ಸ್ವಿಗ್ಗಿ-ಜೊಮ್ಯಾಟೋ, ಓಲಾ-ಉಬರ್‌ಗೆ ರಾಜ್ಯ ಸರ್ಕಾರದಿಂದ ಶಾಕ್!
ಕರ್ನಾಟಕ ಸರ್ಕಾರವು ಸ್ವಿಗ್ಗಿ, ಜೊಮಾಟೊ, ಡಂಜೊ ಮತ್ತು ಓಲಾ ಮುಂತಾದ ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳ ಪ್ರತಿಯೊಂದು ವಹಿವಾಟಿನ (ಸಾಗಾಟ) ಮೇಲೆ ಸೆಸ್ ವಿಧಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಪರ ವಿರೋಧದ ಚರ್ಚೆಗಳು ಜೋರಾಗಿ ನಡೆಯುತ್ತಿದೆ.
ಜೊಮ್ಯಾಟೋ, ಸ್ವಿಗ್ಗಿ, ಜೆಪ್ಟೊ, ಓಲಾ, ಉಬರ್, ರಾಪಿಡೊ, ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳ ವಹಿವಾಟುಗಳ ಮೇಲೆ ಶೇ 1ರಿಂದ ಶೇ 2ರಷ್ಟು ಸೆಸ್ ವಿಧಿಸುವ ಹೊಸ ನಿಯಮ ಪರಿಚಯಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಸ್ವಿಗ್ಗಿ, ಜೊಮಾಟೊ, ಡಂಜೊ ಮತ್ತು ಓಲಾ ಮುಂತಾದ ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳ ಪ್ರತಿಯೊಂದು ವಹಿವಾಟಿನ ಮೇಲೆ ಸೆಸ್ ವಿಧಿಸಲು ರಾಜ್ಯ ಸರ್ಕಾರ ಪ್ರಸ್ತಾಪಿಸಿದ್ದು, ಗಿಗ್ ಕಾರ್ಮಿಕರಿಗಾಗಿ ಕಲ್ಯಾಣ ನಿಧಿ ರಚಿಸಲಾಗುವುದು ಎಂದು ಹೇಳಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಆಹಾರ ವಿತರಣೆ, ಲಾಜಿಸ್ಟಿಕ್ಸ್, ಇ-ಕಾಮರ್ಸ್ ಇತ್ಯಾದಿ ಸೇವೆಗಳಂತಹ ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳ ಮೇಲಿನ ಪ್ರತಿಯೊಂದು ವಹಿವಾಟಿನ ಮೇಲೆ ಸೆಸ್ ವಿಧಿಸಲು ನಿರ್ಧರಿಸಿದೆ. ಹಣವನ್ನು ಗಿಗ್ ಕಾರ್ಮಿಕರ ಕಲ್ಯಾಣ ನಿಧಿಗೆ ಬಳಸುವುದಾಗಿ ಹೇಳಿಕೊಂಡಿದೆ.

ಇನ್ನು ರಾಜ್ಯ ಸರ್ಕಾರದ ಸೆಸ್ ಕೇವಲ ಸಾಗಣೆಗೆ ಮಾತ್ರ ವಿಧಿಸಲಾಗುವುದೇ ಹೊರತು ಖರೀದಿಸಿದ ಉತ್ಪನ್ನಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ. ಗ್ರಾಹಕರು ಖರೀದಿಸುವ ಉತ್ಪನ್ನಗಳು ಅಥವಾ ಸರಕುಗಳಿಗೆ ನಾವು ಯಾವುದೇ ತೆರಿಗೆ ವಿಧಿಸುತ್ತಿಲ್ಲ. ಬದಲಾಗಿ ಅವುಗಳ ಸಾಗಾಟದ ಮೇಲೆ ಮಾತ್ರವೇ ಸೆಸ್ ವಿಧಿಸಲಾಗುತ್ತದೆ ಎಂದು ಸಚಿವ ಸಂತೋಷ್ ಲಾಡ್ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕದ ಕಾರ್ಮಿಕ ಇಲಾಖೆಯು ಜೊಮಾಟೊ, ಡಂಜೊ, ಸ್ವಿಗ್ಗಿ, ಜೆಪ್ಟೊ, ಓಲಾ ಮತ್ತು ಇತರ ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳ ಮೇಲಿನ ಪ್ರತಿಯೊಂದು ವಹಿವಾಟಿನ ಮೇಲೆ ಸೆಸ್ ವಿಧಿಸಿ, ಅದರಿಂದ ಸಂಗ್ರಹವಾಗುವ ಹಣವನ್ನು ಗಿಗ್ ಕಾರ್ಮಿಕರ ಕಲ್ಯಾಣ ನಿಧಿಗೆ ಬಳಸಲಾಗುತ್ತದೆ ಎಂದೂ ಹೇಳಿದ್ದಾರೆ.
ಈ ಅಗ್ರಿಗೇಟರ್‌ಗಳ ಸೇವೆಗಳ ಮೇಲೆ ಸೆಸ್ ವಿಧಿಸುವುದರಿಂದ ಆ ಸೇವೆಗಳು ಹಾಗೂ ಗ್ರಾಹಕರು ಖರೀದಿಸುವ ಉತ್ಪನ್ನಗಳ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆಯೂ ಇದೆ. ಸೆಸ್ ಅನ್ನು ಗ್ರಾಹಕರ ವೇದಿಕೆಗಳಿಂದಲೇ ಸಂಗ್ರಹಿಸಲಾಗುತ್ತದೆ. ಅಗ್ರಿಗೇಟರ್‌ಗಳು ಸೆಸ್ ಅನ್ನು ಕಲ್ಯಾಣ ಮಂಡಳಿಗೆ ವರ್ಗಾಯಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅಲ್ಲದೆ ಪ್ರತಿ ವಹಿವಾಟಿನ ಮೇಲೆ ಸೆಸ್ ಅನ್ವಯಿಸುವುದರಿಂದ ಗ್ರಾಹಕರ ಮೇಲೂ ಹೆಚ್ಚು ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಬಿಜೆಪಿ ನಾಯಕರಿಂದ ಆಕ್ಷೇಪವೂ ವ್ಯಕ್ತವಾಗಿದೆ. ಸರ್ಕಾರದ ಈ ನಿರ್ಧಾರವನ್ನು ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಖಂಡಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಅವರ ಖಜಾನೆಯಲ್ಲಿ ಒಂದು ನಯಾಪೈಸೆಯೂ ಇಲ್ಲ. ಅವರ ಬಳಿ ಹಣವಿಲ್ಲದ ಕಾರಣ ಸ್ವಿಗ್ಗಿ, ಉಬರ್ ಇತ್ಯಾದಿಗಳ ಮೇಲೆ ಈ ರೀತಿಯ ತೆರಿಗೆಯನ್ನು ವಿಧಿಸಲು ಅವರು ಬಯಸಿದ್ದಾರೆ. ಹೇಗಾದರೂ ಮಾಡಿ ಹಣ ದೋಚುವುದೇ ಅವರ ಉದ್ದೇಶ ಎಂದಿದ್ದಾರೆ.












Click it and Unblock the Notifications