2026 Holiday List: ಕರ್ನಾಟಕದ 2026ರ ಸರ್ಕಾರಿ ರಜೆ ದಿನಗಳು, ಪಟ್ಟಿ ಇಲ್ಲಿದೆ
ಬೆಂಗಳೂರು, ನವೆಂಬರ್ 13: 2025ನೇ ವರ್ಷ ಪೂರ್ಣಗೊಳ್ಳಲು ಕೆಲವೇ ದಿನಗಳು ಬಾಕಿ ಇದೆ. 2026ನೇ ವರ್ಷವನ್ನು ಸ್ವಾಗತಿಸಲು ಜನರು ತಯಾರಾಗುತ್ತಿದ್ದಾರೆ. ಹೊಸ ವರ್ಷದಲ್ಲಿ ಕರ್ನಾಟಕದಲ್ಲಿ ಸಿಗುವ ಸರ್ಕಾರಿ ರಜೆಗಳು ಎಷ್ಟು? ಎಂಬುದರ ಮೇಲೆ ಸಾರ್ವಜನಿಕರು ತಮ್ಮ ಪ್ರವಾಸದ ಯೋಜನೆ ರೂಪಿಸುತ್ತಾರೆ. ಕರ್ನಾಟಕ ಸರ್ಕಾರವು 2026ನೇ ಸಾಲಿನ ಸರ್ಕಾರಿ ರಜೆ ಪಟ್ಟಿಯನ್ನು ಜನರ ಮಾಹಿತಿಗಾಗಿ ಬಿಡುಗಡೆ ಮಾಡಿದೆ.
ಕರ್ನಾಟಕ ಸರ್ಕಾರ ಇಂದು(ಗುರುವಾರ) 2026ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳಂದು ಇರುವ ಸರ್ಕಾರಿ ರಜೆಯನ್ನು ಈ ಪಟ್ಟಿಯಲ್ಲಿ ಸೇರಿಸಿಲ್ಲ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ರಜೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಗಣರಾಜ್ಯೋತ್ಸವ, ಯುಗಾದಿ ಹಬ್ಬ, ಮೂಹರಂ ಕಡೆ ದಿನ ಮತ್ತು ಮಹಾಲಯ ಅಮವಾಸ್ಯೆ ಹಾಗೂ ಎರಡನೇ ಶನಿವಾರದಂದು ಬರುವ ಕನಕದಾಸ ಜಯಂತಿನಮೂದಿಸಿರುವುದಿಲ್ಲ.

ಸಾರ್ವತ್ರಿಕ ರಜಾ ದಿನಗಳು
* 15.01.2026, ಗುರುವಾರ. ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
* 26.01.2026 , ಸೋಮವಾರ. ಗಣರಾಜ್ಯೋತ್ಸವ
* 19.03.2026, ಗುರುವಾರ. ಯುಗಾದಿ ಹಬ್ಬ
* 21.03.2026, ಶನಿವಾರ. ಖುತುಬ್-ಎ-ರಂಜಾನ್
* 31.03.2026, ಮಂಗಳವಾರ. ಮಹಾವೀರ ಜಯಂತಿ
*03.04.2026, ಶುಕ್ರವಾರ. ಗುಡ್ ಪ್ರೈಡ್
*14.04.2026, ಮಂಗಳವಾರ. ಡಾ|| ಬಿ. ಆರ್. ಅಂಬೇಡ್ಕರ್ ಜಯಂತಿ
*20.04.2026, ಸೋಮವಾರ. ಬಸವ ಜಯಂತಿ, ಅಕ್ಷಯ ತೃತೀಯ
*01.05.2026, ಶುಕ್ರವಾರ. ಕಾರ್ಮಿಕ ದಿನಾಚರಣೆ
*28.05.2026, ಗುರುವಾರ, ಬಕ್ರೀದ್
*26.06.2026, ಶುಕ್ರವಾರ. ಮೊಹರಂ ಕಡೆ ದಿನ
*15.08.2026, ಶನಿವಾರ. ಸ್ವಾತಂತ್ರ್ಯ ದಿನಾಚರಣೆ
*26.08.2026, ಬುಧವಾರ. ಈದ್-ಮಿಲಾದ್
*14.09.2026, ಸೋಮವಾರ. ವರಸಿದ್ಧಿ ವಿನಾಯಕ ವ್ರತ
*02.10.2026, ಶುಕ್ರವಾರ. ಗಾಂಧಿ ಜಯಂತಿ
*20.10.2026, ಮಂಗಳವಾರ.ಮಹಾನವಮಿ, ಆಯುಧಪೂಜೆ
*21.10.2026, ಬುಧವಾರ. ವಿಜಯದಶಮಿ
*10.11.2026, ಮಂಗಳವಾರ. ಬಲಿಪಾಡ್ಯಮಿ, ದೀಪಾವಳಿ
*27.11.2026, ಶುಕ್ರವಾರ. ಕನಕದಾಸ ಜಯಂತಿ
*25.12.2026, ಶುಕ್ರವಾರ. ಕ್ರಿಸ್ ಮಸ್
ಭಾನುವಾರದಂದು ಬರುವ ಹಬ್ಬಗಳು
ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಮಹಾ ಶಿವರಾತ್ರಿ (15.02.2026), ಮಹರ್ಷಿ ವಾಲ್ಮೀಕಿ ಜಯಂತಿ (25.10.2026), ಕನ್ನಡ ರಾಜ್ಯೋತ್ಸವ (01.11.2026) ಹಾಗೂ ನರಕ ಚತುರ್ದಶಿ (08.11.2026) ಮತ್ತು ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆ (10.10.2026) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು. ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗಧಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗಧಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.
ದಿನಾಂಕ:03.09.2026 (ಗುರುವಾರ) ಕೈಲ್ ಮೂಹೂರ್ತ, ದಿನಾಂಕ:18.10.2026 (ಭಾನುವಾರ) ತುಲಾ .. ಸಂಕ್ರಮಣ ಹಾಗೂ ದಿನಾಂಕ:26.11.2026 (ಗುರುವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.ಶಿಕ್ಷಣ ಇಲಾಖೆಗೆ ಸಂಬಂಧಿಸಿದ ರಜೆಗಳಿಗೆ ಅನ್ವಯಿಸಿದಂತೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸುವರು.
ಸಾರ್ವತ್ರಿಕ ರಜಾ ದಿನಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರರು ಎರಡು ದಿವಸಗಳಿಗೆ ಮೀರದಂತೆ 2026ನೇ ವರ್ಷದಲ್ಲಿ ಅಧಿಸೂಚನೆ-1ರ ಅನುಬಂಧದಲ್ಲಿ ತಿಳಿಸಿರುವ ಪರಿಮಿತ ರಜೆಯನ್ನು ಪೂರ್ವಾನುಮತಿ ಪಡೆದು ಉಪಯೋಗಿಸಿಕೊಳ್ಳಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಪ್ರಸ್ತುತ ಅನುಮತಿಗೆ ಮಂಜೂರಾತಿ ನೀಡತಕ್ಕದ್ದು.












Click it and Unblock the Notifications