ರಾಜೇಂದ್ರ ಕುಮಾರ್ ಸೇರಿ 9 ಐಎಎಸ್ ಅಧಿಕಾರಿಗಳು ವರ್ಗಾವಣೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 03: ಆಡಳಿತ ಚುರುಕುಗೊಳಿಸುವುದು, ಅಧಿಕಾರಿಗಳ ಸೇವೆ ಎಲ್ಲಾ ವಿಭಾಗಕ್ಕೂ ಸಿಗಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ 9 ಮಂದಿ ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಗುರುವಾರ ಆದೇಶ ಹೊರಡಿಸಿದೆ.

ಗುರುವಾರ ವರ್ಗಾವಣೆಗೊಳಿಸಿರುವ ಬಹುತೇಕ ಅಧಿಕಾರಿಗಳು ಹಿರಿಯರಾಗಿದ್ದು ಆಯಕಟ್ಟಿನಿಂದ ಕೆಲವು ಪ್ರಮುಖ ಇಲಾಖೆಗಳಿಗೆ ಎತ್ತಂಗಡಿ ಮಾಡಲಾಗಿದೆ. ಎಸ್.ಎಸ್.ಪಟ್ಟಣಶೆಟ್ಟಿ , ವಿ.ಪಿ.ಇಕ್ಕೇರಿ, ಎಸ್.ಶಶಿಕಾಂತ್ ಸೆಂಥಿಲ್, ಡಾ.ಬಗಡಿ ಗೌತಮ್, ಶಮೀರ್ ಶುಕ್ಲ , ಡಾ.ಎಂ.ಲೋಕೇಶ್, ರಾಜೇಂದ್ರ ಕುಮಾರ್ ಕಠಾರಿಯ, ಮೌನಿಶ್ ಮೌದ್ಗಲ್ ವರ್ಗಾವಣೆಗೊಂಡಿರುವ ಅಧಿಕಾರಿಗಳಾಗಿದ್ದಾರೆ.

Karnataka Government Transfers 9 IAS officers

ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ
1. ಎಸ್.ಎಸ್. ಪಟ್ಟಣ ಶೆಟ್ಟಿ -ಕಾರ್ಯದರ್ಶಿಗಳು -ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.
2. ವಿ.ಪಿ.ಇಕ್ಕೇರಿ: ಆಯುಕ್ತರು- ಸರ್ವೆ ಭೂಮಾಪನ ದಾಖಲೆ, ಬೆಂಗಳೂರು.
3. ಎಸ್.ಶಶಿಕಾಂತ್ ಸೆಂಥಿಲ್: ನಿರ್ದೇಶಕರು-ಗಣಿ ಮತ್ತು ಭೂ ವಿಜ್ಞಾನ ಇಲಾಖೆ.
4. ಡಾ.ಬಗಡಿ ಗೌತಮ್: ಜಿಲ್ಲಾಧಿಕಾರಿ-ರಾಯಚೂರು
5. ಶಮೀರ್ ಶುಕ್ಲ : ಆಯುಕ್ತರು-ಉದ್ಯೋಗ ಮತ್ತು ತರಬೇತಿ
6. ಡಾ.ಎಂ.ಲೋಕೇಶ್: ಜಿಲ್ಲಾಧಿಕಾರಿ -ಶಿವಮೊಗಗ
7. ರಾಜೇಂದ್ರಕುಮಾರ್ ಕಠಾರಿಯ: ಕರ್ನಾಟಕ ಗಣಿ ಮತ್ತು ಪರಿಸರ ಪುನಶ್ವೇತನ ಮಂಡಳಿ
8. ಮೌನೇಶ್ ಮೌದ್ಗಲ್: ವ್ಯವಸ್ಥಾಪಕ ನಿರ್ದೇಶಕರು-ಮೈಸೂರು ಮಿನಿರಲ್ಸ್

ಇನ್ನಷ್ಟು ವಿವರ ಇಲ್ಲಿದೆ ಡೌನ್ ಲೋಡ್ ಮಾಡಿಕೊಳ್ಳಿ:

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka government on November 3, 2016 transferred 9 IAS officers including Rajendra kumar Kataria and Mounesh Mudgal. Here is the list.
Please Wait while comments are loading...