Breaking News: ಐಎಎಸ್ ವರ್ಗಾವಣೆ, ಶಾಲಾ ಶಿಕ್ಷಣ ಇಲಾಖೆಗೆ ಹೊಸ ಆಯುಕ್ತರ ನೇಮಕ

ಬೆಂಗಳೂರು, ಅಕ್ಟೋಬರ್ 05: ಕರ್ನಾಟಕ ಸರ್ಕಾರ ಆಡಳಿತ ಯಂತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿದೆ. ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಬಿ. ಬಿ. ಕಾವೇರಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಹೊಸ ಆಯುಕ್ತರನ್ನು ನೇಮಕ ಮಾಡಿದೆ. ವರ್ಗಾವಣೆಗೊಂಡ ಐಎಎಸ್, ಐಪಿಎಸ್ ಅಧಿಕಾರಿಗಳ ಪಟ್ಟಿ ಇಲ್ಲಿದೆ.

ಶನಿವಾರ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಟಿ. ಮಾಲತೇಶ್, ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ & ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-1) ಆದೇಶವನ್ನು ಹೊರಡಿಸಿದ್ದಾರೆ. ಬಿ. ಬಿ. ಕಾವೇರಿ, ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದ ತನಕ ವರ್ಗಾವಣೆ ಮಾಡಲಾಗಿದೆ.

Karnataka Government Transfers IAS Officers New Commissioner For Education Department

ವರ್ಗಾವಣೆಗೊಂಡ ಅಧಿಕಾರಿಗಳು

* ಡಾ. ತ್ರಿಲೋಕ್‌ ಚಂದ್ರ ಕೆ. ವಿ. (ಕೆಎನ್: 2007). ಮುಖ್ಯಮಂತ್ರಿಗಳ ಕಾರ್ಯದರ್ಶಿ, ಬೆಂಗಳೂರು. ತತ್‌ಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾಗಿ ನೇಮಕ. ಆಯುಕ್ತಾಗಿದ್ದ ಬಿ. ಬಿ. ಕಾವೇರಿ ವರ್ಗಾವಣೆ.

* ಬಿ. ಬಿ. ಕಾವೇರಿ (ಕೆಎನ್: 2008). ಶಾಲಾ ಶಿಕ್ಷಣ ಇಲಾಖೆ ಆಯುಕ್ತರು, ಬೆಂಗಳೂರು. ತತ್‌ಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ವರ್ಗಾವಣೆ. ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ. ಈ ಹುದ್ದೆಯಲ್ಲಿದ್ದ ಡಾ. ತ್ರಿಲೋಕ್‌ ಚಂದ್ರ ಕೆ. ವಿ. ವರ್ಗಾವಣೆ.

* ಬಿ. ಬಿ. ಕಾವೇರಿ. ತತ್‌ಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ಹೆಚ್ಚುವರಿ ಹೊಣೆ, ಕಾರ್ಯದರ್ಶಿಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ. ಈ ಹುದ್ದೆಯಲ್ಲಿದ್ದ ಡಾ. ತ್ರಿಲೋಕ್‌ ಚಂದ್ರ ಕೆ. ವಿ. ವರ್ಗಾವಣೆ.

* ಸುಧೀರ್ ಕುಮಾರ್ ರೆಡ್ಡಿ ಸಿಹೆಚ್‌, ಐಪಿಎಸ್ (ಕೆಎನ್-2010). ಡಿಐಜಿ ನೇಮಕಾತಿ. ತತ್‌ಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ಡಿಐಜಿ, ಗುಪ್ತಚರ ಇಲಾಖೆ. ಖಾಲಿ ಇದ್ದ ಹುದ್ದೆಗೆ ನೇಮಕ.

ಸರ್ಕಾರ ಶನಿವಾರ 14 ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿತ್ತು. ಕಂದಾಯ ಇಲಾಖೆಯ ಸ್ಥಳ ನಿರೀಕ್ಷಣೆಯಲ್ಲಿರುವ ಹಾಗೂ ಸ್ಥಳ ನಿರೀಕ್ಷಣೆಗೆ ಬರಲಿರುವ ತಹಶೀಲ್ದಾರ್ ವೃಂದದ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಲಾದ ಹುದ್ದೆಗಳಿಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ ಎಂದು ಹೇಳಿದೆ.

ಕಳೆದ ಒಂದು ವಾರದಿಂದ ಸರ್ಕಾರ ವಿವಿಧ ಇಲಾಖೆಗಳ ಅಧಿಕಾರಿಗಳಗಳನ್ನು ವರ್ಗಾವಣೆ ಮಾಡುತ್ತಿದೆ. ಪೊಲೀಸ್, ಜಲಸಂಪನ್ಮೂಲ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಕೆಲವು ಕೆಎಎಸ್ ಅಧಿಕಾರಿಗಳನ್ನು ಸಹ ವರ್ಗಾವಣೆಗೊಳಿಸಿ ಆದೇಶಿಸಲಾಗಿತ್ತು. ಶನಿವಾರ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+