ಕರ್ನಾಟಕ ಫಲಿತಾಂಶ; ಹಿನ್ನಡೆ ಅನುಭವಿಸಿದ 8 ಸಚಿವರು
ಬೆಂಗಳೂರು, ಮೇ 13; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತ ಎಣಿಕೆ ಪ್ರಕ್ರಿಯೆ ಸಾಗಿದೆ. ಪ್ರಾಥಮಿಕ ಟ್ರೆಂಡ್‌ಗಳಲ್ಲಿ ಆಡಳಿತ ಪಕ್ಷ ಬಿಜೆಪಿಯ ಸಚಿವರಿಗೆ ಭಾರೀ ನಿರಾಸೆಯಾಗಿದೆ. ಒಟ್ಟು 8 ಸಚಿವರು ಹಿನ್ನಡೆ ಅನುಭವಿಸಿದ್ದಾರೆ.
ಶನಿವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಮೊದಲು ಅಂಚೆ ಮತಗಳ ಎಣಿಕೆ ಕಾರ್ಯ ಆರಂಭವಾಗಿದೆ. ಪ್ರಾಥಮಿಕ ಹಂತದಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಸಚಿವರು ಹಿನ್ನಡೆ ಕಂಡಿದ್ದಾರೆ. ಬಸವರಾಜ ಬೊಮ್ಮಾಯಿ ಶಿಗ್ಗಾವಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

9.10ರ ಟ್ರೆಂಡ್ ಪ್ರಕಾರ ಬಿಜೆಪಿ 62, ಕಾಂಗ್ರೆಸ್ 106, ಜೆಡಿಎಸ್ 18 ಮತ್ತು ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ. ಅಂಚೆ ಮತಗಳ ಎಣಿಕೆ ಕಾರ್ಯ ಮುಗಿದಿದ್ದು, ಮತಯಂತ್ರದಲ್ಲಿನ ಮತಗಳ ಎಣಿಕೆ ಕಾರ್ಯ ಆರಂಭವಾಗಿದೆ. ಕಾಂಗ್ರೆಸ್ ಪಕ್ಷ 100ರ ಗಡಿ ದಾಟಿದ್ದು, ಆಡಳಿತ ಪಕ್ಷಕ್ಕೆ ಹಿನ್ನಡೆಯಾಗಿದೆ.
ಯಾವ-ಯಾವ ಸಚಿವರು?; ಬಳ್ಳಾರಿ ಗ್ರಾಮೀಣ ಸಚಿವ ಬಿ. ಶ್ರೀರಾಮುಲು, ಹಿರೆಕೇರೂರು ಬಿ. ಸಿ. ಪಾಟೀಲ್, ಚಿಕ್ಕನಾಯಕನಹಳ್ಳಿ ಜೆ. ಸಿ. ಮಾಧುಸ್ವಾಮಿ, ಚಿಕ್ಕಬಳ್ಳಾಪುರ ಸಚಿವ ಡಾ. ಕೆ. ಸುಧಾಕರ್, ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆ, ಯಶವಂತಪುರದಲ್ಲಿ ಎಸ್. ಟಿ. ಸೋಮಶೇಖರ್, ಬೀಳಗಿಯಲ್ಲಿ ಮುರುಗೇಶ್ ನಿರಾಣಿ, ವರುಣದಲ್ಲಿ ವಿ. ಸೋಮಣ್ಣ ಹಿನ್ನಡೆ ಅನುಭವಿಸಿರುವ ಸಚಿವರು.
ವಿ. ಸೋಮಣ್ಣ ಚಾಮರಾಜನಗರ ಮತ್ತು ವರುಣದಲ್ಲಿ ಕಣಕ್ಕಿಳಿದಿದ್ದಾರೆ. ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ. ಪುಟ್ಟರಂಗಶೆಟ್ಟಿ 15,654 ಮತಗಳು ಮತ್ತು ಬಿಜೆಪಿಯ ವಿ. ಸೋಮಣ್ಣ 13,313 ಮತಗಳನ್ನು ಪಡೆದಿದ್ದಾರೆ.
2013ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸಂಪುಟದ ಸಚಿವರಾಗಿದ್ದ 8ಕ್ಕೂ ಅಧಿಕ ಮಂದಿ ಸೋಲು ಕಂಡಿದ್ದರು. ಪ್ರತಿಪಕ್ಷ ಕಾಂಗ್ರೆಸ್ ಪ್ರಕಾರ ಈಗಲೂ ಆಡಳಿತ ವಿರೋಧಿ ಅಲೆ ಇದ್ದು, ಸಚಿವರು ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ.












Click it and Unblock the Notifications