'ಪಂಚ ಗ್ಯಾರೆಂಟಿ ಯೋಜನೆ' ಜಾರಿ ಮುನ್ನ ನಾವು ಬದುಕುತ್ತಿರಲ್ಲವೇ! ಯೋಜನೆಗಳು ಬೇಕಾ? ಜನರು ಹೇಳುತ್ತಿರುವುದೇನು?

ಬೆಂಗಳೂರು: 'ಐದು ಗ್ಯಾರೆಂಟಿ' ಯೋಜನೆಗಳ ಜಾರಿಗೂ ಮೊದಲು ನಾವು ಉತ್ತಮ ಜೀವನ ನಡೆಸುತ್ತಿದ್ದೆವು. ಸರ್ಕಾರ ಯೋಜನೆ ಜಾರಿ ಮಾಡಿ, ಅವುಗಳನ್ನು ನಿರ್ವಹಿಸಲೆಂದು ನಮ್ಮಿಂದಲೇ ಹಣ ಕಿತ್ತುಕೊಳ್ಳುತ್ತಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನರನ್ನು ಸಂಕಷ್ಟಕ್ಕೆ ನೂಕಿದೆ. 'ರೈತರಿಗೆ ಅನುಕೂಲಕರ ಯೋಜನೆಗಳು ಬೇಕು. ಮಕ್ಕಳಿಗೆ ಉಚಿತ ಶಿಕ್ಷಣ, ವೃದ್ಧರಿಗೆ ಉಚಿತ ಔಷಧ ಘೋಷಿಸಬೇಕು'. ಜನಸಾಮಾನ್ಯರು ಯಾರು ಉಚಿತ ಯೋಜನೆಗಳನ್ನು ನೀಡುವಂತೆ ಕೇಳಿರಲಿಲ್ಲ. ಗ್ಯಾರೆಂಟಿಗಳಿಂದ ಸಮಾಜ ಹಾಳಾಗುತ್ತಿದ್ದು, ಅವುಗಳನ್ನು ನಿಲ್ಲಿಸಿದರೆ ನಾಗರಿಕರಿಗೆ ಅನುಕೂಲ ಎಂದು ಜನಸಾಮಾನ್ಯರೇ ಹೇಳುತ್ತಿರುವುದು ಸದ್ಯದ ರಾಜ್ಯದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.

'ಪಂಚ ಗ್ಯಾರೆಂಟಿ' ಯೋಜನೆಗಳಿಗಾಗಿ ಕರ್ನಾಟಕ ಸರ್ಕಾರ 2026ರ ಮಾರ್ಚ್ ಹೊತ್ತಿಗೆ 1.20 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಯೋಜನೆ ಮುಂದುವರಿಸಲು ಹೆಣಗಾಡುತ್ತಿರುವ ಸರ್ಕಾರ, ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಮಧ್ಯಮ ವರ್ಗದವರ ಮೇಲೆ ಆರ್ಥಿಕ ಹೊರೆ ಹೇರಿದೆ ಎಂದು 'ಒನ್ ಇಂಡಿಯಾ ಕನ್ನಡ'ದ ಮುಂದೆ ಜನಸಾಮಾನ್ಯರು ಅಳಲು ತೋಡಿಕೊಂಡಿದ್ದಾರೆ.

Karnataka Five Guarantees

5 ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸಬೇಕು..!

ವಾರ್ಷಿಕವಾಗಿ 52000 ರಿಂದ 55,000 ಕೋಟಿ ರೂಪಾಯಿ ಹಣವನ್ನು ಐದು ಯೋಜನೆಗಳಿಗೆ ವಿನಿಯೋಗಿಸಲಾಗುತ್ತಿದೆ. ಅಭಿವೃದ್ಧಿಗೆ, ರೈತ ಪರ ಯೋಜನೆಗಳಿಗೆ ಆದ್ಯತೆ ನೀಡದೇ, ಸರ್ಕಾರ ಅಧಿಕಾರಕ್ಕೆ ಬರಲು, ಅಧಿಕಾರ ಉಳಿಸಿಕೊಳ್ಳಲು ಉಚಿತ ಯೋಜನೆಗಳಿಗೆ ಕೋಟಿ ಕೋಟಿ ಹಣ ಸುರಿಯುತ್ತಿದೆ. ಯೋಜನೆಗಳು ಈ ಸಮಾಜಕ್ಕೆ ಬೇಕಿರಲಿಲ್ಲ. ಅವುಗಳನ್ನು ನಿಲ್ಲಿಸುವುದು ಒಳಿತು ಅಂತಲೇ ಜನ ಮಾತಡುತ್ತಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಹೆಚ್ಚಳ: ಜನಾಕ್ರೋಶ

ಉಚಿತ ಭಾಗ್ಯಗಳಿಂದ ಸರ್ಕಾರದ ಭೊಕ್ಕಸ ಖಾಲಿಯಾಗಿದೆ. ಅದನ್ನು ತುಂಬಲು, ಮತ್ತೆ ಅಧಿಕಾರದ ಹಾದಿ ಸುಗಮಗೊಳಿಸಲು ಸರ್ಕಾರ ಮುಂದಾಗಿದೆ. ಅದರ ಭಾಗವಾಗಿಯೇ ಹಾಲಿನ ದರ ಏರಿಕೆ, ಬಸ್ ದರವನ್ನು ಹೆಚ್ಚಳಕ್ಕೆ ತೀರ್ಮಾನಿಸಿದೆ. ಇತ್ತೀಚೆಗೆ ಸಕ್ಕರೆ ದರ ಏರಿಕೆಯಾಗಿ ಮತ್ತೆ ಕುಸಿಯಿತು. ಎರಡು ಭಾರಿ ಅಕ್ಕಿ ಬೆಲೆ ಹೆಚ್ಚಾಗಿದೆ. ಹೀಗೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಆರ್ಥಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಮುಂದಾದರೆ ಅಭಿವೃದ್ಧಿ ನಗಣ್ಯ ಎಂಬ ಆರೋಪಗಳು ಕೇಳಿ ಬಂದಿವೆ. ಇಂದನ, ಅಡುಗೆ ಅನಿಲ ದರ ಹೀಗೆ ದೈನಂದಿನ ಬಳಕೆ ಎಲ್ಲ ವಸ್ತುಗಳ ಬೆಲೆಗಳು ಜನರನ್ನು ಹೈರಾಣಾಗಿಸಿವೆ. ರಾಜ್ಯದಲ್ಲಿ ಅಭಿವೃದ್ಧಿಯು ಆಗುತ್ತಿಲ್ಲ. ಬರಗಾಲ ಎದುರಾಗಿ ರೈತರೂ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗಿ ಸರ್ಕಾರ ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಬಿಜೆಪಿ ದೂರುತ್ತಲೇ ಇದೆ.

ಸರ್ಕಾರ ಮೇಲಿದೆ ಆರ್ಥಿಕ ಒತ್ತಡ! ಒಪ್ಪಿದ ಸಿಎಂ, ಡಿಸಿಎಂ

ಹಣಕಾಸು ಇಲಾಖೆಯು ಉಚಿತ ಯೋಜನೆಗೆ ಸಂಬಂಧಿಸಿದಂತೆ ಎಚ್ಚರಿಕೆ ಅಗತ್ಯವೆಂದು ತಿಳಿಸಿತ್ತು. ವಿಪಕ್ಷ ನಾಯಕರು 'ಖಜಾನೆ ಖಾಲಿ' ಆರೋಪಿಸಿತ್ತಲೇ ಬಂದಿದ್ದರು. ಕಾಂಗ್ರೆಸ್‌ನ ನಾಯಕರೇ ಉಚಿತ ಯೋಜನೆಗಳಿಂದ ನಮ್ಮ ಕ್ಷೇತ್ರಗಳಿಗೆ ಹಣ ನೀಡುತ್ತಿಲ್ಲ ಎಂದು ಅಪಸ್ವರ ತೆಗೆದಿದ್ದರು. ಶಾಸಕ ಬಾಲಕೃಷ್ಣ ಅವರೇ ಗ್ಯಾರೆಂಟಿ ಯೋಜನೆಗಳ ಇರದಿದ್ದರೆ ಆರ್ಥಿಕ ನಿರ್ವಹಣೆ ಸುಲಭವಾಗುತ್ತಿತ್ತು ಎಂದು ಹೇಳಿದ್ದು, ಚರ್ಚೆಯಾಗಿತ್ತು.

ಇನ್ನೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಖುದ್ದು 'ಹಣಕಾಸಿನ ಒತ್ತಡ ಇರುವುದು ನಿಜ' ಎಂದು ಒಪ್ಪಿಕೊಂಡಿದ್ಆರೆ. ಡಿಸಿಎಂ ಜಿ.ಪರಮೇಶ್ವರ, 'ಘೋಷಿಸಿದಂತೆ ಈ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಅವುಗಳಿಗೆ ಸುಮಾರು 51,000 ಕೋಟಿ ವ್ಯಯಿಸುತ್ತಿದ್ದೇವೆ. ಅಂದ ಮೇಲೆ ತಕ್ಕ ಮಟ್ಟಿಗಿನ ಆರ್ಥಿಕ ಒತ್ತಡ ಉಂಟಾಗುವುದು ಸಾಮಾನ್ಯ. ಅದನ್ನು ಸರ್ಕಾರ ನಿಭಾಯಿಸಲಿದೆ' ಎಂದು ಈ ಹಿಂದೆ ತಿಳಿಸಿದ್ದಾರೆ.

ನಮಗೆ ಗ್ಯಾರಂಟಿ ಯೋಜನೆಗಳಿಗೆ ಬೇಕಿರಲಿಲ್ಲ! ಶಾಂತಮ್ಮ

ಆರ್ಥಿಕ ಒತ್ತಡ ನಿಭಾಯಿಸಲು ಜನರ ಸಾಮಾನ್ಯರಿಗೆ ಹೊರೆ ಮಾಡುವುದೇಕೆ ಎಂದು ಜನರೇ ಪ್ರಶ್ನಿಸುತ್ತಿದ್ದಾರೆ. ಮನೆಯ ದುಡಿಯುವ ಪುರುಷರಿಂದ ಹಣ ಕಿತ್ತು, ಒಬ್ಬ ಗೃಹಿಣಿಗೆ ಹಣ ನೀಡುವುದರಿಂದ ಪ್ರಯೋಜನವೇನು? ಶಕ್ತಿ ಯೋಜನೆಯಿಂದ ಆಟೋ ಚಾಲಕರ ಆದಾಯ ಕುಂಠಿತಗೊಂಡಿದ್ದು, ಅವರು ಮಕ್ಕಳ ಶಿಕ್ಷಣ ಶುಲ್ಕ ಪಾವತಿಸಲು, ದುಬಾರಿ ದುನಿಯಾದಲ್ಲಿ ಬದುಕಲು ಕಷ್ಟಪಡಬೇಕಾಗಿದೆ ಎಂದು ಮಹಿಳೆ ಶಾಂತಮ್ಮ ಅವರು ಅಸಮಾಧಾನ ಹೊರಹಾಕಿದರು.

ನಮಗೆ ಗ್ಯಾರಂಟಿ ಯೋಜನೆಗಳಿಗೆ ಬೇಕಿರಲಿಲ್ಲ. ವಿದ್ಯಾ ನಿಧಿ, ಗೃಹ ಲಕ್ಷ್ಮೀ, ಗೃಹ ಯೋಜನೆ ಬೇಕಿರಲಿಲ್ಲ. ಕಲಿತ ಯುವಕರಿಗೆ ಉದ್ಯೋಗ ಸಿಗದಿದ್ದವರೆಗೆ ಹಣ ಕೊಡೋದು ಬೇಕಿರಲಿಲ್ಲ. ಶ್ರೀಮಂತರು ಬದುಕುತ್ತಾರೆ. ಬಡವರು ಕೂಲಿ ಮಾಡಿ ಬದುಕುತ್ತಾರೆ. ನಾವು ಮಧ್ಯಮವರ್ಗದವರು ದುಡಿದು ಬದುಕಬೇಕು.

{video1}

ಗೃಹಜ್ಯೋತಿ ನಿಲ್ಲಿಸಿದ್ದಕ್ಕೆ ವಿದ್ಯುತ್ ಬಿಲ್ 4000 ರೂ. ಬಿಲ್ ಬರುತ್ತಿದೆ. ಪುನಃ ಪರಿಶೀಲನೆ ದಾಖಲೆ ತಗೊಂಡ್ರು. ಹತ್ತು ಕೆಜಿ ಅಲ್ಲ, ಐದು ಕೆಜಿ ಅಕ್ಕಿಯನ್ನು ಸರಿಯಾಗಿ ಕೊಡ್ತಿಲ್ಲ. ಸರ್ಕಾರವನ್ನು ಕೇಳೋರಿಲ್ಲದಂತಾಗಿದೆ ಎಂದು ಶಾಂತಮ್ಮ ತಿಳಿಸಿದ್ದಾರೆ.

ಅನ್ನದಾತನಿಗೆ ಒಳಿತಾದರೆ ದೇಶವೇ ಹಿತ

ಕೇಂದ್ರದಿಂದ ರೈತರಿಗೆ 3000 ರೂ. ರಾಜ್ಯ ಸರ್ಕಾರದಿಂದ 2000 ರೂ.ಕೊಡೋದನ್ನು ರಾಜ್ಯದಲ್ಲಿ ನಿಲ್ಲಿಸಿದ್ದಕ್ಕೆ ರೈತರಿಗೆ ಕಷ್ಟವಾಗಿದೆ. ಅನ್ನದಾತ ಒಬ್ಬ ಸರಿಯಾಗಿದರೆ ಎಲ್ಲವು ಚೆನ್ನಾಗಿರುತ್ತಾರೆ. ಅನ್ನ ಬೆಳೆಯುವವನು ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತದೆ. ಎಂಟತ್ತು ವರ್ಷಗಳ ಹಿಂದೆ ರೈತನಿಗೆ ವಿದ್ಯುತ್ ಸಂಪರ್ಕ ಪಡೆಯಲು 35,000 ರೂಪಾಯಿ ಖರ್ಚು ಬರುತ್ತಿತ್ತು. ಈಗ 3.5ಲಕ್ಷ ರೂಪಾಯಿ ಖರ್ಚು ಬಂದರೆ ರೈತ ಬದುಕುವುದಾದರೂ ಹೇಗೆ? ಎಂದರು.

ಮಕ್ಕಳಿಗೆ ಉಚಿತ ಶಿಕ್ಷಣ, ವೃದ್ಧರಿಗೆ ಉಚಿತ ಔಷಧ ನೀಡಿ

ಮುಖ್ಯಮಂತ್ರಿಗಳೇ ಮಕ್ಕಳಿಗೆ ಶಿಕ್ಷಣವನ್ನು ಉಚಿತವಾಗಿ ನೀಡಿ. ಆಸ್ಪತ್ರೆ, ವೈದ್ಯಕೀಯ ವೆಚ್ಚ ಮತ್ತು ವೃದ್ಧರಿಗೆ ಔಷಧಿಯನ್ನು ಉಚಿತ ಮಾಡಿದ್ದರೆ ಅನುಕೂಲ ಆಗಿರುತ್ತಿತ್ತು. ಮನೆಯಲ್ಲಿ ವೃದ್ಧರನ್ನು ನೋಡಿಕೊಳ್ಳುವವರು ಯಾರು ಇರುವುದಿಲ್ಲ. ವಯೋವೃದ್ಧರಿಗೆ ಮತ್ತೆ ದುಡಿಯಲು ಆಗುವುದಿಲ್ಲ. ಅವರಿಗೆ ಔಷಧ ನೀಡಿದರೆ ಸಹಾಯವಾಗಲಿದೆ. ಬಸ್ ಉಚಿತ ಮಾಡಿದ್ದರಿಂದ ಆಟೊ ಚಾಲಕರ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಇನ್ನೂ ಸಚಿವರು ಶಾಲೆ, ಶಿಕ್ಷಣ ವಲಯ, ಔಷಧಿ ವಲಯದಲ್ಲಿ ಮಾಫಿಯಾ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಗ್ಯಾರೆಂಟಿಗಳಿಂದ ಸರ್ಕಾರವೇ ಅನುಭವಿಸುತ್ತೆ! ನಾಗರಾಜ್

ಗ್ಯಾರೆಂಟಿಗಳಿಂದ ಲಾಭ ಎಂದು ಸದ್ಯ ಹೇಳಬಹುದು. ಜನಸಾಮಾನ್ಯರ ಮೇಲೆ ಮುಂದೆ ಆದರೂ ಪರಿಣಾಮ ಉಂಟಾಗುತ್ತದೆ. ಮಹಿಳೆಯರು ಇಂದು ಆಧಾರ್ ಕಾರ್ಡ್ ಹಿಡಿದುಕೊಂಡು ಓಡಾಡುತ್ತಲೇ ಇದ್ದಾರೆ. ನಮ್ಮ ತೆರಿಗೆ ಹಣವನ್ನು ಒಂದು ಕಡೆ ಕೊಟ್ಟು ಮತ್ತೊಂದು ಕಡೆ ಸರ್ಕಾರ ಕಿತ್ತುಕೊಳ್ಳುತ್ತಿದೆ. ಬಸ್ ದರ, ಹಾಲಿನ ದರ, ಅಕ್ಕಿ ದರ ಏರಿಕೆಯೇ ಸಾಕ್ಷಿ. ಅಧಿಕಾರಕ್ಕಾಗಿ ತಂದ ಉಚಿತ ಯೋಜನೆಯಿಂದ ಸಮಾಜ ಹಾಳಾಗುತ್ತಿದೆ., ನಾಗರಿಕನ್ನು ಸೊಮಾರಿಗಳನ್ನಾಗಿ ಮಾಡಲಾಗುತ್ತಿದೆ. ಮುಂದಿನ ಎಂಟತ್ತು ವರ್ಷಗಳಲ್ಲಿ ಹೀಗೆ ಬಿಟ್ಟರೆ ಉಚಿತ ಯೋಜನೆಗಳಿಂದ ಸರ್ಕಾರ ಸಂಪೂರ್ಣ ಹಾಳಾಗುತ್ತದೆ. ಸದ್ಯ ಈ ಯೋಜನೆಗಳಿಂದ ಸರ್ಕಾರ, ನಾಯಕರೇ ಮುಂದೊಂದು ದಿನ ಅನುಭವಿಸುತ್ತಾರೆ ಎಂದು ನಾಗರಾಜ್ ಅವರು ಅಭಿಪ್ರಾಯಪಟ್ಟರು.

ದೈನಂದಿನ ಖರ್ಚು ಹೆಚ್ಚುತ್ತಿದೆ, ರೈತರಿಗೆ ಸೌಲಭ್ಯ ಕೊಡಿ: ಮಂಜುಳಾ

ಮತ್ತೊಬ್ಬ ಗೃಹಿಣಿ ಮಂಜುಳಾ ಅವರು ಪ್ರತಿಕ್ರಿಯಿಸಿ, ಸರ್ಕಾರವು ಮೊದಲಿಗೆ ರೈತರಿಗೆ ಸಾಕಷ್ಟು ಸೌಲಭ್ಯ ಕೊಡಬೇಕು. ಗ್ರಾಹಕರಿಗೆ, ಜನಸಾಮಾನ್ಯರಿಗೆ ಹೊರೆ ಆಗುವಂತೆ ಅಕ್ಕಿ ದರ ಏರಿಕೆ ಮಾಡುವುದು ಸರಿಯಲ್ಲ. ಮಧ್ಯಮ ವರ್ಗದವರ ದೈನಂದಿನ ಖರ್ಚು ಹೆಚ್ಚಾಗುತ್ತಿದೆ. ಬಸ್, ಹಾಲಿನ ದರ ಏರಿಕೆಯಿಂದ ತೊಂದರೆ ಆಗುತ್ತಿದೆ. ಪುರುಷನಿಂದ ಕಿತ್ತು, ಅದೇ ಹಣವನ್ನು ಮಹಿಳೆಯರಿಗೆ ನಿಡಲಾಗುತ್ತಿದೆ. ಒಬ್ಬ ಮಹಿಳೆಗೆ 10 ರೂ.ಕೊಡುವ ಸರ್ಕಾರ ಪುರುಷರಿಂದ 1000 ರೂಪಾಯಿ ಕಿತ್ತುಕೊಳ್ಳುತ್ತಿದೆ. ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸಿದರೆ ಎಲ್ಲವು ಸರಿ ಹೋಗುತ್ತದೆ ಎಂದು ಅವರು ಹೇಳಿದರು.

ಗ್ಯಾರಂಟಿಗಳು ನಿಂತರೆ ಆತಂಕ ಬೇಡ!

ಉಚಿತ ಯೋಜನೆಗಳನ್ನು ನಿಲ್ಲಿಸಿದರೆ ಏನು ಆಗುವುದಿಲ್ಲ. ಜನರಿಗೆ ವಿಶೇಷವಾಗಿ ಮಹಿಳೆಯರಿಗೆ ಮಾಸಿಕ ಹಣ ಕೊಡುವುದು ನಿಂತರೆ, ಉಚಿತ ಬಸ್ ಪ್ರಯಾಣ ಯೋಜನೆ ಸ್ಥಗಿತವಾದರೆ ಆತಂಕ ಪಡಬೇಕಿಲ್ಲ. ನಮ್ಮಿಂದ ಪಡೆಯುವ ತೆರಿಗೆಯಲ್ಲಿ ಅಲ್ಪ ಪಾಲನ್ನು ಮಾತ್ರವೇ ನಮಗೆ ನೀಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ಮಂಜುಳಾ ಅವರು ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+