ಕರ್ನಾಟಕ ಸರ್ಕಾರದ 2017ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ

Written By: Ramesh
Subscribe to Oneindia Kannada

ಬೆಂಗಳೂರು, ಡಿಸೆಂಬರ್.29 : ಕರ್ನಾಟಕ ಸರ್ಕಾರದ 2017ನೇ ವರ್ಷದ ಕ್ಯಾಲೆಂಡರ್ ಮತ್ತು ಡೈರಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಬುಧವಾರ ಇಂದು ಬಿಡುಗಡೆ ಮಾಡಿದರು.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಕೃಷಿ ಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಅನ್ನಭಾಗ್ಯ, ಗಾಂಧೀಜಿ ಕನಸು ಕರ್ನಾಟಕದಲ್ಲಿ ನನಸು ಮತ್ತು ಮೆಟ್ರೋಗಳ ವರ್ಣ ರೇಖಾ ಚಿತ್ರದಿಂದ ಕೂಡಿರುವ ಈ ಕ್ಯಾಲೆಂಡರ್ ಯೋಜನೆಗಳ ಸಂಕ್ಷಿಪ್ತ ಮಾಹಿತಿ ಮತ್ತು ಚಿತ್ರಣಗಳನ್ನು ಒಳಗೊಂಡಿದೆ.

karnataka government releases 2017 calendar

ಸರ್ಕಾರಿ ಮುದ್ರಣಾಲಯದಲ್ಲಿ 20 ರುಗಳಿಗೆ ಕ್ಯಾಲೆಂಡರ್ ಮತ್ತು 50 ರುಗಳಿಗೆ ಡೈರಿ ದೊರೆಯಲಿವೆ.

ಖ್ಯಾತ ರೇಖಾಚಿತ್ರ ಕಲಾವಿದ ಚಂದ್ರನಾಥ್ ಆಚಾರ್ಯ ಅವರು ರಚಿಸಿರುವ ಈ ವಿಶೇಷ ಕ್ಯಾಲೆಂಡರಿನ ಪರಿಕಲ್ಪನೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರದ್ದಾಗಿದೆ.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್, ಸರ್ಕಾರಿ ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಯ ಇಲಾಖೆಯ ನಿರ್ದೇಶಕ ಎಂ. ರವಿಶಂಕರ್ ಹಾಗೂ ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಡಾ: ಪಿ.ಸಿ. ಜಾಫರ್ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Minister of Primary and Secondary Education Tanveer Sait released 2017th karnataka government calendar on Wednesday.
Please Wait while comments are loading...