ಬಾಗೇಪಲ್ಲಿಯಿಂದ ನಾಮಪತ್ರ ಸಲ್ಲಿಸಿದ ಸಿಪಿಐಎಂನ ಜಿ.ವಿ.ಶ್ರೀರಾಮರೆಡ್ಡಿ
ಚಿಕ್ಕಬಳ್ಳಾಪುರ, ಏಪ್ರಿಲ್ 19 : ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಸಿಪಿಐಎಂ ಅಭ್ಯರ್ಥಿಯಾಗಿ ಜಿ.ವಿ.ಶ್ರೀರಾಮರೆಡ್ಡಿ ಅವರು ಇಂದು ನಾಮಪತ್ರ ಸಲ್ಲಿಸಿದರು. ಕಳೆದ ಚುನಾವಣೆಯಲ್ಲಿ ಅವರು 35,472 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು.
ಗುರುವಾರ ಬಾಗೇಪಲ್ಲಿಯ ತಾಲೂಕು ಕಚೇರಿಯಲ್ಲಿ ಸಿಪಿಐಎಂನ ರಾಜ್ಯ ಕಾರ್ಯದರ್ಶಿಗಳಾದ ಜಿ.ವಿ.ಶ್ರೀರಾಮರೆಡ್ಡಿಯವರು 2018ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಬಾಗೇಪಲ್ಲಿ ತಾಲೂಕು ಕಾರ್ಯದರ್ಶಿ ಚನ್ನರಾಯಪ್ಪ, ಗುಡಿಬಂಡೆ ತಾಲೂಕು ಕಾರ್ಯದರ್ಶಿ ಎಚ್.ಪಿ.ಲಕ್ಷ್ಮಿನಾರಾಯಣ, ರೈತ ಮುಖಂಡರಾಟ ಪಿ.ಮಂಜುನಾಥ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಕೆಯಾದ ನಂತರ ಸಾವಿರಾರು ಜನ ಕೆಂಪು ಸಮವಸ್ತ್ರಧಾರಿಗಳ ಬೃಹತ್ ಮೆರವಣಿಗೆಯನ್ನು ಪಟ್ಟಣದ ನ್ಯಾಷನಲ್ ಕಾಲೇಜಿನಿಂದ ಶಾಧಿಮಹಲ್ ವರೆಗೆ ನಡೆಸಲಾಯಿತು.
2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಎಸ್.ಎನ್.ಸುಬ್ಬಾರೆಡ್ಡಿ ಅವರು 66,227 ಮತಗಳನ್ನು ಪಡೆದು ಬಾಗೇಪಲ್ಲಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಸಿಪಿಐಎಂನ ಜಿ.ವಿ.ಶ್ರೀರಾಮರೆಡ್ಡಿ 35,472 ಮತಗಳನ್ನು ಪಡೆದಿದ್ದರು.
ಸಿಪಿಐಎಂ 224 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ.












Click it and Unblock the Notifications