ಬಿಜೆಪಿ ಮೊದಲ ಪಟ್ಟಿ, ಯಾರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್?
Recommended Video

ಬೆಂಗಳೂರು, ಮಾರ್ಚ್ 16 : 2018ರ ವಿಧಾನಸಭೆ ಚುನಾವಣೆಗೆ ಕರ್ನಾಟಕ ಬಿಜೆಪಿ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಬಹತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ. ಹೊಸದಾಗಿ ಪಕ್ಷಕ್ಕೆ ಸೇರಿದ ಕೆಲವು ನಾಯಕರಿಗೂ ಟಿಕೆಟ್ ಹಂಚಿಕೆ ಮಾಡಲಾಗಿದೆ.
ಬಿಜೆಪಿ ಮೊದಲ ಪಟ್ಟಿ ಈಗಾಗಲೇ ಸಿದ್ಧವಾಗಿದೆ. ರಾಮನಮವಿ ಹೊತ್ತಿಗೆ ಪಟ್ಟಿಯನ್ನು ಪಕ್ಷ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈಗ ಸಿದ್ಧಗೊಂಡಿರುವ ಪಟ್ಟಿಯಲ್ಲಿ ಹಲವು ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ.
ಶುಕ್ರವಾರ ಸಂಜೆ 5 ಗಂಟೆಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬ್ರೇಕಿಂಗ್ ನ್ಯೂಸ್ ಕೊಡುವುದಾಗಿ ಟ್ವಿಟ್ ಮಾಡಿದ್ದಾರೆ. ಈ ಟ್ವಿಟ್ ಕರ್ನಾಟಕದ ರಾಜಕೀಯದಲ್ಲಿ ಭಾರೀ ಕುತೂಹಲ ಹುಟ್ಟು ಹಾಕಿದೆ.

ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಈ ಪಟ್ಟಿ ನೋಡಿ
* ಮಲ್ಲೇಶ್ವರ - ಅಶ್ವಥ್ ನಾರಾಯಣ
* ರಾಜಾಜಿನಗರ - ಸುರೇಶ್ ಕುಮಾರ್
* ಪದ್ಮನಾಭನಗರ - ಆರ್.ಅಶೋಕ್
* ಜಯನಗರ - ವಿಜಯ ಕುಮಾರ್
* ಬಸವನಗುಡಿ - ರವಿ ಸುಬ್ರಮಣ್ಯ
* ಬೆಂಗಳೂರು ದಕ್ಷಿಣ - ಎಂ.ಕೃಷ್ಣಪ್ಪ
* ಯಲಹಂಕ - ಎಸ್.ಆರ್.ವಿಶ್ವನಾಥ್
* ದಾಸರಹಳ್ಳಿ - ಎಸ್.ಮುನಿರಾಜು
* ಮಹದೇವಪುರ - ಅರವಿಂದ ಲಿಂಬಾವಳಿ
* ಹೆಬ್ಬಾಳ - ವೈ.ಎ.ನಾರಾಯಸ್ವಾಮಿ
* ಸಿ.ವಿ.ರಾಮನ್ ನಗರ - ಸಿ.ರಘು
* ಬೊಮ್ಮನಹಳ್ಳಿ - ಸತೀಶ್ ರೆಡ್ಡಿ
* ಶಿಕಾರಿಪುರ - ಬಿ.ಎಸ್.ಯಡಿಯೂರಪ್ಪ
* ಅಥಣಿ - ಲಕ್ಷಣ ಸವದಿ
* ಬೆಳಗಾವಿ ಉತ್ತರ - ಸಂಜಯ್ ಪಾಟೀಲ್
* ಹುಕ್ಕೇರಿ - ಉಮೇಶ್ ಕತ್ತಿ
* ಮುಧೋಳ - ಗೋವಿಂದ ಕಾರಜಜೋಳ
* ರಾಯಚೂರು ನಗರ - ಡಾ.ಶಿವರಾಜ್ ಪಾಟೀಲ್
* ಚಿಕ್ಕಮಗಳೂರು - ಸಿ.ಟಿ.ರವಿ
* ಮಡಿಕೇರಿ - ಅಪ್ಪಚ್ಚು ರಂಜನ್
* ಹಾನಗಲ್ - ಸಿ.ಎಂ.ಉದಾಸಿ
* ಶಿಗ್ಗಾವಿ - ಬಸವರಾಜ ಬೊಮ್ಮಾಯಿ
* ಶಿರಸಿ - ವಿಶ್ವೇಶ್ವರ ಹೆಗಡೆ ಕಾಗೇರಿ
* ಹುಬ್ಬಳ್ಳಿ-ಧಾರವಾಡ ಕೇಂದ್ರ - ಜಗದೀಶ್ ಶೆಟ್ಟರ್












Click it and Unblock the Notifications