ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಸೇರಿ ಹಲವು ಸರ್ಕಾರಿ ಯೋಜನೆಗಳಿಗೆ ಕಡಿವಾಣ: ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, ಅಕ್ಟೋಬರ್ 3: ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಎಪಿಎಲ್‌ಗೆ ವರ್ಗಾಹಿಸುವ ಕೆಲಸ ಮುಂದುವರೆದಿದೆ. ಈ ನಡುವೆಯೇ ಇದೀಗ ಹಲವು ಯೋಜನೆಗಳಲ್ಲಿ ಸಿಗುವ ವೇತನಕ್ಕೆ ಕತ್ತರಿ ಹಾಕಲು ಸರ್ಕಾರ ಮುಂದಾಗಿದೆ. ಹಾಗಾದ್ರೆ, ಅವು ಯಾವುವು ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇದೀಗ ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬಿಪಿಎಲ್ ಕಾರ್ಡ್ ಪಡೆದವರ ಜಾಲ ಪತ್ತೆಹಚ್ಚುವ ಕೆಲಸವನ್ನು ಆಹಾರ ಇಲಾಖೆ ಮುಂದುವರೆಸಿದೆ. ಈ ನಡುವೆಯೇ ಇನ್ನಿತರ ಹಲವು ಯೋಜನೆಯ ಹಣ ಪಡಯುವವರಿಗೂ ಬಿಗ್ ಶಾಕ್ ನೀಡಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೋಡಿ.

ಸಾಮಾನ್ಯವಾಗಿ ಬಿಪಿಎಲ್ ಪಡಿತರ ಚೀಟಿಯನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡಲಾಗುತ್ತದೆ. ಆದರೆ, ಅರನರ್ಹರು ಸಹ ಪಡೆದುಕೊಂಡು ಬಡವರ ಅನ್ನ ಕಿತ್ತುಕೊಳ್ಳುತ್ತಿದ್ದು, ಇಂತಹವರಿಗೆ ಸರ್ಕಾರ ಕಡಿವಾಣ ಹಾಕುವ ಕೆಲಸವನ್ನು ಮಾಡುತ್ತಿದೆ. ಈ ನಡುವೆಯೇ ವೃದ್ಯಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರ ಮಾಸಾಶನದಂತಹ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು ಸಹ ದುರುಪಯೋಗ ಆಗುತ್ತಿವೆ ಎನ್ನುವ ಆರೋಪ ಕೇಳಿಬಂದಿದೆ.
ಹೀಗೆ ಅನರ್ಹ ಫಲಾನುಭವಿಗಳು ಸಹ ಯೋಜನೆಯ ಲಾಭ ಮಾಡಿಕೊಳ್ಳುತ್ತಿದ್ದು, ಇಂತಹ ಅನರ್ಹ ಫಲಾನುಭವಿಗಳ ವಿರುದ್ಧ ಸರ್ಕಾರ ಚಾಟಿ ಬೀಸಲು ಮುಂದಾಗಿದೆ. ದುರ್ಬಲರಿಗೆ ನೆರವಿನ ಹಸ್ತ ಚಾಚಬೇಕು ಎಂದು ರೂಪಿಸಿರುವ ಯೋಜನೆಗಳನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ವೃದ್ಯಾಪ್ಯ ವೇತನ ಯೋಜನೆಯಲ್ಲಿಯೂ ಹೀಗೆ ಆಗಿದೆ. ಇದೀಗ ರಾಜ್ಯ ಸರ್ಕಾರ ಒಟ್ಟು 4,52,451 ಫಲಾನುಭವಿಗಳು ಅನರ್ಹರೆಂದು ಪತ್ತೆಹಚ್ಚಿ ಅವರಿಗೆ ನೀಡಲಾಗುತ್ತಿದ್ದ ವೃದ್ಯಾಪ್ಯವನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಹಲವು ಸರ್ಕಾರಿ ಯೋಜನೆಗಳನ್ನು ಅನರ್ಹರು ಕೂಡ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಮೊದಲಿನಿಂದಲೂ ಕೇಳಿಬರುತ್ತಿದೆ. ವೃದ್ಯಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಅಥವಾ ಅಂಗವಿಕಲರಿಗೆ ನೀಡುವ ಮಾಸಾಶನಗಳ ಉದ್ದೇಶ ಕೈಲಾಗದವರಿಗೆ ಸಹಾಯ ಮಾಡುವುದಾಗುದೆ. ಇದರಿಂದ ಪ್ರತಿ ತಿಂಗಳು ಇಷ್ಟು ಹಣ ಅಂತಾ ಕೊಟ್ಟು ಅವರ ಕಷ್ಟಕ್ಕೆ ನೆರವು ಆಗುವುದಾಗಿದೆ.
ಈ ಯೋಜನೆಗಳನ್ನು ಕೂಲಿ ಕಾರ್ಮಿಕರು, ಹಿಂದುಳಿದವರು, ದುರ್ಬಲರು, ಕಡಿಮೆ ಆದಾಯದಲ್ಲಿ ಜೀವನ ನಡೆಸುತ್ತಿರುವವರಿಗೆ ನೆರವಾಗಲೆನ್ನುವ ಉದ್ದೇಶದಿಂದ ಜಾರಿ ಮಾಡಲಾಗಿದೆ. ಆದರೆ, ಅನರ್ಹರು ಕೂಡ ಬಡವರಿಗೆ ಸಿಗಬೇಕಾದ ಇಂತಹ ಯೋಜನೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಅರ್ಹ ಫಲಾನುಭವಿಗಳ ಹೊಟ್ಟೆಗೆ ಹೊಡೆದಂತಾಗಿದೆ. ಇದಕ್ಕೆ ಕಡಿವಾಣ ಹಾಕಲು ಇದೀಗ ಸರ್ಕಾರ ಮಹತ್ವದ ನಿರ್ಧಾರಕ್ಕೆ ಕೈಹಾಕಿದೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ, ವೃದ್ಯಾಪ್ಯ ವೇತನ ಯೋಜನೆಯಲ್ಲಿ ಭಾರಿ ದುರುಪಯೋಗ ಆಗಿರುವುದು ಕಂಡುಬಂದಿದೆ. ಇದನ್ನ ಗಮನಿಸಿರುವ ಸರ್ಕಾರ ಪರಿಶೀಲನೆ ನಡೆಸಿದೆ. ಆಗ 4,52,451 ಜನ 60 ವರ್ಷ ಆಗಿಲ್ಲದಿದ್ದರೂ ವೃದ್ಯಾಪ್ಯ ವೇತನ ಪಡೆಯುತ್ತಿದ್ದಾರೆ ಎಂದು ಬೆಳಕಿಗೆ ಬಂದಿದೆ. 3,59,397 ಜನರು ಆರ್ಥಿಕವಾಗಿ ಸದೃಢರಾಗಿದ್ದು, ವೃದ್ಯಾಪ್ಯ ವೇತನ ಪಡೆಯಲು ನಿಗದಿ ಮಾಡಿರುವ ಆದಾಯದ ಮಿತಿಗಿಂತ ಹೆಚ್ಚು ಗಳಿಸುತ್ತಿದ್ದಾರೆ. ಆದರೂ ವೃದ್ಯಾಪ್ಯ ವೇತನ ಪಡೆಯುತ್ತಿದ್ದಾರೆ. ಆದಾಯ ತೆರಿಗೆ ಪಾವತಿ ಮಾಡುತ್ತಿರುವ 3,600 ಜನ ಸಹ ಇದನ್ನು ಪಡೆಯುತ್ತಿರುವುದು ಸಹ ಬಟಾಬಯಲಾಗಿದೆ.
ಸಂಧ್ಯಾ ಸುರಕ್ಷಾ ಯೋಜನೆ ವಿಷಯದಲ್ಲೂ ಕೂಡ ಅಕ್ರಮ ಆಗಿದೆ ಎಂದು ತಿಳಿದುಬಂದಿದೆ. 7 ಲಕ್ಷಕ್ಕೂ ಹೆಚ್ಚು ಜನರು 60 ವರ್ಷ ಆಗಿಲ್ಲದಿದ್ದರೂ ಸಂಧ್ಯಾ ಸುರಕ್ಷಾ ಯೋಜನೆಯ ಲಾಭ ಮಾಡಿಕೊಳ್ಳುತ್ತಿದ್ದಾರೆ. 3.71 ಲಕ್ಷ ಮಹಿಳೆಯರು ಆದಾಯ ಮಿತಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದ್ದಾರೆ. ಆದರೂ ವಿಧವಾ ವೇತನವನ್ನು ಪಡೆಯುತ್ತಿದ್ದಾರೆ. ಸರ್ಕಾರಿ ನೌಕರಿ ಇದ್ದ ಕುಟುಂಬದಾರು ಕೂಡ ವೃದ್ಯಾಪ್ಯ ವೇತನ ಪಡೆಯುತ್ತಿದ್ದಾರೆ ಎನ್ನುವ ಸತ್ಯ ಬಯಲಾಗಿದೆ. ಹೀಗೆ ಹಲವಯ ಸರ್ಕಾರಿ ಯೋಜನೆಗಳು ದುರುಪಯೋಗ ಆಗುತ್ತಿರುವುದನ್ನು ತಡೆಗಟ್ಟುವ ಅಸ್ತ್ರವನ್ನು ರಾಜ್ಯ ಸರ್ಕಾರ ಪ್ರಯೋಗ ಮಾಡಿದೆ.












Click it and Unblock the Notifications