ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದೀಜಿ, ಅದು ಕುಂಡಲ ಸಂಗಮ ಅಲ್ರೀ, ಕೂಡಲ ಸಂಗಮ: ಸಿದ್ದು ಲೇವಡಿ

|
Google Oneindia Kannada News

ಬೆಂಗಳೂರು, ಮೇ 07: ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿರುವ ರಾಷ್ಟ್ರದ ನಾಯಕರಿಗೆ ಕನ್ನಡದಲ್ಲಿ ಮಾತನಾಡೋದು ಒಂದು ಫ್ಯಾಶನ್ ಆಗಿದೆ. ಕನ್ನಡಿಗರನ್ನು ಓಲೈಸಲು ಕನ್ನಡ ಭಾಷೆಯನ್ನು ಬಳಸಿಕೊಳ್ಳುತ್ತಿರುವ ನಾಯಕರು ತಪ್ಪು ಉಚ್ಚಾರಣೆಯ ಮೂಲಕ ಟ್ರೋಲ್ ಆಗುತ್ತಿರುವುದು ಸತ್ಯ.

ರಾಹುಲ್ ಗಾಂಧಿ ಆಯ್ತು. ಇದೀಗ ಈ ಟ್ರೋಲ್ ಗೆ ಹೊಸ ಸೇರ್ಪಡೆ ಪ್ರಧಾನಿ ನರೇಂದ್ರ ಮೋದಿ! ಬಾಗಲಕೋಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಮೋದಿ, ಬಸವಣ್ಣನವರು ಲಿಂಗೈಕ್ಯರಾದ ಬಿಜಾಪುರ ಜಿಲ್ಲೆಯ ಕೂಡಲ ಸಂಗಮವನ್ನು ಕುಂಡಲ ಸಂಗಮ ಎಂದು ತಪ್ಪಾಗಿ ಉಚ್ಚರಿಸಿದ್ದು ಇದೀಗ ಲೇವಡಿ ಕಾರಣವಾಗಿದೆ.

ಮುಧೋಳ ನಾಯಿಯಿಂದಾದರೂ ಕಾಂಗ್ರೆಸ್ ದೇಶಪ್ರೇಮ ಕಲಿಯಲಿ: ಮೋದಿಮುಧೋಳ ನಾಯಿಯಿಂದಾದರೂ ಕಾಂಗ್ರೆಸ್ ದೇಶಪ್ರೇಮ ಕಲಿಯಲಿ: ಮೋದಿ

ಈ ಕುರಿತು ಪ್ರಧಾನಿಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
"ಶ್ರೀ ನರೇಂದ್ರ ಮೋದಿಯವರೇ, ಅದು ಕುಂಡಲ ಸಂಗಮ ಅಲ್ಲಾರೀ, ಕೂಡಲ ಸಂಗಮ. ಕನ್ನಡ ಶಬ್ದವನ್ನು ತಪ್ಪಾಗಿ ಉಚ್ಚರಿಸುವುದು ದೊಡ್ಡ ಸಂಗತಿಯಲ್ಲ. ಏಕೆಂದರೆ ಕನ್ನಡಿಗರು ಉದಾರಿಗಳು, ಕ್ಷಮಿಸಿಬಿಡುತ್ತಾರೆ. ಆದರೆ ಬೇಸರದ ಸಂಗತಿ ಎಂದರೆ ನಿಮಗೆ ಕನ್ನಡಿಗರ ಮನಸ್ಸು ಅರ್ಥವಾಗುವುದಿಲ್ಲ. ನೀವು ಮತ್ತೊಬ್ಬರ ತಪ್ಪು ಉಚ್ಚಾರದ ಬಗ್ಗೆ ಅಪಹಾಸ್ಯ ಮಾಡಿ ಮಾತನಾಡುತ್ತೀರಿ" ಎಂದು ಲೇವಡಿ ಮಾಡಿದ್ದಾರೆ.

Karnataka elections: Siddaramaiah tweet on Modis Kannada language

ಇತ್ತೀಚೆಗೆ ಕರ್ನಾಟಕದಲ್ಲಿ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಸವಣ್ಣನವರ ವಚನಗಳನ್ನು "ಇವನರ್ವ ಇವನರ್ವ" ಎಂದು ತಪ್ಪಾಗಿ ಉಚ್ಚರಿಸಿದ್ದು, ಭಾರತ ರತ್ನ 'ಸರ್ ಎಂ ವಿಶ್ವೇಶ್ವರಯ್ಯ' ಅವರ ಹೆಸರನ್ನು ಉಚ್ಚರಿಸಲು ಬಾರದೆ ಪರದಾಡಿದ್ದು ಎಲ್ಲವನ್ನೂ ಬಿಜೆಪಿ ಬೆಂಬಲಿಗರು ಸಾಕಷ್ಟು ಆಡಿಕೊಂಡಿದ್ದರು. ಇದೀಗ ತಪ್ಪು ಉಚ್ಚರಣೆಯಲ್ಲಿ ಮೋದಿಯೂ ಹಿಂದೆ ಬಿದ್ದಿಲ್ಲ ಎಂಬುದು ಸಾಬೀತಾಗಿದೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ.

English summary
Karnataka assembly elections 2018: Chief minister Siddaramaiah blames prime minister Narendra Modi for his mis pronunciation of the world kudala Sangama in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X