ಕರ್ನಾಟಕ; ಕೋವಿಡ್ ರೋಗಿಯ ಚಿಕಿತ್ಸೆಗೆ 3 ಹೊಸ ಔಷಧಿ ಬಳಕೆ
ಬೆಂಗಳೂರು, ಮೇ 12; ಕರ್ನಾಟಕದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಹೊಸ ಔಷಧಿಗಳನ್ನು ಬಳಕೆ ಮಾಡಲು ಅನುಮತಿ ನೀಡಿದೆ. ಈಗ ಬಳಕೆ ಮಾಡುತ್ತಿರುವ ಔಷಧಗಳ ಜೊತೆ ಇವುಗಳನ್ನು ಬಳಸಲಾಗುತ್ತದೆ.
ಸರ್ಕಾರ ಈಗಾಗಲೇ ಸಿಡಿಎಸ್‌ಸಿಓ ಅನುಮತಿ ನೀಡಿರುವ ಹೊಸ ಔಷಧಗಳನ್ನು ಬಳಕೆ ಮಾಡಲು ಒಪ್ಪಿಗೆ ಕೊಟ್ಟಿದೆ. ಇದರಲ್ಲಿ ಬಾರಿಸಿಟಿನಿಬ್ 1 ಎಂಜಿ, 2 ಎಂಜಿ ಮತ್ತು 4 ಎಂಜಿ ಔಷಧಿ ಸಹ ಸೇರಿದೆ.
ಈಗಾಗಲೇ ಬಳಕೆ ಮಾಡುತ್ತಿರುವ ರೆಮ್ಡೆಸಿವಿರ್ ಜೊತೆಗೆ ಬಾರಿಸಿಟಿನಿಬ್ ಬಳಕೆ ಮಾಡಲಾಗುತ್ತದೆ. ಇದನ್ನು ನೇರವಾಗಿ ಬಳಕೆ ಮಾಡಬಹುದು ಇಂಜೆಕ್ಷನ್ ರೂಪದಲ್ಲಿ ನೀಡಲಾಗುವುದಿಲ್ಲ. ಮೂರು ದಿನಗಳ ಹಿಂದೆ ಆಕ್ಸಿಜನ್ ಬೆಡ್‌ನಲ್ಲಿರುವ ರೋಗಿಗಳಿಗೆ ಇದನ್ನು ನೀಡಲಾಗಿದೆ.

ಕೋವಿಡ್ ಸೋಂಕಿತ ರೋಗಿಗಳಿಗೆ ಬಾರಿಸಿಟಿನಿಬ್ ಅನ್ನು ದಿನಕ್ಕೆ ಒಂದರಂತೆ 14 ದಿನಗಳ ಕಾಲ ನೀಡಲಾಗುತ್ತದೆ. ಇದರಿಂದ ಆಕ್ಸಿಜನ್ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಇದರ ಜೊತೆಗೆ ರಿಜೆನೆರೊನ್ ಬಳಕೆಗೂ ಒಪ್ಪಿಗೆ ಕೊಡಲಾಗಿದೆ.
ಡಿಆರ್‌ಡಿಓ ಔಷಧ; ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಅನುಮತಿ ನೀಡಲಾಗಿದೆ. 2-ಡಯಾಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಬಳಕೆಗೆ ಈಗಾಗಲೇ ಭಾರತೀಯ ಔಷಧ ಮಹಾನಿಯಂತ್ರಕರು ಅನುಮತಿ ಕೊಟ್ಟಿದ್ದಾರೆ.
2-ಡಿಜಿ ಔಷಧಿ ಬಳಕೆಯಿಂದ ಸೋಂಕಿತರು ವೇಗವಾಗಿ ಗುಣಮುಖರಾಗಿರುವುದು ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಸಾಬೀತಾಗಿದೆ. ಇದರಿಂದ ವೈದ್ಯಕೀಯ ಆಮ್ಲಜನಕ ಬಳಕೆಯೂ ಕಡಿಮೆಯಾಗಲಿದೆ ಎಂದು ಡಿಜಿಸಿಎ ಹೇಳಿದೆ.
ಪುಡಿಯ ರೂಪದಲ್ಲಿರುವ 2-ಡಿಜಿ ಔಷಧವನ್ನು ನೀರಿನಲ್ಲಿ ಬೆರೆಸಿ ಸೇವಿಸಬಹುದಾಗಿದೆ. ಈ ಔಷಧಿ ಸೋಂಕು ತಗುಲಿ ಆಸ್ಪತ್ರೆ ಸೇರಿದ ರೋಗಿಗಳು ಶೀಘ್ರವಾಗಿ ಗುಣಮುಖರಾಗಲು ಸಹಾಯ ಮಾಡುತ್ತದೆ.












Click it and Unblock the Notifications