Shakti Scheme: ಕಾಂಗ್ರೆಸ್ ಗ್ಯಾರಂಟಿ ನಂ.1: ಇಂದಿನಿಂದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ರಾಜ್ಯಾದ್ಯಂತ ಜಾರಿ

ಬೆಂಗಳೂರು, ಜೂನ್‌ 11: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನ ಐತಿಹಾಸಿಕ ಗೆಲುವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿರುವ ಗ್ಯಾರಂಟಿ ಘೋಷಣೆ ಶಕ್ತಿ ಯೋಜನೆಗೆ ಇಂದು(ಭಾನುವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಶಕ್ತಿ ಯೋಜನೆಗೆ ಭಾನುವಾರ ಬೆಳಿಗ್ಗೆ 11ಕ್ಕೆ ವಿಧಾನಸೌಧದ ಪೂರ್ವದ್ವಾರದ ಮುಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿಸಲಿದ್ದು, ಮಧ್ಯಾಹ್ನ 1 ರಿಂದಲೇ ರಾಜ್ಯದ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಸಂಚರಿಸುವ ಅವಕಾಶವನ್ನ ಕಲ್ಪಿಸಲಾಗಿದೆ.

Karnataka Govt Announces Free Bus Travel For Women From June 11

ಇನ್ನೂ ಕಾರ್ಯಕ್ರಮದಲ್ಲಿ ಬಿಎಂಟಿಸಿಯ ಎರಡು ಬಸ್ ಗಳಿಗೆ ಚಾಲನೆ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಕೇತಿಕವಾಗಿ ಆಯ್ದ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಿದ್ದಾರೆ. ಉಚಿತ ಪ್ರಯಾಣ- ನಮ್ಮ ಪ್ರಮಾಣ ಎಂದು ರಾಜ್ಯ ಸರಕಾರ ಈ ಯೋಜನೆಯನ್ನು ಬಣ್ಣಿಸಿಕೊಂಡಿದ್ದು, ರಾಜ್ಯದ ಹಳ್ಳಿ ಹಳ್ಳಿಯ ಪ್ರತೀ ಮನೆಯ ಮಹಿಳೆಗೂ ಈ ಯೋಜನೆ ತಲುಪಲು, ಯೋಜನೆ ಜಾರಿಯನ್ನು ಹಬ್ಬದಂತೆ ಆಚರಿಸಲು ನಿರ್ಧರಿಸಲಾಗಿದೆ.

ಉಚಿತ ಬಸ್‌ ಪ್ರಯಾಣದ ವೇಳೆ ಮಹಿಳೆಯರು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಇನ್ನಿತರೆ ಸೂಕ್ತ ದಾಖಲೆಗಳನ್ನು ತೋರಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.

Karnataka Govt Announces Free Bus Travel For Women From June 11

ಇನ್ನೂ ಶಕ್ತಿ ಯೋಜನೆಗೆ ಚಾಲನೆ ವೇಳೆ ಡಿಸಿಎಂ ಡಿಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತ ಮತ್ತಿತರರು ರಾಜಕೀಯ ಗಣ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ವರಿಗೆ ಸಾಥ್ ನೀಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+