Get Updates
Get notified of breaking news, exclusive insights, and must-see stories!

Karnataka: ಚಿಂಚನಸೂರು ನಂತರ ಸಂಸದ ಉಮೇಶ್‌ ಜಾದವ್‌, ಗುತ್ತೇದಾರ್‌ ಕಾಂಗ್ರೆಸ್‌ಗೆ? ಚುನಾವಣೆಗೂ ಮುನ್ನವೇ ಖರ್ಗೆ ಪ್ರಭಾವ ಚಲಾವಣೆ

ಬಿಜೆಪಿ ಎಂಎಲ್‌ಸಿ ಬಾಬುರಾವ್ ಚಿಂಚನಸೂರ್‌ ನಂತರ ಕಲಬುರಗಿ ಸಂಸದ ಉಮೇಶ್‌ ಜಾದವ್‌ ಹಾಗೂ ಮಾಜಿ ಮಾಲಿಕಯ್ಯ ಗುತ್ತೇದಾರ್‌ ಅವರು ಕಾಂಗ್ರೆಸ್‌ ಸೇರುವ ಸಾಧ್ಯತೆಗಳಿವೆ. ಈ ವರದಿ ಓದಿ.

ಬೆಂಗಳೂರು, ಮಾರ್ಚ್‌ 21: ಕರ್ನಾಟಕ ಚುನಾವಣೆಗೆ ( Karnataka Assembly Elections 2023 ) ಕೆಲ ದಿನಗಳು ಬಾಕಿ ಇರುವಾಗ ಪಕ್ಷಾಂತರ ಜೋರಾಗಿ ನಡೆದಿದೆ. ಅದರಲ್ಲೂ ಕಾಂಗ್ರೆಸ್‌ಗೆ ( Congress ) ಸೇರ್ಪಡೆಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಜೆಡಿಎಸ್‌ ( JDS ) ಹಾಗೂ ಬಿಜೆಪಿಯಿಂದ ( BJP ) ಹಲವು ಮುಖಂಡರು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದಂತೆ ಇನ್ನೂ ಹಲವರು ಕೈ ಪಾಳಯಕ್ಕೆ ಬರಲಿದ್ದಾರೆ ಎಂಬ ಮಾಹಿತಿಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೀಡಿದ್ದಾರೆ.

 ಬಿಜೆಪಿ ಎಂಎಲ್‌ಸಿ ಬಾಬುರಾವ್ ಚಿಂಚನಸೂರ್ 'ಕೈ' ಸೇರ್ಪಡೆ

ಬಿಜೆಪಿ ಎಂಎಲ್‌ಸಿ ಬಾಬುರಾವ್ ಚಿಂಚನಸೂರ್ 'ಕೈ' ಸೇರ್ಪಡೆ

ಕಲಬುರಗಿ ಭಾಗದ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರಾದ ಬಿಜೆಪಿ ಎಂಎಲ್‌ಸಿ ಬಾಬುರಾವ್ ಚಿಂಚನಸೂರ್ ಸೋಮವಾರ ರಾಜೀನಾಮೆ ನೀಡಿದ್ದಾರೆ. ಅವರು ಮಂಗಳವಾರ ಕಾಂಗ್ರೆಸ್‌ ಸೇರ್ಪಡೆಗೊಳ್ಳುವ ಬಗ್ಗೆ ತಿಳಿಸಿದ್ದಾರೆ.

ಕಳೆದ ವರ್ಷ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅವಿರೋಧವಾಗಿ ( ಬಿಜೆಪಿ ಅಭ್ಯರ್ಥಿಯಾಗಿ) ಆಯ್ಕೆಯಾಗಿದ್ದ ಚಿಂಚನಸೂರ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದರು.

ಅವರು ( ಚಿಂಚನಸೂರ್‌) ರಾಜೀನಾಮೆ ಸಲ್ಲಿಸಿದ್ದು, ನಾನು ಅದನ್ನು ಅಂಗೀಕರಿಸಿದ್ದೇನೆ ಎಂದು ಹೊರಟ್ಟಿ ಹೇಳಿದರು.

ಚಿಂಚನಸೂರ್ ಅವರು ಇತ್ತೀಚೆಗೆ ರಾಜೀನಾಮೆ ನೀಡಿದ ಎರಡನೇ ಬಿಜೆಪಿ ಎಂಎಲ್‌ಸಿಯಾಗಿದ್ದಾರೆ. ಕಳೆದ ವಾರ ಬಿಜೆಪಿಯಿಂದ ನಾಲ್ಕು ಬಾರಿ ಎಂಎಲ್‌ಸಿ ಆಗಿದ್ದ ಪುಟ್ಟಣ್ಣ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.

ಗುರುಮಿಟಕಲ್‌ನ ಮಾಜಿ ಶಾಸಕರಾದ ಚಿಂಚನಸೂರ್ ಅವರು ಕಳೆದ ಸಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋತರು. ಆ ನಂತರ 2018 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಕ್ರಮಣಕಾರಿ ಪ್ರಚಾರ ಮಾಡಿದವರಲ್ಲಿ ಅವರು ಒಬ್ಬರು. ಅವರು ಹಿಂದೊಮ್ಮೆ ಖರ್ಗೆ ಅವರ ಶಿಷ್ಯರೆಂದೇ ಬಿಂಬಿತರಾದವರು.

ಬಾಬುರಾವ್ ಚಿಂಚನಸೂರ್‌ ಅವರು ಕಲ್ಯಾಣ ಕರ್ನಾಟಕದ ನಾಯಕ ಕೋಲಿ ಸಮುದಾಯಕ್ಕೆ ಸೇರಿದವರು. ಪ್ರಸ್ತುತ ಅವರು ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಹಂಬಲ ಹೊಂದಿದ್ದಾರೆ.

 ಮತ್ತೆ 'ಕೈ' ಹಿಡಿಯಲಿದ್ದಾರೆಯೇ ಉಮೇಶ್‌ ಜಾದವ್‌?

ಮತ್ತೆ 'ಕೈ' ಹಿಡಿಯಲಿದ್ದಾರೆಯೇ ಉಮೇಶ್‌ ಜಾದವ್‌?

2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ ಉಮೇಶ್‌ ಜಾದವ್‌ ಜಯಗಳಿಸಿದರು. ಅವರು ಈ ಹಿಂದೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದರು. ನಂತರ, ಅವರು ಮಾರ್ಚ್ 2019 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದರು. ಉಮೇಶ್‌ ಜಾದವ್‌ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಶಿಷ್ಯರೆಂದೇ ಹೇಳಲಾಗುತ್ತಿದೆ. ಅವರು ಮತ್ತೆ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

 ಮಾಲೀಕಯ್ಯ ಗುತ್ತೇದಾರ ಕಾಂಗ್ರೆಸ್‌ ಸೇರ್ಪಡೆ?

ಮಾಲೀಕಯ್ಯ ಗುತ್ತೇದಾರ ಕಾಂಗ್ರೆಸ್‌ ಸೇರ್ಪಡೆ?

ಮಾಲೀಕಯ್ಯ ಗುತ್ತೇದಾರ್ ಕಲಬುರಗಿ ಜಿಲ್ಲೆಯ ಪ್ರಭಾವಿ ರಾಜಕಾರಣಿ. ಅಫಜಲಪುರ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದ ಅವರು ನಂತರ 2018 ರಲ್ಲಿ ಬಿಜೆಪಿ ಸೇರಿದರು.2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎಂ ವೈ ಪಾಟೀಲ್ ವಿರುದ್ಧ ಸೋತಿದ್ದರು. ಅವರೀಗ ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಮರಳಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.

ಮಲ್ಲಿಕಾರ್ಜುನ ಖರ್ಗೆ ಪ್ರಭಾವ ಚಲಾವಣೆ

ಮಲ್ಲಿಕಾರ್ಜುನ ಖರ್ಗೆ ಪ್ರಭಾವ ಚಲಾವಣೆ

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವ ಚಲಾವಣೆ ಆಗುತ್ತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಬಾಬುರಾವ್‌ ಚಿಂಚನಸೂರ್‌, ಮಾಲಿಕಯ್ಯ ಗುತ್ತೇದಾರ ಹಾಗೂ ಉಮೇಶ್‌ ಜಾದವ್‌ ಅವರು ಹಿಂದುಳಿದ ವರ್ಗಗಳಿಗೆ ಸೇರಿದ ಪ್ರಭಾವಿ ನಾಯಕರು. ಅವರ ಸೇರ್ಪಡೆಯಿಂದ ಕಲ್ಯಾಣ ಕರ್ನಾಟಕದಲ್ಲಿ ಹಿಂದೂಳಿದ ಮತಗಳ ದ್ರುವಿಕರಣವಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+