು ಅಭಿಪ್ರಾಯ ಹಂಚಿಕೆ, ಹಾಗೂ ಭಾಷಾಸಮೃದ್ಧ ವಾತಾವರಣದ ನಿರ್ಮಿಸುವುದು ಸೇರಿದಂತೆ ಇತರ ಪ್ರಮುಖ ವಿಷಯಗಳನ್ನು ಒಳಗೊಂಡಿದೆ.

ಈ ತರಬೇತಿಯು ಅಧಿಕಾರಿಗಳಿಗೆ ಶೈಕ್ಷಣಿಕ ನಾಯಕತ್ವ, ತರಗತಿ ಅಭ್ಯಾಸಗಳು ಮತ್ತು ದ್ವಿಭಾಷಾ ಕಲಿಕಾ ವಾತಾವರಣವನ್ನು ಬಲಪಡಿಸುವಲ್ಲಿ ಶಾಲಾ ಮುಖ್ಯಸ್ಥರಿಗೆ ಮಾರ್ಗದರ್ಶನ ನೀಡಲು ಅಗತ್ಯವಿರುವ ಪ್ರಾಯೋಗಿಕ ಜ್ಞಾನ ಹಾಗೂ ತಂತ್ರಗಳನ್ನು ಒದಗಿಸುತ್ತವೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಮಬದ್ಧ ಸಾಮರ್ಥ್ಯ ವರ್ಧನೆ ಮತ್ತು ನಿರಂತರ ಶೈಕ್ಷಣಿಕ ಬೆಂಬಲದ ಮೂಲಕ ದ್ವಿಭಾಷಾ ಮಾಧ್ಯಮ ಶಿಕ್ಷಣವನ್ನು ಬಲಪಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ನಡೆಸುತ್ತಿರುವ ನಿರಂತರ ಪ್ರಯತ್ನಗಳ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತರಬೇತಿ ಪಡೆದ ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಶಾಲಾ ಮುಖ್ಯಸ್ಥರಿಗೆ ಈ ಜ್ಞಾನವನ್ನು ಹಂಚಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+