Get Updates
Get notified of breaking news, exclusive insights, and must-see stories!

Actress Ramya: ಸಿನಿಮಾ ತಾರೆಯರು ಮತದಾರರ ಮೇಲೆ ಪ್ರಭಾವ ಬೀರಲ್ಲ; ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ರಮ್ಯಾ

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರೆ, ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲು ಮತದಾರರು ತಯಾರಾಗಿದ್ದಾರೆ. ಮೇ 13ರಂದು ಮತದಾನ ನಡೆಯಲಿದೆ.

ಈಗಾಗಲೇ ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ಎದುರಾಳಿಗಳನ್ನು ಮಣಿಸಲು ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಸಿನಿಮಾ ತಾರೆಯರು ಕಾಣಿಸಿಕೊಳ್ಳುತ್ತಿರುವುದರಿಂದ ಮತ್ತಷ್ಟು ರಂಗು ಪಡೆದಿದೆ.

 Karnataka Elections 2023: Cinema Stars Cant Influence On Voters in Election Campaigns Says Actress Ramya

ನಟ ಕಿಚ್ಚ ಸುದೀಪ್ ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಈಗಾಗಲೇ ಘೋಷಿಸಿದ್ದು, ಮೊದಲ ಹಂತವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪರ ರೋಡ್ ಶೋ ನಡೆಸಿದ್ದಾರೆ. ಇನ್ನು ನಟಿಯರಾದ ಪ್ರೇಮಾ, ಶ್ರುತಿ, ತಾರಾ ಅನುರಾಧ ಸಹ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

ಮತ್ತೊಂದೆಡೆ ನಟಿ ರಮ್ಯಾ, ಸಾಧುಕೋಕಿಲ, ಉಮಾಶ್ರೀ, ಅವರುಗಳು ಕಾಂಗ್ರೆಸ್​ನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಇದೇ ವೇಳೆ ಸ್ವತಃ ಸ್ಟಾರ್ ಪ್ರಚಾರಕಿ ಆಗಿರುವ ರಮ್ಯಾ ಅವರು ಸಿನಿಮಾ ತಾರೆಯರು ಮತಗಳನ್ನು ತಂದು ಕೊಡುವಷ್ಟು ಪ್ರಭಾವಿಯಲ್ಲ ಎಂದು ಹೇಳಿದ್ದಾರೆ.

 Karnataka Elections 2023: Cinema Stars Cant Influence On Voters in Election Campaigns Says Actress Ramya

ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ರಾಜಕೀಯ, ಸಿನಿಮಾ ಮತ್ತು ಸಿನಿಮಾ ನಟ-ನಟಿಯರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿರುವ ಬಗ್ಗೆ ಮಾತನಾಡಿದ ರಮ್ಯಾ, "ಸಿನಿಮಾ ತಾರೆಯರು ಮತದಾರರನ್ನು ನಿರ್ದಿಷ್ಟ ಪಕ್ಷಕ್ಕೆ ಮತ ಹಾಕುವಂತೆ ಪ್ರೇರೇಪಣೆ ಮಾಡುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ಜನರನ್ನು ಸೆಳೆಯಲು ನಟರು ಯಶಸ್ವಿಯಾಗುತ್ತಾರೆ. ಆದರೆ ಅದು ಮತವಾಗಿ ಬದಲಾಗುವುದಿಲ್ಲ, ಈ ವಿಷಯ ರಾಜಕಾರಣಿಗಳಿಗೂ ಗೊತ್ತಿದೆ," ಎಂದು ತಿಳಿಸಿದರು.

ಸಿನಿಮಾ ತಾರೆಯರು ಹೇಳಿದ ಪಕ್ಷಕ್ಕೆ ಜನರು ಮತ ಹಾಕುವುದಿಲ್ಲ

"ಸಿನಿಮಾ ನಟರನ್ನು ಚುನಾವಣಾ ಪ್ರಚಾರಕ್ಕೆ ಕರೆ ತಂದರೆ ಜನ ಸೇರುತ್ತಾರೆ. ಜನರನ್ನು ಸೇರಿಸಲು ಹಣ ನೀಡಬೇಕಾಗುತ್ತದೆ, ಅದರ ಬದಲು ಸ್ಟಾರ್ ನಟ-ನಟಿಯರನ್ನು ಕರೆತಂದರೆ ಜನರು ತಾವಾಗಿಯೇ ಬರುತ್ತಾರೆ. ನೆರೆದ ಜನರಿಗೆ ಅಭ್ಯರ್ಥಿ ಹೇಗೆ ತನ್ನ ವಿಷಯ ಮುಟ್ಟಿಸುತ್ತಾನೆ ಎಂಬುದು ಮುಖ್ಯ. ನಟ ಅಥವಾ ನಟಿಯರು ಹೇಳಿದ ಮಾತ್ರಕ್ಕೆ ಜನರು ಮತ ಹಾಕುವುದಿಲ್ಲ. ಜನ ಸೇರಿಸಲು ಮಾತ್ರ ಸಿನಿಮಾ ತಾರೆಯರು ನೆರವಾಗುತ್ತಾರೆ," ಎಂದು ರಮ್ಯಾ ಅಭಿಪ್ರಾಯಪಟ್ಟರು.

 Karnataka Elections 2023: Cinema Stars Cant Influence On Voters in Election Campaigns Says Actress Ramya

ಇದೇ ವೇಳೆ ನಟ ಸುದೀಪ್ ಅವರು ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿರುವ ಕುರಿತು ಮಾತನಾಡಿದ ರಮ್ಯಾ, "ಅದು ಅವರ ವೈಯಕ್ತಿಕ ಆಯ್ಕೆ. ಅವರು ನನ್ನ ಆತ್ಮೀಯ ಸ್ನೇಹಿತ, ಬಿಜೆಪಿಗೆ ಬೆಂಬಲ ನೀಡುವ ಮುನ್ನ ನನ್ನ ಬಳಿ ಚರ್ಚಿಸಿದ್ದರು. ಅವರಿಗೆ ಬೇರೆ ಪಕ್ಷಗಳಿಂದವೂ ಆಫರ್​ಗಳು ಬಂದಿದ್ದವು. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬಹಳ ಆತ್ಮೀಯರಾಗಿರುವ ಕಾರಣ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ," ಎಂದರು.

ಸುದೀಪ್ ರಾಜಕೀಯಕ್ಕೆ ಬರಬೇಕು

ಸುದೀಪ್ ಬಗ್ಗೆ ಮಾತಾಡಿದ ರಮ್ಯಾ, "ಸುದೀಪ್ ಅವರಂಥವರು ರಾಜಕೀಯಕ್ಕೆ ಬರಬೇಕು. ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ, ಯುಕ್ತಿ ಸುದೀಪ್ ಅವರಿಗಿದೆ". ಈ ಮೂಲಕ ಸುದೀಪ್ ರಾಜಕೀಯಕ್ಕೆ ಬರಬಹುದೆಂಬ ಸುಳಿವನ್ನು ಕೂಡ ನಟಿ ರಮ್ಯಾ ಬಿಟ್ಟುಕೊಟ್ಟರು.

ಬಿಜೆಪಿ ಆಫರ್ ಬಹಿರಂಪಡಿಸಿದ ರಮ್ಯಾ

ಸಂದರ್ಶನದಲ್ಲಿ ಮಾತಾಡಿದ ನಟಿ ರಮ್ಯಾ, "ನನಗೆ ಬಿಜೆಪಿಯಿಂದಲೂ ಆಫರ್ ಬಂದಿತ್ತು. ಬಿಜೆಪಿಯ ಟಾಪ್ ಹಂತದ ವ್ಯಕ್ತಿಯೇ ನೇರವಾಗಿ ನನ್ನ ಬಳಿ ಮಾತನಾಡಿ ಪಕ್ಷಕ್ಕೆ ಆಹ್ವಾನಿಸಿದ್ದರು. ಸಚಿವೆ ಮಾಡುವ ಆಫರ್ ಅನ್ನು ಸಹ ನೀಡಿದ್ದರು," ಎಂದು ರಮ್ಯಾ ಬಹಿರಂಗಪಡಿಸಿದರು.

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಮ್ಯಾ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನೀಡಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ರಮ್ಯಾ ಅವರು ಹೆಸರಿದೆ. ಆದರೆ ಅವರಿನ್ನೂ ಪ್ರಚಾರ ಆರಂಭಿಸಿಲ್ಲ. ಪಕ್ಷದ ಚುನಾವಣಾ ಪ್ರಚಾರ ಸಮಿತಿ ಏನು ಹೇಳುತ್ತದೆಯೋ ಅದನ್ನು ನಾನು ಮಾಡುತ್ತೇನೆ ಎಂದು ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ.

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಕೊನೆಯ ದಿನಾವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+