Get Updates
Get notified of breaking news, exclusive insights, and must-see stories!

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷಾ ವಿಧಾನ ಹಾಗೂ ಶಿಕ್ಷಕರ ಬಡ್ತಿ ಕುರಿತು ಸರ್ಕಾರ ಮಹತ್ವದ ನಿರ್ಧಾರ

ಬೆಂಗಳೂರು, ನವೆಂಬರ್ 29: ರಾಜ್ಯದಲ್ಲಿ ಸರ್ಕಾರವು ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುತ್ತಲಿರುತ್ತದೆ. ಹಾಗೆಯೇ ಇದೀಗ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ ಶಿಕ್ಷಕರ ಬಡ್ತಿ ಕುರಿತು ನಿರ್ಧಾರವೊಂದನ್ನು ಶಿಲಾಖೆ ತೆದುಕೊಂಡಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಾಜ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನ ಸರ್ಕಾರ ಜಾರಿಗೊಳಿಸಿದೆ. ಇದುವರೆಗೂ ವರ್ಷಕ್ಕೆ ಮೂರು ಪರೀಕ್ಷೆಗಳ ಸೂತ್ರವನ್ನು ಅನುಸರಿಸುತ್ತಿದ್ದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಈಗ ಎರಡು ಪರೀಕ್ಷೆಗಳಿಗೆ ಸೀಮಿತಗೊಳಿಸಲು ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Karnataka Government Brings Major Changes to SSLC PUC Exams and Teacher Promotion Policy

ಮಾಹಿತಿ ಪ್ರಕಾರ, ಉತ್ತೀರ್ಣ ಅಂಕಗಳನ್ನು ಶೇಕಡಾ 35ರಿಂದ 33ಕ್ಕೆ ಇಳಿಕೆ ಮಾಡಿದ ಕಾರಣ ಮೂರು ಪರೀಕ್ಷೆಗಳ ವಿಧಾನವನ್ನು ಕೈಬಿಡಲಾಗಿದೆ. ಈ ಹಿನ್ನೆಲೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2 ಮಾತ್ರ ನಡೆಯಲಿದ್ದು, 2026ನೇ ಸಾಲಿನ ಅಂತಿಮ ವೇಳಾಪಟ್ಟಿಯನ್ನ ಸರ್ಕಾರ ಈಗಾಗಲೇ ಪ್ರಕಟ ಮಾಡಿದೆ.

ಶಿಕ್ಷಕರ ಬಡ್ತಿ ಕುರಿತು ಮಾಹಿತಿ: ಸರ್ಕಾರ ಪ್ರೌಢಶಾಲಾ ಶಿಕ್ಷಕರ ಬಡ್ತಿ ನೀತಿಯಲ್ಲಿ ಮಹತ್ವದ ಬದಲಾವಣೆಯನ್ನ ತರಲಾಗಿದೆ. ಇದೇ ಮೊಟ್ಟ ಮೊದಲ ಬಾರಿಗೆ ಶಿಕ್ಷಕರಿಗೆ ಬಡ್ತಿ ಪಡೆಯಲು ಅರ್ಹತಾ ಪರೀಕ್ಷೆ ಕಡ್ಡಾಯ ಮಾಡಿದೆ. ಇದು ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಮಾತ್ರ ಅನ್ವಯ ಆಗಲಿದೆ ಅಂತಲೂ ತಿಳಿಸಿದೆ.

ಬಡ್ತಿ ಕುರಿತು ಪ್ರಮುಖ ಅಂಶಗಳು

* ಕನಿಷ್ಠ 10 ವರ್ಷದ ಸೇವೆ ಪೂರೈಸಿರಬೇಕು
* B.ED ಪದವಿ ಪಡೆದ ಶಿಕ್ಷಕರು ಮಾತ್ರ ಬಡ್ತಿಗೆ ಅರ್ಹರು
* 100 ಅಂಕಗಳ ವಿಷಯವಾರು ಅರ್ಹತಾ ಪರೀಕ್ಷೆ
* ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕವಷ್ಟೇ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿ ಬಡ್ತಿ ನೀಡಲಾಗುತ್ತದೆ

ಸರ್ಕಾರದ ತೀರ್ಮಾನಗಳು ಹಾಗೂ ಅವರ ಬೇಡಿಕೆಗಳ ವಿರುದ್ಧವಾಗಿ ರಾಜ್ಯದ ಪದವಿ ಪೂರ್ವ ಕಾಲೇಜು ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೂ ಮುನ್ನ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಇಲಾಖೆಗೆ ಮನವಿ ಸಲ್ಲಿಕೆ ಮಾಡಿದರೂ ಸರ್ಕಾರ ಸ್ಪಂದಿಸದ ಹಿನ್ನೆಲೆ ರಾಜ್ಯಾವಾರು ಪ್ರತಿಭಟನೆ ನಡೆಸಲು ಅವರು ನಿರ್ಧಾರ ಮಾಡಿದ್ದರು.

ಪಿಯು ಉಪನ್ಯಾಸಕರ ಬೇಡಿಕೆಗಳು

* ಮುಂದಿನ ಮೂರು ವರ್ಷಗಳ ಅವಧಿಗೆ ಹೊಸ ಖಾಸಗಿ ಪಿಯು ಕಾಲೇಜುಗಳಿಗೆ ಅನುಮತಿ ನೀಡಬಾರದು
* ಸರ್ಕಾರಿ/ಅನುದಾನಿತ ಕಾಲೇಜುಗಳಲ್ಲಿ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು
* ಉತ್ತರಪತ್ರಿಕೆ ಮೌಲ್ಯಮಾಪನ ಸಂಭಾವನೆ ಸೇರಿದಂತೆ ಬಾಕಿಯಿರುವ 13.5 ಕೋಟಿ ರೂಪಾಯಿ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು
* 9-10 ಹಾಗೂ 11-12 ತರಗತಿಗಳ ಬೋಧನೆಯನ್ನು ಒಂದೇ ಶೈಕ್ಷಣಿಕ ಜೋಡಣೆಯಂತೆ ಪರಿಗಣಿಸುವ ಕಡತವನ್ನು ತಿರಸ್ಕರಿಸಬೇಕು
* ಸರ್ಕಾರಿ ಪಿಯು ಕಾಲೇಜುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು
* ಬೋಧಕೇತರ ಹಾಗೂ ಗ್ರೂಪ್‌-ಡಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು
* ಸಹಾಯಕ ನಿರ್ದೇಶಕರ ಹುದ್ದೆಗೆ ಇಬ್ಬರು ಹಿರಿಯ ಪ್ರಾಂಶುಪಾಲರನ್ನು ನಿಯೋಜನೆ ಮಾಡಬೇಕು
* ಪದವಿ ಪೂರ್ವ ಪರೀಕ್ಷಾ ವಿಭಾಗವನ್ನು ಮತ್ತೆ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಮರಳಿ ವರ್ಗಾವಣೆ ಮಾಡಬೇಕು
* ಉನ್ನತ ಶಿಕ್ಷಣ ಇಲಾಖೆಯ ಮಾದರಿಯಲ್ಲಿ ಪಿಯು ಅಕಾಡೆಮಿಕ್ ಕೌನ್ಸಿಲ್ ರಚನೆ ಮಾಡಬೇಕು
* ಕೆಪಿಎಸ್ ಶಾಲೆಗಳ ಆಡಳಿತ ಮತ್ತು ಆರ್ಥಿಕ ಅಧಿಕಾರಗಳನ್ನು ಸಂಬಂಧಿತ ಪಿಯು ಕಾಲೇಜು ಪ್ರಾಂಶುಪಾಲರಿಗೆ ಡಿಡಿಒ ಅಧಿಕಾರದೊಂದಿಗೆ ನೀಡಬೇಕು
* ವಿದ್ಯಾರ್ಥಿ-ಉಪನ್ಯಾಸಕರ ಅನುಪಾತವನ್ನು ಸುಧಾರಿಸಿ, ಪ್ರಸ್ತುತ 320:1 ಅನುಪಾತವನ್ನು 180:1ಕ್ಕೆ ತರುವುದು
ತರಗತಿಗಳಲ್ಲಿ ಗರಿಷ್ಠ 20ರಿಂದ 45 ವಿದ್ಯಾರ್ಥಿಗಳ ಮಾನದಂಡ ಜಾರಿಗೊಳಿಸಬೇಕು.
* 01-04-2006 ನಂತರ ನೇಮಕವಾದ ಉಪನ್ಯಾಸಕರಿಗೆ ನಿಶ್ಚಿತ ಪಿಂಚಣಿ ವ್ಯವಸ್ಥೆ ಜಾರಿ ಮಾಡಬೇಕು
* ಒಂದೆಡೆ ಎಸ್‌ಎಸ್‌ಎಲ್‌ಸಿ-ಪಿಯುಸಿ ಪರೀಕ್ಷಾ ಕ್ರಮದಲ್ಲಿ ಸರ್ಕಾರ ದೊಡ್ಡ ಬದಲಾವಣೆ ಜಾರಿಗೊಳಿಸಿದ್ದು, ಮತ್ತೊಂದೆಡೆ ಶಿಕ್ಷಕರ ಬಡ್ತಿ ನೀತಿಯಲ್ಲಿ ಹೊಸ ನಿಯಮಗಳನ್ನು ಹೊರಡಿಸಿದೆ. ಆದರೆ, ಈ ನಿರ್ಧಾರಗಳು ಶಿಕ್ಷಕರ ವಲಯದಲ್ಲಿ ಅಸಮಾಧಾನ ಮೂಡಿಸಿದ್ದು, ಪಿಯು ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ಒತ್ತಾಯಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+