ಆರೋಗ್ಯ ಸಂಜೀವಿನಿ ಕುರಿತು ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ
ಬೆಂಗಳೂರು, ಫೆಬ್ರವರಿ 22: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಿಂದ ಹೊರಗುಳಿಯಲು ಬಯಸುವ ನೌಕರರಿಗಾಗಿ ಆರ್ಥಿಕ ಇಲಾಖೆ HRMS-1 ವೆಬ್ ಅಪ್ಲಿಕೇಶನ್ ಅಪ್ಲಿಕೇಶನ್ನಲ್ಲಿ ಹೊಸ ಸೌಲಭ್ಯವನ್ನು ಕಲ್ಪಿಸಿದೆ. ಹಾಗಾದ್ರೆ ಇದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಯೋಜನೆಯಿಂದ ಹೊರಗುಳಿಯಲು ಏನು ಮಾಡಬೇಕು?
* ಲಾಗಿನ್ ಪ್ರಕ್ರಿಯೆ: ಮೊದಲಿಗೆ ಸಂಬಂಧಪಟ್ಟ DDO ಲಾಗಿನ್ ಕ್ರೆಡೆನ್ಶಿಯಲ್ ಬಳಸಿ HRMS-1 ಸೈಟ್ಗೆ ಲಾಗಿನ್ ಆಗಬೇಕು.
* ನ್ಯಾವಿಗೇಷನ್: ಸೈಟ್ನಲ್ಲಿ Service Register > Family Dependent Entry Form - KASS ಆಯ್ಕೆ ಮಾಡಿ.
* ನೌಕರರ ವಿವರ: ನೌಕರರ KGID ಸಂಖ್ಯೆಯನ್ನು ನಮೂದಿಸಿ GET ಮೇಲೆ ಕ್ಲಿಕ್ ಮಾಡಿ.
* ದೃಢೀಕರಣ: ಸ್ಕ್ರೀನ್ ಮೇಲೆ ಕಾಣಿಸುವ "Do you wish to OPT-OUT from the KASS Scheme?" ಎಂಬ ಪ್ರಶ್ನೆಗೆ 'Yes' ಎಂದು ಆಯ್ಕೆ ಮಾಡಬೇಕು.

ಯಾವ ಕಾರಣಗಳನ್ನು ನೀಡಬಹುದು?
* ಈಗಾಗಲೇ KASS ಹೊರತುಪಡಿಸಿ ರಾಜ್ಯ ಸರ್ಕಾರದ ಇತರ ಆರೋಗ್ಯ ಯೋಜನೆಯ ಫಲಾನುಭವಿಯಾಗಿದ್ದರೆ.
* ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS) ಫಲಾನುಭವಿಯಾಗಿದ್ದರೆ.
* ಪತಿ ಅಥವಾ ಪತ್ನಿ ರಾಜ್ಯ/ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯ ಫಲಾನುಭವಿಯಾಗಿದ್ದರೆ.
* ಅಥವಾ ಇತರ ಕಾರಣಗಳಿದ್ದರೆ ಅವುಗಳನ್ನು ನಮೂದಿಸಬಹುದು.
ಈ ದಾಖಲೆ ಸಲ್ಲಿಕೆ ಕಡ್ಡಾಯ
* ಆಯ್ಕೆ ಮಾಡಿದ ಕಾರಣಕ್ಕೆ ಪೂರಕವಾಗಿ ದೃಢೀಕರಣ ಪ್ರಮಾಣ ಪತ್ರವನ್ನು PDF ರೂಪದಲ್ಲಿ (ಗರಿಷ್ಠ
500KB) ಅಪ್ಲೋಡ್ ಮಾಡಿ 'Submit' ಮೇಲೆ ಕ್ಲಿಕ್ ಮಾಡಬೇಕು. ಯಶಸ್ವಿಯಾಗಿ ಸಲ್ಲಿಕೆಯಾದ ನಂತರ "Successfully OPT-OUT saved" ಎಂಬ ಸಂದೇಶ ದೊರೆಯುತ್ತದೆ.
ವರದಿಗಳನ್ನು ವೀಕ್ಷಿಸುವುದು ಹೇಗೆ?
* ಯೋಜನೆಗೆ ಸೇರಿದ ಅಥವಾ ಹೊರಗುಳಿದವರ ವರದಿಯನ್ನು ವೀಕ್ಷಿಸಲು MIS Report -> KASS Report -> Opt-In/Opt-Out Report ಅನ್ನು ಅನುಸರಿಸಬಹುದು.
* ಹೆಚ್ಚಿನ ಮಾಹಿತಿಗಾಗಿ HRMS ಸಾಫ್ಟ್ವೇರ್ನ ಮುಖಪುಟದಲ್ಲಿರುವ KASS Manual ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಆರೋಗ್ಯ ಸಂಜೀವಿನಿ ಕುರಿತು ಮಾಹಿತಿ
ಆರೋಗ್ಯ ಸಂಜೀವಿನಿ ಭಾರತದಲ್ಲಿ ಎಲ್ಲಾ ವಿಮಾ ಕಂಪನಿಗಳು ಒಂದೇ ಮಾದರಿಯಲ್ಲಿ ನೀಡುವ ಮೂಲಭೂತ ಆರೋಗ್ಯ ವಿಮಾ ಯೋಜನೆ. ಈ ಯೋಜನೆಯನ್ನು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಾನದಂಡದಂತೆ ರೂಪಿಸಿದ್ದು, ಸಾಮಾನ್ಯ ಜನರಿಗೆ ಸರಳ ಮತ್ತು ಉತ್ತಮ ಆರೋಗ್ಯ ವಿಮಾ ರಕ್ಷಣೆ ಒದಗಿಸುವುದು ಇದರ ಉದ್ದೇಶವಾಗಿದೆ.
ಈ ಪಾಲಿಸಿಯಲ್ಲಿ ಆಸ್ಪತ್ರೆ ದಾಖಲಾತಿ ವೆಚ್ಚ, ಕೊಠಡಿ ಬಾಡಿಗೆ, ಶಸ್ತ್ರಚಿಕಿತ್ಸೆ, ವೈದ್ಯಕೀಯ ಪರೀಕ್ಷೆಗಳು ಹಾಗೂ ಚಿಕಿತ್ಸೆ ಸಂಬಂಧಿತ ಖರ್ಚುಗಳಿಗೆ ಭದ್ರತೆ ಲಭ್ಯವಿರುತ್ತದೆ. ಸಾಮಾನ್ಯವಾಗಿ ₹1 ಲಕ್ಷದಿಂದ ₹5 ಲಕ್ಷವರೆಗೆ ವಿಮಾ ಮೊತ್ತವನ್ನು ಆಯ್ಕೆ ಮಾಡುವ ಅವಕಾಶ ಇರುತ್ತದೆ. ವೈಯಕ್ತಿಕ ಅಥವಾ ಕುಟುಂಬ ಫ್ಲೋಟರ್ ರೂಪದಲ್ಲೂ ಈ ಯೋಜನೆಯನ್ನು ಪಡೆಯಬಹುದು.
ಆರೋಗ್ಯ ಸಂಜೀವಿನಿ ಯೋಜನೆಯ ವಿಶೇಷತೆ ಎಂದರೆ ಎಲ್ಲ ಕಂಪನಿಗಳಲ್ಲೂ ನಿಯಮಗಳು ಬಹುತೇಕ ಒಂದೇ ರೀತಿಯಾಗಿರುವುದು. ಇದರಿಂದ ಗ್ರಾಹಕರು ಬೇರೆ ಬೇರೆ ಪಾಲಿಸಿಗಳನ್ನು ಹೋಲಿಕೆ ಮಾಡುವಲ್ಲಿ ಸುಲಭವಾಗುತ್ತದೆ. ಪ್ರೀಮಿಯಂ ಮೊತ್ತ ವಯಸ್ಸು ಹಾಗೂ ಆಯ್ಕೆ ಮಾಡಿದ ವಿಮಾ ಮೊತ್ತದ ಆಧಾರದಲ್ಲಿ ಬದಲಾಗುತ್ತದೆ. ಆಸ್ಪತ್ರೆ ವೆಚ್ಚಗಳ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಮೂಲಭೂತ ಆರೋಗ್ಯ ರಕ್ಷಣೆಗೆ ಈ ಯೋಜನೆ ಸಹಾಯಕವಾಗಿದೆ. ಹೊಸದಾಗಿ ಆರೋಗ್ಯ ವಿಮೆ ತೆಗೆದುಕೊಳ್ಳುವವರಿಗೆ ಇದು ಉತ್ತಮ ಆರಂಭಿಕ ಆಯ್ಕೆಯಾಗಬಹುದು.
-
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications