ಕರ್ನಾಟಕದಲ್ಲಿ ರೆವೆನ್ಯೂ ಸ್ಟಾಂಪ್ ಬಳಕೆ ಪುನರಾರಂಭ

ಬೆಂಗಳೂರು, ನ 22: ರೆವಿನ್ಯೂ ಸ್ಟ್ಯಾಂಪ್ ವಿಚಾರದಲ್ಲಿರುವ ಗೊಂದಲಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ. ರೆವಿನ್ಯೂ ಸ್ಟ್ಯಾಂಪ್ ಮೇಲಿನ ನಿಷೇಧ ವಾಪಸ್ ಪಡೆಯಲು ರಾಜ್ಯ ಸರಕಾರ ನಿರ್ಧರಿಸಿದೆ.

ನಿಷೇಧ ವಾಪಸ್ ಕುರಿತಂತೆ ಸದ್ಯದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು. 1, 2 ಮತ್ತು 5 ರೂಪಾಯಿ ಮುಖಬೆಲೆಯ ಸ್ಟ್ಯಾಂಪ್ ಗಳನ್ನು ಮರುಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.

ಅಬ್ದುಲ್ ಕರೀಂಲಾಲ್ ತೆಲಗಿ ಸೃಷ್ಟಿಸಿದ್ದ ಬಹುಕೋಟಿ ಮೌಲ್ಯದ ಛಾಪಾಕಾಗದ ಹಗರಣದ ನಂತರ ರೆವಿನ್ಯೂ ಸ್ಟ್ಯಾಂಪ್ ಬಳಕೆಯನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು.

In a major decision Karnataka Government to withdraw ban on Revenue stamp usage

ಈ ಬಗ್ಗೆ ಸ್ಪಷ್ಟೀಕರಣ ನೀಡಿ ಮಾತನಾಡುತ್ತಿದ್ದ ಸಚಿವರು, ರಾಜ್ಯ ಸರಕಾರ ರೆವಿನ್ಯೂ ಸ್ಟ್ಯಾಂಪ್ ನಿಷೇಧಿಸಿದ್ದರೂ, ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ರಾಜ್ಯ ಸರಕಾರದ ಅಧೀನದ ಕಂದಾಯ ಇಲಾಖೆಯ ವ್ಯವಹಾರಗಳಲ್ಲಿ ಈ ಪದ್ದತಿ ಚಾಲ್ತಿಯಲ್ಲಿದ್ದವು ಎಂದಿದ್ದಾರೆ.

ಇದರಿಂದಾಗಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ನಿಗದಿತ ಬೆಲೆಗಿಂತ ಐದು ಪಟ್ಟು ಅಥವಾ ಹತ್ತು ಪಟ್ಟು ಹೆಚ್ಚು ದರದಲ್ಲಿ ರೆವಿನ್ಯೂ ಸ್ಟ್ಯಾಂಪ್ ಗಳು ಮಾರಾಟವಾಗುತ್ತಿದ್ದವು.

ಹಾಗಾಗಿ, ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ನಿರ್ಧರಿಸಲಾಗಿದೆ. ನಿಷೇಧ ಹಿಂದಕ್ಕೆ ಪಡೆಯುವ ಆದೇಶವನ್ನು ಸದ್ಯದಲ್ಲೇ ಹೊರಡಿಸಲಾಗುವುದು ಎಂದು ಸಚಿವ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ರೆವಿನ್ಯೂ ಸ್ಟ್ಯಾಂಪ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ ಎಂದು ಆರೋಪಿಸಿ, ಎಸ್ ವಿ ದೇಸಾಯಿ ಎನ್ನುವವರು ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ವಘೇಲಾ ಮತ್ತು ನ್ಯಾ ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠ, ರಾಜ್ಯದಲ್ಲಿ ರೆವಿನ್ಯೂ ಸ್ಟ್ಯಾಂಪ್ ಬಳಕೆ ನಿಷೇಧಕ್ಕೆ ಕಾರಣಗಳೇನು ಎಂದು ಆರ್ ಟಿ ಐ ಕಾಯ್ದೆ ಅನ್ವಯ ಮಾಹಿತಿ ಪಡೆದುಕೊಳ್ಳಲು ಅರ್ಜಿದಾರರಿಗೆ ಸೂಚಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+