33 ಐಎಎಸ್ ಅಧಿಕಾರಿಗಳಿಗೆ ಬಡ್ತಿ, 7 ಐಎಫ್ಎಸ್ ಗೆ ವರ್ಗ

Posted By:
Subscribe to Oneindia Kannada

ಬೆಂಗಳೂರು, ಜನವರಿ 01: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವಣೆ ಮಾಡಿದ ಜತೆಯಲ್ಲೇ ವರ್ಷದ ಕೊನೆಯ ಕ್ಷಣದಲ್ಲಿ 33 ಮಂದಿ ಐಎಎಸ್ ಅಧಿಕಾರಿಗಳಿಗೆ ಪದೋನ್ನತ್ತಿ ನೀಡಲಾಗಿದೆ. ಅಲ್ಲದೆ, 7 ಐಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

4೦ಕ್ಕೂ ಅಧಿಕ ಮಂದಿ ಐಪಿಎಸ್, ಏಳು ಮಂದಿ ಐಎಫ್‍ಎಸ್ ಸೇರಿದಂತೆ 80ಕ್ಕೂ ಹೆಚ್ಚು ಮಂದಿ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸುವ ಮೂಲಕ ಆಡಳಿತ ಯಂತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರ್ಜರಿ ಸರ್ಜರಿ ಮಾಡಿದ್ದಾರೆ.[ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವಣೆ, ಎಲ್ಲಿಗೆ ಯಾರು?]

ಹಿರಿಯ ಐಎಎಸ್ ಅಧಿಕಾರಿಗಳಾದ ಜಿ. ಕಲ್ಪನಾ, ರಾಜೀವ್ ಚಾವ್ಲಾ ಹಾಗೂ ವಿ. ಮಂಜುಳಾ ಅವರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಪದೋನ್ನತಿ ಹಾಗೂ 30 ಐಎಎಸ್ ಅಧಿಕಾರಿಗಳಿಗೆ ವೇತನ ಬಡ್ತಿ ನೀಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.[ಪ್ರವೀಣ್ ಸೂದ್ -ಬೆಂಗಳೂರು ನಗರದ ಹೊಸ ಪೊಲೀಸ್ ಕಮಿಷನರ್]

Karnataka Government transfers IFS officers, promotes IAS officers

33 ಅಧಿಕಾರಿಗಳಿಗೆ ಬಡ್ತಿ
ಡಾ.ಆರ್.ವಿಶಾಲ್-ನಿರ್ದೇಶಕ ಮುನ್ಸಿಪಲ್ ಆಡಳಿತ ಬೆಂಗಳೂರು
ಡಾ.ಎಂ.ಎನ್. ಅಜಯ್ ನಾಗಭೂಷಣ್-ಆಯುಕ್ತ ಶಿಕ್ಷಣ ಇಲಾಖೆ
ವಿ.ಅನ್ಬು ಕುಮಾರ್-ಆಯುಕ್ತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಎನ್.ವಿ.ಪ್ರಸಾದ್-ಎಂ.ಡಿ.ಕೆಪಿಎಲ್‍ಸಿ,
ಶಿಖಾ-ನಿರ್ದೇಶಕರು ಪಿಯು ಮಂಡಳಿ.
ಅಶ್ವಥಿ-ಸಿಇಓ ಜಿ.ಪಂ.ದಾವಣಗೆರೆ
ಡಾ.ಅವಿನಾಶ್ ಮೆನನ್ ರಾಜೇಂದ್ರನ್- ಸಿಇಓ ಜಿ.ಪಂ.ಯಾದಗಿರಿ
ಎಲ್.ಚಂದ್ರಶೇಖರ ನಾಯಕ-ಉಪ ಕಾರ್ಯದರ್ಶಿ ಅಭಿವದ್ಧಿ ಜಿ.ಪಂ. ಉತ್ತರ ಕನ್ನಡ
ಎಂ.ಪಿ.ಮುಳ್ಳೆ ಮುಹಿಲನ್-ಎಂ.ಡಿ. ಸ್ಮಾರ್ಟ್ ಸಿಟಿ ಯೋಜನೆ ಬೆಳಗಾವಿ
ಡಾ.ಕೆ.ವಿ.ರಾಜೇಂದ್ರ ಸಿಇಓ ಜಿ.ಪಂ.ಬಳ್ಳಾರಿ
ಡಾ. ಆರ್.ಸೆಲ್ವಮಣಿ ಸಿಇಓ ಜಿ.ಪಂ.ಬೀದರ್
ಆರ್.ಸ್ನೇಹಲ್-ಸಿಇಓ ಜಿ.ಪಂ. ಧಾರವಾಡ
ಡಾ.ಜಿ.ಕಲ್ಪನಾ-ನಿರ್ದೇಶಕಿ ಆಡಳಿತಾತ್ಮಕ ತರಬೇತಿ ಸಂಸ್ಥೆ ಮೈಸೂರು
ರಾಜೀವ್ ಚಾವ್ಲಾ-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತೋಟಗಾರಿಕೆ ಇಲಾಖೆ
ವಿ.ಮಂಜುಳಾ - ಪ್ರಧಾನ ಕಾರ್ಯದರ್ಶಿ ಐಟಿ-ಬಿಟಿ ಇಲಾಖೆ
ಕಷ್ಣ ಬಜ್ಪೆ-ಪರೀಕ್ಷಾ ನಿಯಂತ್ರಕ ಕೆಪಿಎಸ್ಸಿ.
ಖುಷ್ಬೂ ಗೋಯೆಲ್ ಚೌದರಿ-ಉಪ ಆಯುಕ್ತೆ ಯಾದಗಿರಿ
ದೀಪ್ತಿ ಆದಿತ್ಯ ಕಾನಡೆ-ಉಪ ಆಯುಕ್ತೆ ಚಿಕ್ಕಬಳ್ಳಾಪುರ
ಉಜ್ವಲ್ ಕುಮಾರ್ ಘೋಷ್-ಉಪ ಆಯುಕ್ತ ಕಲಬುರಗಿ
ಎಂ.ದೀಪಾ-ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಬೆಂಗಳೂರು.
ಪಿ.ರಾಜೇಂದ್ರ ಚೋಳನ್-ಎಂ.ಡಿ.ಬೆಸ್ಕಾಂ ಬೆಂಗಳೂರು
ರಮಣದೀಪ್ ಚೌದರಿ-ಕುಡಿಯುವ ನೀರಿನ ಯೋಜನೆಗಳ ಕಾರ್ಯದರ್ಶಿ ಹೊಸದಿಲ್ಲಿ
ಬಿ.ಬಿ. ಕಾವೇರಿ ಸಿಇಓ ಜಿ.ಪಂ. ಕೋಲಾರ
ಸುಷ್ಮಾ ಗೊಡಬೋಲೆ-ಯೋಜನಾ ನಿರ್ದೇಶಕಿ ಎನ್‍ಆರ್‍ಎಲ್‍ಎಂ
ನಗತ್ ತಬಸ್ಸುಮ್ ಆಬ್ರೂ-ಎಂ.ಡಿ.ಅಲ್ಪಸಂಖ್ಯಾತರ ಅಭಿವದ್ಧಿ ನಿಗಮ ಬೆಂಗಳೂರು.
ಟಿ.ಎಚ್.ಎಂ.ಕುಮಾರ್-ಎಂಡಿ ಪಿಸಿಕೆಎಲ್ ಬೆಂಗಳೂರು
ಡಾ.ಎಚ್.ಆರ್. ಮಹದೇವ್-ಉಪ ಆಯುಕ್ತ ಬೀದರ್
ಎಸ್.ಝಿಯಾಉಲ್ಲಾ -ಉಪ ಆಯುಕ್ತ ಮಂಡ್ಯ
ಎಸ್.ಬಿ.ಶೆಟ್ಟಣ್ಣವರ್-ನಿರ್ದೇಶಕ ಅಂತರ್ಜಲ ನಿರ್ದೇಶನಾಲಯ ಬೆಂಗಳೂರು.
ಜೈನ್-ಸಿಇಓ ಡಿಪಿಎಆರ್
ಡಾ.ಏಕ್‍ರೂಪ್ ಕೌರ್-ಎಂ.ಡಿ. ಬಿಎಂಟಿಸಿ
ಡಾ.ಜೆ.ರವಿಶಂಕರ್-ಎಂ.ಡಿ. ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಎಂ.ಮಂಜುನಾಥ ನಾಯ್ಕ್ ಆಯುಕ್ತ ಅಬಕಾರಿ ಇಲಾಖೆ ಬೆಂಗಳೂರು.

ಐಎಫ್‌ಎಸ್‌ ಅಧಿಕಾರಿಗಳ ವರ್ಗಾವಣೆ
ಅನಿಲ್‌ ಕುಮಾರ್ ರತನ್‌-ಸಿಇಒ, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ
ಬಿ.ವೆಂಕಟೇಶ್- ಕಾರ್ಯನಿರ್ವಾಹಕ ನಿರ್ದೇಶಕ, ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್ಸ್‌
ಡಿ.ಮಂಜುನಾಥ್- ಉಪಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಬಳ್ಳಾಪುರ ವಿಭಾಗ
ಡಿ.ಮಹೇಶ್‌ ಕುಮಾರ್- ಉಪ ಅರಣ್ಯ ಸಂರಕ್ಷಣಾಧಿಕಾರಿ,ಮುಖ್ಯ ಕಚೇರಿ ಬೆಂಗಳೂರು
ದೀಪ್ ಜೆ. ಸಿ- ಪ್ರಧಾನ ವ್ಯವಸ್ಥಾಪಕಿ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
ಎಂ.ಎನ್‌. ವಿಜಯ್‌ಕುಮಾರ್- ಉಪ ಅರಣ್ಯ ಸಂರಕ್ಷಣಾಧಿಕಾರಿ, ರಾಮನಗರ
ಎ. ಚಂದ್ರಣ್ಣ- ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಮಗಳೂರು
ಎಂ.ಎಸ್. ಮಾಣಿಕ್‌- ಉಪ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ ವೃತ್ತ
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka government also promoted 33 IAS officers in their pay scales and also transferred seven officers of the Indian Forest Service
Please Wait while comments are loading...