ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ, ಕೃಷ್ಣಾ: ವಕೀಲರಿಗೆ ಸುರಿಸಿದ್ದು ಕೋಟಿ, ಕೋಟಿ ಲೆಕ್ಕದಲ್ಲಿ, ಯಾರಿಗೆ ಎಷ್ಟೆಷ್ಟು?

By Balaraj
|
Google Oneindia Kannada News

ಕಾವೇರಿ, ಕೃಷ್ಣಾ, ಮಹದಾಯಿ ನದಿನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಸತತವಾಗಿ ಅನ್ಯಾಯವಾಗುತ್ತಿರುವುದು ಒಂದೆಡೆಯಾದರೆ, ರಾಜ್ಯದ ಪರ ವಕಾಲತ್ತು ವಹಿಸುತ್ತಿರುವ ವಕೀಲರಿಗೆ ಸರಕಾರ ಕೋಟಿ ಕೋಟಿ ಹಣ ಬಿಡುಗಡೆ ಮಾಡುತ್ತಿದೆ.

ಮಾಹಿತಿ ಹಕ್ಕು ಹೋರಾಟಗಾರ, ಬೆಳಗಾವಿಯ ಭೀಮಪ್ಪ ಗಡಾದ್ ಆರ್ಟಿಐನಿಂದ ಪಡೆದ ಮಾಹಿತಿಯ ಪ್ರಕಾರ, ನದಿನೀರು ಹಂಚಿಕೆಯ ವಿಚಾರದಲ್ಲಿ ರಾಜ್ಯದ ಪರವಾಗಿ ವಾದ ಮಾಡುತ್ತಿರುವ ವಕೀಲರಿಗೆ ಇದುವರೆಗೆ ರಾಜ್ಯ ಸರಕಾರ 76.21 ಕೋಟಿ ರೂಪಾಯಿ ಹಣವನ್ನು ಪಾವತಿಸಿದೆ. (ಗೌಡರಿಂದ ಕಾವೇರಿಗಾಗಿ ಉಪವಾಸ ಸತ್ಯಾಗ್ರಹ)

ಸರಕಾರ ನೇಮಿಸಿರುವ ವಕೀಲರಿಂದ ರಾಜ್ಯಕ್ಕೆ ಏನಾದರೂ ಲಾಭವಾಗಿದೆಯಾ, ಜನರ ಮತ್ತು ರೈತರ ಹಿತ ಕಾಪಾಡುವಲ್ಲಿ ವಕೀಲರು ಸಮರ್ಥವಾಗಿ ವಾದ ಮಂಡಿಸಿದ್ದಾರೋ ಎನ್ನುವುದು ನಂತರದ ಪ್ರಶ್ನೆಯಾದರೂ, ರಾಜ್ಯದ ಬೊಕ್ಕಸದಿಂದ ಇದುವರೆಗೆ ಕೋಟಿ ಕೋಟಿ ಲೆಕ್ಕದಲ್ಲಿ ಫೀಸ್ ಸಂದಾಯವಾಗಿದೆ.

ಇದುವರೆಗೆ ಯಾವ ಯಾವ ವಕೀಲರು ರಾಜ್ಯದ ಪರವಾಗಿ ವಾದ ಮಂಡಿಸಿದ್ದಾರೋ, ಅವರಿಂದ ರಾಜ್ಯಕ್ಕೆ ಏನೂ ಲಾಭವಾಗಿಲ್ಲ. ಹಾಗಾಗಿ, ಅವರಿಗೆ ನೀಡಿದ ಫೀಸನ್ನು ವಾಪಸ್ ಪಡೆಯಬೇಕು ಎನ್ನುವುದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಅವರ ಸಹಜ ಆಗ್ರಹ. (ನಾರಿಮನ್ ಕರ್ನಾಟಕ ಪರ ವಾದ ಮಾಡಲ್ಲ ಎಂದು ಹೇಳಿಲ್ಲ)

ರಾಜ್ಯ ಸರಕಾರ ಇದುವರೆಗೆ ವಕೀಲರಿಗೆ ಪಾವತಿಸಿರುವ 76.21 ಕೋಟಿ ರೂಪಾಯಿಯಲ್ಲಿ ಅಗ್ರಪಾಲು ಕೃಷ್ಣಾ ಮತ್ತು ನಂತರ ಕಾವೇರಿ ನದಿನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ್ದು. ಯಾವ ಯಾವ ವಕೀಲರಿಗೆ ರಾಜ್ಯ ಸರಕಾರ ಕೊಟ್ಟಿದ್ದೆಷ್ಟು? ಮುಂದೆ ಓದಿ... (ಮಾಹಿತಿ: ಪಬ್ಲಿಕ್ ಟಿವಿ)

ಮಾಹಿತಿ ಹಕ್ಕು ಹೋರಾಟಗಾರ

ಮಾಹಿತಿ ಹಕ್ಕು ಹೋರಾಟಗಾರ

ರಾಜ್ಯದ ನೆಮ್ಮದಿಯನ್ನೇ ಹಾಳು ಮಾಡಿರುವ ಎರಡು ನದಿನೀರು ಹಂಚಿಕೆ ವಿಚಾರದಲ್ಲಿ, ಬೆಳಗಾವಿಯ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್, ವಕೀಲರಿಗೆ ನೀಡಿರುವ ಫೀಸ್ ಬಗ್ಗೆ ದಾಖಲೆಯನ್ನು ಆರ್ಟಿಐನಿಂದ ಪಡೆದ ಮಾಹಿತಿಯಂತೆ ಬಿಡುಗಡೆಗೊಳಿಸಿದ್ದಾರೆ.

ಕಾವೇರಿಯೂ ಹಿಂದೆ ಬಿದ್ದಿಲ್ಲ

ಕಾವೇರಿಯೂ ಹಿಂದೆ ಬಿದ್ದಿಲ್ಲ

ನ್ಯಾಯಾಧಿಕರಣದ ಮುಂದೆ ವಾದ ಮಂಡಿಸಲು ರಾಜ್ಯದ ಪರ ವಕೀಲರಿಗೆ ವಾದ ಮಂಡಿಸಲು ಒಟ್ಟು ಸಂದಾಯವಾಗಿರುವ ಫೀಸ್ - 76.21 ಕೋಟಿ (ಸೆಪ್ಟಂಬರ್ 2016ರವರೆಗೆ ಅನ್ವಯವಾಗುವಂತೆ)

ಕೃಷ್ಣಾ ನದಿಗಾಗಿ ನಡೆದ ಸಿಟ್ಟಿಂಗ್ - 306
ಕಾವೇರಿ ನದಿಗಾಗಿ ನಡೆದ ಸಿಟ್ಟಿಂಗ್ - 580

ತೆರಿಗೆ ಹಣದಲ್ಲಿ ಪಾವತಿಯಾಗಿದ್ದು ಎಷ್ಟು?

ತೆರಿಗೆ ಹಣದಲ್ಲಿ ಪಾವತಿಯಾಗಿದ್ದು ಎಷ್ಟು?

ಮಾಹಿತಿ ಹಕ್ಕು ಹೋರಾಟಗಾರರಿಗೆ ಸಿಕ್ಕಿರುವ ಅಧಿಕೃತ ಮಾಹಿತಿಯ ಪ್ರಕಾರ, ಕೃಷ್ಣ ಮತ್ತು ಕಾವೇರಿ ವಿಚಾರದಲ್ಲಿ ಸರಕಾರ ಪಾವತಿಸಿರುವ ಮೊತ್ತ ಹೀಗಿದೆ..

ಕೃಷ್ಣಾ ನದಿಗಾಗಿ ವಕೀಲರ ಫೀಸ್ - 39.69 ಕೋಟಿ
ಕಾವೇರಿ ನದಿಗಾಗಿ ವಕೀಲರ ಫೀಸ್ - 36.52 ಕೋಟಿ

ಫೀಸ್ ಕೊಟ್ಟು ಲಾಭವಾಗಿದ್ದೇನು?

ಫೀಸ್ ಕೊಟ್ಟು ಲಾಭವಾಗಿದ್ದೇನು?

ಟಾಪ್ ಟೆನ್ ಫೀಸ್ ಪಡೆದುಕೊಂಡಿರುವ ವಕೀಲರಲ್ಲಿ ಟಾಪ್ 5
1. ಅನಿಲ್ ದಿವಾನ್ - 26.24 ಕೋಟಿ
2. ಫಾಲಿ ನಾರಿಮನ್ - 14.76 ಕೋಟಿ
3. ಶರತ್ ಜವಳಿ - 9.40 ಕೋಟಿ
4. ಮೋಹನ್ ಕಾತರಕಿ - 7.85 ಕೋಟಿ
5. ಬೃಜೇಶ್ ಕಾಳಪ್ಪ - 3.89 ಕೋಟಿ

ಟಾಪ್ ಟೆನ್ ಫೀಸ್ ಪಡೆದುಕೊಂಡಿರುವ ವಕೀಲರಲ್ಲಿ ಟಾಪ್ 6-10

ಟಾಪ್ ಟೆನ್ ಫೀಸ್ ಪಡೆದುಕೊಂಡಿರುವ ವಕೀಲರಲ್ಲಿ ಟಾಪ್ 6-10

6. ಎಸ್ ಪಿ ಸಿಂಗ್ - 2.53 ಕೋಟಿ
7. ರಣವೀರ್ ಸಿಂಗ್ - 1.50 ಕೋಟಿ
8. ಎಸ್ ಪಿ ಶರ್ಮಾ - 1.46 ಕೋಟಿ
9. ಆರ್ ಎಸ್ ಪಾಪು - 1.30 ಕೋಟಿ
10. ಬಸವಪ್ರಭು ಪಾಟೀಲ್ - 1.08 ಕೋಟಿ

English summary
Government of Karnataka spent crores together towards advocate fee to argue in Court for Cauvery and Krishna river water sharing issue, as per RTI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X