• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?

|
   ಮಳೆಯಿಂದಾಗಿ ತತ್ತರಿಸಿ ಹೋದ ಕರುನಾಡು

   ಕೈಕೊಟ್ಟ ಮುಂಗಾರು, ತಡವಾದ ಹಿಂಗಾರು, ಆಷಾಢದ ಗಾಳಿ ಮಳೆ, ಎಲ್ಲವೂ ಒಟ್ಟೀಗೆ ಸೇರಿ ಆಶ್ಲೇಷದಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ಕರ್ನಾಟಕ ತತ್ತರಿಸುತ್ತಿದೆ. ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಜಿಲ್ಲೆಯ ಸಂತ್ರಸ್ತರಿಗೆ ನೆರವಾಗಲು ನಗರವಾಸಿಗಳು ಸಿದ್ಧರಾಗುತ್ತಿದ್ದಾರೆ. ಆದರೆ, ಆರ್ಥಿಕ ನೆರವು ನೀಡುವುದಾದರೆ ಯಾರಿಗೆ ನೀಡಬೇಕು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇದಕ್ಕಾಗಿ ಸಿಎಂ ಪ್ರಕೃತಿ ವಿಕೋಪ ಪರಿಹಾರ ನಿಧಿ ಖಾತೆ ವಿವರ ನೀಡಲಾಗಿದೆ. ಈ ಖಾತೆಗೆ ಹಣ ಹಾಕಿದರೆ ಐಟಿ ರಿಟರ್ನ್ಸ್ ನಲ್ಲಿ ವಿನಾಯಿತಿಯೂ ಸಿಗಲಿದೆ.

   In Pics: ಕರ್ನಾಟಕದಲ್ಲಿ ಮಹಾ ಮಳೆ

   ಬೆಳಗಾವಿ, ಬಾಗಲಕೋಟೆ, ಧಾರವಾಡ, ಬೀದರ್, ಕಲಬುರಗಿ, ಉತ್ತರ ಕನ್ನಡ, ಹಾವೇರಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡದ ಬಹುತೇಕ ಭಾಗಗಳಲ್ಲಿ ನಿರಂತರವಾಗಿ ಮಳೆ ಬೀಳುತ್ತಿದ್ದು, ಭೂ ಕುಸಿತ ಉಂಟಾಗಿ, ಪ್ರಮುಖ ಹೆದ್ದಾರಿಗಳ ಸಂಪರ್ಕ ಕಳೆದು ಹೋಗಿದೆ. ಜಲ ಪ್ರಳಯದ ಸ್ಥಿತಿಯಲ್ಲಿ ಸಿಲುಕಿ ತತ್ತರಿಸುತ್ತಿರುವ ಜನತೆಯನ್ನು ಕೈ ಎತ್ತಿ ಹಿಡಿಯಲು ನೆರವಾಗಬೇಕಿದೆ.

   ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ದರ್ಶನ್ ತೂಗುದೀಪ ಹಾಗೂ ಕಿಚ್ಚ ಸುದೀಪ ಅವರು ತಮ್ಮ ಅಭಿಮಾನಿಗಳಿಗೆ ನೆರವಾಗುವಂತೆ ಮನವಿ ಮಾಡಿಕೊಂಡಿದ್ದಾರೆ.

   ದರ್ಶನ್ ಬಳಗದ ಈ ಕೆಲಸಕ್ಕೆ ಕೈ ಜೋಡಿಸಲು ಬಯಸುವವರು ರಾಹುಲ್ 9986103219, ಶರತ್ 9036197999, ಚೇತನ್ 9620629646 ಇವರನ್ನು ಸಂಪರ್ಕ ಮಾಡಬಹುದಾಗಿದೆ ಎಂದು ದರ್ಶನ್ ತಿಳಿಸಿದ್ದಾರೆ.

   ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ: ಕೇಂದ್ರದಿಂದ ಅಗತ್ಯ ನೆರವಿನ ಭರವಸೆ

   ಪ್ರವಾಹ ಪೀಡಿತರಿಗೆ ಏನೇನು ನೀಡಬಹುದು?

   ಪ್ರವಾಹಪೀಡಿತ ಜನರಿಗೆ ಅಕ್ಕಿ, ಗೋಧಿ, ರೆಡಿ ಟು ಈಟ್ ಫುಡ್, ಟೂತ್ ಪೇಸ್ಟ್​, ಸೋಪು, ಟಾರ್ಚ್, ಮ್ಯಾಚ್​ ಬಾಕ್ಸ್​, ಕ್ಯಾಂಡಲ್, ಸ್ಯಾನಿಟರಿ ಪ್ಯಾಡ್, ಬ್ಲಾಂಕೇಟ್, ಶರ್ಟ್, ಪಂಚೆ/ಲುಂಗಿ, ಪ್ಯಾಂಟ್, ಸೀರೆ, ಒಳ ಉಡುಪು (ಬಟ್ಟೆಗಳು ಹೊಸತು ಇರಲಿ), ಚಪ್ಪಳಿ, ವಾಟರ್ ಬಾಟಲ್, ಮೆಡಿಸನ್ ರೈನ್ ಕೋಟ್, ಚಪ್ಪಲಿ​ ಹೀಗೆ ಅಗತ್ಯ ವಸ್ತುಗಳನ್ನು ನೀಡಬಹುದು. ಇವುಗಳನ್ನು ಆಯಾ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅಯಾ ಜಿಲ್ಲೆಗಳಲ್ಲಿ ಕಂಟ್ರೋಲ್ ರೂಮ್ ಸಂಖ್ಯೆಗಳಿಗೆ ಕರೆ ಮಾಡಬಹುದು.

   ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಗೆ ದೇಣಿಗೆ ನೀಡಲು ಬಯಸುವವರು ನೇರವಾಗಿ ಸಿಎಂ ಕಚೇರಿಗೆ ಭೇಟಿ ನೀಡಬಹುದು ಅಥವಾ ಅಂಚೆ ಮೂಲಕ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ತಲುಪಿಸಬಹುದು. ರಾಜ್ಯದಲ್ಲಿನ ಪ್ರಕೃತಿ ವಿಕೋಪ/ ಅತಿವೃಷ್ಟಿಯಲ್ಲಿ ನೊಂದ ಸಂತ್ರಸ್ತರಿಗೆ ಸಹಾಯ ಮಾಡುವ ದಾನಿಗಳು ಈ ಕೆಳಕಂಡ ಮುಖ್ಯಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ ಖಾತೆಗೆ ದೇಣಿಗೆ ಸಲ್ಲಿಸಬಹುದಾಗಿರುತ್ತದೆ.

   ವಿಳಾಸ:

   ಮುಖ್ಯಮಂತ್ರಿಗಳ ಪರಿಹಾರ ನಿಧಿ

   ಮುಖ್ಯಮಂತ್ರಿಗಳ ಕಚೇರಿ

   ಕರ್ನಾಟಕ ಸರ್ಕಾರ

   ವಿಧಾನಸೌಧ

   ಬೆಂಗಳೂರು-560 001.

   ಬೆಳಗಾವಿಯ ಐತಿಹಾಸಿಕ ಪ್ರವಾಹಕ್ಕೆ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ

   ಖಾತೆಯ ಹೆಸರು : ಮುಖ್ಯಮಂತ್ರಿಯವರ ಪರಿಹಾರ ನಿಧಿ - ಪ್ರಕೃತಿ ವಿಕೋಪ 2019.[Chief Minister Relief Fund Natural Calamity]

   ಬ್ಯಾಂಕ್ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

   ಶಾಖೆ : ವಿಧಾನಸೌಧ ಖಾತೆ ಸಂಖ್ಯೆ : 37887098605

   ಐ.ಎಫ್.ಎಸ್.ಸಿ. ಕೋಡ್ : SBIN0040277

   ಎಂ.ಐ.ಸಿ.ಆರ್. ಸಂಖ್ಯೆ : 560002419

   PAN No. : AAAGC1692P ಅಥವಾ GGGGG0000G

   ಈ ಖಾತೆಗೆ ನೀಡುವ ದೇಣಿಗೆಯು ಆದಾಯ ತೆರಿಗೆ ಕಾಯ್ದೆ 80ಜಿ (2) ಯಡಿ ತೆರಿಗೆ ವಿನಾಯಿತಿ ಇರುತ್ತದೆ.

   ಈ ಹಿಂದೆ ಕೊಡುಗು ಪ್ರವಾಹ ಸಂದರ್ಭದಲ್ಲಿ ಬಿಜೆಪಿಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಮತ್ತು ಲೋಕಸಭಾ ಸದಸ್ಯರು ತಮ್ಮ ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದರು. ಈಗ ಯಾರೂ ಈ ಬಗ್ಗೆ ಘೋಷಣೆ ಮಾಡಿದ್ದು ಕಂಡು ಬಂದಿಲ್ಲ. ಕಾಂಗ್ರೆಸ್, ಜೆಡಿಎಸ್ ನವರು ಬಿಎಸ್ ಯಡಿಯೂರಪ್ಪ ಅವರನ್ನು ದೂಷಿಸುವುದರಲ್ಲಿ ಕಾಲದೂಡುತ್ತಿದ್ದಾರೆ.

   ಸದ್ಯಕ್ಕೆ ನೆರವು ಕೇಂದ್ರ(ಗಂಜಿ ಕೇಂದ್ರ ಎನ್ನಬೇಡಿ ಎಂದು ಸಿಎಂ ಹೇಳಿದ್ದಾರೆ)ಗಳಲ್ಲಿ ಆಶ್ರಯ ಪಡೆದಿರುವ ಜನರಿಗೆ ಸಮರೋಪಾದಿಯಲ್ಲಿ ಶಾಶ್ವತ ನೆಲೆಯನ್ನು ಒದಗಿಸಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತಷ್ಟು ಚುರುಕಾಗಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ.

   ಉತ್ತರ ಕನ್ನಡ ಜಿಲ್ಲೆ ಸಹಾಯವಾಣಿ:

   * ಕುಮಟಾ: 08386-222054

   * ಹೊನ್ನಾವರ: 08387-220262

   * ಅಂಕೋಲಾ: 08388-230243

   * ಭಟ್ಕಳ: 08385-226422

   * ಕಾರವಾರ: 08382-226361

   * ಯಲ್ಲಾಪುರ: 08419-261129

   * ಶಿರಸಿ: 08384-226383

   * ಸಿದ್ದಾಪುರ: 08389-230127

   * ಹಳಿಯಾಳ: 08284-220134

   * ಮುಂಡಗೋಡ: 08301-222122

   * ಜೋಯ್ಡಾ: 08383-282723


   ಉತ್ತರ ಕನ್ನಡ ಜಿಲ್ಲೆ ಸ್ಥಿತಿ ಗತಿ:

   ಗಂಗಾವಳಿ, ಅಘನಾಶಿನಿ ಸೇರಿದಂತೆ ಪ್ರತಿಯೊಂದು ನದಿಯೂ ಹಿಂದೆಂದೂ ಕಂಡು ಕೇಳಿ ಅನುಭವವಿಲ್ಲದಷ್ಟು ವಿಪರೀತ ಮಟ್ಟದಲ್ಲಿ ಹರಿಯುತ್ತಿವೆ. ಗುಡ್ಡ-ಬೆಟ್ಟಗಳ ಜಿಲ್ಲೆಯಾದ ಉತ್ತರಕನ್ನಡದಲ್ಲಿ ಸಾವಿರಾರು ದ್ವೀಪಗಳು ಸೃಷ್ಟಿಯಾಗಿವೆ. ಪ್ರತಿ ದ್ವೀಪದಲ್ಲೂ ನೂರಾರು ಜನ ಸಿಲುಕಿಕೊಂಡಿದ್ದಾರೆ. ಕರೆಂಟಿಲ್ಲ, ಮೊಬೈಲ್ ಸಂಪರ್ಕವೂ ಇಲ್ಲ. ಸಾರಿಗೆ ಸಂಪರ್ಕವಂತೂ ಇಲ್ಲವೇ ಇಲ್ಲ. ನಮ್ಮ ಜಿಲ್ಲೆಯನ್ನು ಹೊರಜಗತ್ತಿನೊಂದಿಗೆ ಸಂಪರ್ಕಿಸುವ ಏಕೈಕ ಹೆದ್ದಾರಿಯಾದ ಹುಬ್ಬಳ್ಳಿ - ಅಂಕೋಲಾ ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣ ಸ್ಥಗಿತವಾಗಿದೆ.


   ಬೆಳಗಾವಿಯ ವಿವಿಧ ಭಾಗಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರು ನೆರೆ ಸಂತ್ರಸ್ತರ ರಕ್ಷಣೆ, ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರಿಗೆ ಅಗತ್ಯ ನೆರವು ನೀಡಲು ಬಯಸುವವರು, ಕೆಳಕಂಡ ವಿಳಾಸಕ್ಕೆ ದೇಣಿಗೆ ನೀಡಬಹುದು.

   RSS Sanchalita Samtrasta Parihara Nidhi

   Canara Bank, Station Road, Hubballi, Karnataka.

   A/C 0514101042880

   IFSC: CNRB0000514

   Contact: 08362 232972


   ನಟ ರಕ್ಷಿತ್ ಶೆಟ್ಟಿ ಹಾಗೂ ಸಂಗಡಿಗರು ಸಹಾಯ ಹಸ್ತ ಚಾಚಿದ್ದು, ಸಹಾಯವಾಣಿ ಸಂಖ್ಯೆಯನ್ನು ನೀಡಿದ್ದಾರೆ.


   ಇಬ್ಬನಿ ಫೌಂಡೇಷನ್ ಕೂಡಾ ಉತ್ತರ ಕನ್ನಡ ಜಿಲ್ಲೆ ನೆರೆ ಪರಿಹಾರ ನೀಡಲು ಮುಂದಾಗಿದೆ.


   English summary
   Donation: Chief Minister BS Yeddyurappa has called for help to rebuild the lives of people in the state.North Karnataka, Malenadu and Coastal Karnataka parts district are worst affected due to heavy rain, deluge.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X