ರಾಜ್ಯದಲ್ಲಿ ರಾಜಕಾರಣಿಗಳಿಗಿಲ್ಲ ಬರ: 33 ಸಚಿವರಿಗೆ ಹೊಸ ಕಾರು ಭಾಗ್ಯ! ಖರ್ಚಾದ ಹಣವೆಷ್ಟು ಗೊತ್ತಾ?

ಬೆಂಗಳೂರು, ಅಕ್ಟೋಬರ್‌ 20: ರಾಜ್ಯದಲ್ಲಿ ಉತ್ತಮ ಮಳೆಯಾಗದೇ ಭೀಕರ ಬರಗಾಲ ತಾಂಡವವಾಡುತ್ತಿದ್ದು, ಮಳೆ,ಬೆಳೆಯಿಲ್ಲದೇ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅಲ್ಲದೇ ಅಭಿವೃದ್ದಿ ಕೆಲಸಗಳೆಲ್ಲಾ ಮಂದಗತಿಯಲ್ಲಿ ಸಾಕುತ್ತಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ದಸರಾ ಹಬ್ಬಕ್ಕೆ ಸಂಪುಟದ ಸಚಿವರಿಗೆ ಭರ್ಜರಿ ಹೊಸ ಇನೋವಾ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ.

ಹೌದು, ರಾಜ್ಯದಲ್ಲಿ ಉತ್ತರ ಮಳೆಯಾಗದೇ, ಇತ್ತ ಗ್ಯಾರಂಟಿ ಯೋಜನೆಗಳಿಂದಾಗಿ ಎಲ್ಲಾ ಇಲಾಖೆಯಲ್ಲೂ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ ಎಂದು ವಿಪಕ್ಷಗಳು ಸರಣಿ ಆರೋಪಗಳನ್ನ ಮಾಡುತ್ತಿದ್ದು, ಭೀಕರ ಬರಗಾಲದ ನಡುವೆ ಸಚಿವರಿಗೆ ಹೊಸ ಇನೋವಾ ಹೈಬ್ರೀಡ್ ಕಾರುಗಳನ್ನು ಖರೀದಿಸಿ ಅದನ್ನು ವಿಧಾನಸೌಧದ ಮುಂದೆ ಸಾಲಾಗಿ ಇರಿಸಿರುವ ವಿಡಿಯೋ ವೈರಲ್‌ ಆಗಿದೆ.

karnataka government purchase new 33 innova hybrid cars for ministers

ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ರಾಜಕಾರಣಿಗಳಿಗೆ ಯಾವುದೇ ಬರವಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿದ್ದು, ಬರಗಾಲದಲ್ಲೂ ರಾಜ್ಯ ಸರ್ಕಾರ ಸಂಪುಟದ 33 ಸಚಿವರಿಗೆ ಇನೋವಾ ಹೈಬ್ರೀಡ್ ಕಾರುಗಳನ್ನು ಖರೀದಿ ಮಾಡಿದೆ. 33 ಸಚಿವರಿಗಾಗಿ ಬರೋಬ್ಬರಿ 9 ಕೋಟಿ 90 ಲಕ್ಷ ರೂ ವೆಚ್ಚದಲ್ಲಿ ಇನೋವಾ ಹೈಬ್ರೀಡ್‌ ಕಾರುಗಳನ್ನು ರಾಜ್ಯ ಸರ್ಕಾರ ಖರೀದಿ ಮಾಡಿದೆ ಎಂದು ತಿಳಿದು ಬಂದಿದೆ.

ಇನ್ನೂ ಅಗಸ್ಟ್ ತಿಂಗಳ 17 ರಂದೇ 33 ಕಾರು ಇನ್ನೋವಾ ಕಾರು ಖರೀದಿಗಾಗಿ ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಹಣ ಬಿಡುಗಡೆ ಮಾಡಿತ್ತು. ಇದರಿಂದಾಗಿ ಬರಗಾಲ ಇದ್ದರೂ, ಸಚಿವರ ಕಾರುಬಾರಿಗೇನು ಕೊರತೆಯಿಲ್ಲ ಎಂದು ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಸುತ್ತಿದ್ದಾರೆ. ಇನ್ನೂ ನಾಡ ಹಬ್ಬ ದಸರಾ ಆರಂಭವಾಗ್ತಿದ್ದಂತೆ ಎಲ್ಲಾ ಸಚಿವರ ನಿವಾಸಕ್ಕೆ ಹೊಸ ಕಾರುಗಳು ಬಂದು ನಿಂತಿದೆ.

ಇನ್ನೂ ರಾಜ್ಯದಲ್ಲಿ ಬರಗಾಲವಿದೆ ಅನುತ್ಪಾದಕ ವೆಚ್ಚಕ್ಕೆ ಕಡಿತ ಹಾಕಬೇಕು ಎನ್ನುತ್ತಿರುವ ರಾಜ್ಯ ಸರ್ಕಾರ, ಇನ್ನೊಂದೆಡೆ ತನ್ನ ಸಚಿವರಿಗೆ ದಸರಾ ಹಬ್ಬದಂದು ಹೊಸ ಇನೋವಾ ಹೈಬ್ರೀಡ್ ಕಾರುಗಳನ್ನು ಖರೀದಿಸಿದೆ. ರಾಜ್ಯ ಮಳೆಯಿಲ್ಲದೇ ಭೀಕರ ಬರಗಾಲವಿದೆ, ಈ ನಡುವೆ ಮಳೆ ಪರಿಹಾರವನ್ನು ರಾಜ್ಯ ಸರ್ಕಾರ ನೀಡಿಲ್ಲ, ಇದರ ನಡುವೆ ಸರ್ಕಾರದಿಂದ ಕಾರು ಖರೀದಿ ಮಾಡಲಾಗಿದೆ. ಅಭಿವೃದ್ಧಿ ವಿಚಾರಕ್ಕೆ ಅನುದಾನದ ಕೊರತೆ ಅನ್ನೋ ಸರ್ಕಾರದಿಂದ ಕಾರು ಖರೀದಿಗೆ ಕೋಟಿ ಕೋಟಿ ಹಣ ವಿನಿಯೋಗ ಮಾಡಿದೆ.

ಶಾಸಕರು, ಸಚಿವರ ವೇತನ ಏರಿಕೆಗೆ ಸಂಪುಟ ಒಪ್ಪಿಗೆ!

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು 2022ರಲ್ಲಿ ಶಾಸಕರು, ಸಚಿವರ ವೇತನ ಹಾಗೂ ಭತ್ಯೆಯನ್ನು ಹೆಚ್ಚಳ ಮಾಡಿದ್ದ ನಿರ್ಣಯಕ್ಕೆ ಘಟನೋತ್ತರ ಒಪ್ಪಿಗೆ ನೀಡಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ನಿರ್ಣಯ ಕೈಗೊಳ್ಳಲಾಗಿದೆ. 2022ರ ಫೆಬ್ರುವರಿಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ವೇತನ, ಭತ್ಯೆ ಪರಿಷ್ಕರಣೆ ಮಾಡಲಾಗಿತ್ತು. ಈವರೆಗೆ ಪರಿಷ್ಕೃತ ವೇತನವನ್ನು ಶಾಸಕರು, ಸಚಿವರು ಪಡೆಯುತ್ತಿದ್ದರು. ಆದರೆ ಇದಕ್ಕೆ ಸಚಿವ ಸಂಪುಟ ಒಪ್ಪಿಗೆ ಪಡೆಯದ ಹಿನ್ನೆಲೆಯಲ್ಲಿ ಘಟನೋತ್ತರ ಒಪ್ಪಿಗೆ ನೀಡಿರುವುದಾಗಿ ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+