ರೈತರಿಗೆ ಗುಡ್‌ ನ್ಯೂಸ್:‌ ನಿಮ್ಮ ಬ್ಯಾಂಕ್‌ ಖಾತೆ ಪರೀಕ್ಷಿಸಿಕೊಳ್ಳಿ, ಬಾರದೇ ಇದ್ದರೆ ಹೀಗೆ ಮಾಡಿ

ಬೆಂಗಳೂರು, ಫೆಬ್ರವರಿ 12: ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಆಡಳಿತರೂಢ ಕಾಂಗ್ರೆಸ್‌, ಕೊನೆಗೂ ರಾಜ್ಯದ ರೈತರಿಗೆ ಬರ ಪರಿಹಾರವನ್ನ ಬಿಡುಗಡೆ ಮಾಡಿದೆ. ಇಷ್ಟು ದಿನಗಳ ಕಾಲ ಬರ ಪರಿಹಾರವನ್ನ ಬಿಡುಗಡೆ ಮಾಡುವಂತೆ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ಮಾಡಿ ಮನವಿ ಸಲ್ಲಿಸಿದ್ರು. ಆದರೆ, ಕೇಂದ್ರ ಸರರಕಾರದಿಂದ ಅನುದಾನ ಬಾರದೇ ಇದ್ದುದರಿಂದ ಕರ್ನಾಟಕ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.

ಹೌದು, ವಿಧಾನಸಭಾ ಚುಣಾವಣೆಯಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನ ಜಾರಿಗೊಳಿಸಿರುವ ಕಾಂಗ್ರೆಸ್‌,ಈ ಹಿಂದೆ ನೀಡಿದ್ದ ಭರವಸೆಯಂತೆ ಒಟ್ಟು 628 ಕೋಟಿ ರೂ. ಹಣವನ್ನು 33 ಲಕ್ಷ ರೈತರ ಖಾತೆಗೆ ವರ್ಗಾವಣೆ ಮಾಡಿರುವ ವಿಷಯವನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪ್ರಕಟಿಸಿದ್ದಾರೆ.

 Karnataka Government Releases 628 Crore Drought Relief Fund To 33 Lakh Farmers Bank Account

ಈಗಾಗಲೇ ಕರ್ನಾಟಕ ಸರ್ಕಾರ ಬರ ನಿರ್ವಹಣೆಗೆ ಪರಿಹಾರ ಕ್ರಮವಾಗಿ 2000 ಕೋಟಿ ರೂ. ಅನುದಾನವನ್ನು ನಿಗದಿ ಪಡಿಸಿದ್ದು, ಈಗಾಗಲೇ ರೂ 628 ಕೋಟಿ ಹಣವನ್ನು ನೇರವಾಗಿ 33 ಲಕ್ಷ ರೈತರ ಖಾತೆಗೆ ಬಿಡುಗಡೆ ಮಾಡಿದೆ. ಇನ್ನೂ 1.6 ಲಕ್ಷ ರೈತರ ಬ್ಯಾಂಕ್ ಖಾತೆಯ ಮಾರ್ಪಾಡು ಪ್ರಕ್ರಿಯೆ ನಡೆಯುತ್ತಿದ್ದು, ಇದು ಸರಿಯಾದ ಕೂಡಲೇ ಅವರ ಖಾತೆಗಳಿಗೂ ಬರ ಪರಿಹಾರದ ಹಣವನ್ನು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಬ್ಯಾಂಕ್‌ ಖಾತೆ ಹಣ ಬಾರದೇ ಇದ್ದರೇ ಹೀಗೆ ಮಾಡಿ

ಬರ ಪರಿಹಾರ ಬಿಡುಗಡೆಯಾಗಿದೆ ಎಂದು ಕೃಷ್ಣಬೈರೇಗೌಡ ಅವರ ಮಾಹಿತಿ ನೀಡಿದ್ದಾರೆ. ಅರ್ಹ ರೈತರಿಗೆ ಬರ ಪರಿಹಾರ ತಲುಪಿಸುವ ಹಾಗೂ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಬರ ಪರಿಹಾರ ಬಿಡುಗಡೆ ಮಾಡಿರುವ ರೈತ ಪಟ್ಟಿಯನ್ನು ಪ್ರಕಟ ಮಾಡಬೇಕು ಎಂದು ಸೂಚನೆ ನೀಡಿರುವ ಹಿನ್ನೆಲೆ, ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ರೈತರ ಹೆಸರು ಪ್ರಕಟಿಣೆ ಮಾಡಲಾಗಿದೆ. ಆ ಪಟ್ಟಿಯಲ್ಲಿ ರೈತರ ಹೆಸರು ಬಿಟ್ಟು ಹೋಗಿದ್ದಲ್ಲಿ, ಅಂತಹ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸ್ಥಳೀಯ ಕಂದಾಯ ಇಲಾಖೆ ಕಚೇರಿಗೆ ಭೇಟಿ ನೀಡಿ, ಹೆಸರು ಸೇರ್ಪಡಿಕೊಳ್ಳಬೇಕು ಸಚಿವರಾದ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

 Karnataka Government Releases 628 Crore Drought Relief Fund To 33 Lakh Farmers Bank Account

ಬಿಜೆಪಿ-ಜೆಡಿಎಸ್‌ಗೆ ನಿಜವಾದ ಕಾಳಜಿ ಇದ್ರೆ ಬರ ಪರಿಹಾರ ಇವತ್ತೇ ಘೋಷಿಸಲಿ

ಎನ್‌ಡಿಆರ್‌ಎಫ್‌ನಿಂದ ಒಂದು ನಯಾ ಪೈಸೆ ಬಂದಿಲ್ಲ. ಕೇಂದ್ರ ಗೃಹ ಸಚಿವರೇ ಎನ್‌ಡಿಆರ್‌ಎಫ್ ಸಮಿತಿ ಅಧ್ಯಕ್ಷರು, ಅಮಿತ್ ಶಾ ಇಂದು ವಾಪಾಸ್ ಆಗುವ ಮುನ್ನ ರಾಜ್ಯಕ್ಕೆ ಬರ ಪರಿಹಾರ ಘೋಷಣೆ ಮಾಡಿ ಹೋಗಬೇಕು
ನಾವು ಭಿಕ್ಷೆ ಕೇಳುತ್ತಿಲ್ಲ, ಎನ್‌ಡಿಆರ್‌ಎಫ್ ಸಾಂವಿಧಾನಿಕ ಸಂಸ್ಥೆ. ಹೆಚ್ವು ತೆರಿಗೆ ಕಟ್ಟುವ ರಾಜ್ಯ ನಮ್ಮದು, ಉದಾರವಾಗಿ ಕೊಡಿ ಅಂತ ಅಲ್ಲ, ನಮ್ಮ ಪಾಲಿನ ಹಣ ಕೊಡಿ. ಇವತ್ತೆ ಬರ ಪರಿಹಾರ ಘೋಷಣೆ ಮಾಡಿ ಹೋಗಬೇಕು ಬಿಜೆಪಿ ಜೆಡಿಎಸ್‌ಗೆ ನಿಜವಾದ ಕಾಳಜಿ ಇದ್ರೆ ಬರ ಪರಿಹಾರವನ್ನ ಇವತ್ತೇ ಘೋಷಿಸಬೇಕು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+