Jagadish Shettar: ದಶಕಗಳ ಕಾಲ ಕಾಂಗ್ರೆಸ್‌ ಅನ್ನು ತೆಗಳಿದ್ದ ಜಗದೀಶ್ ಶೆಟ್ಟರ್, ಈಗ ಬಿಜೆಪಿಯನ್ನು ತೆಗಳುವ ಕಾಲ!

ಬೆಂಗಳೂರು, ಏಪ್ರಿಲ್. 19: ಬಿಜೆಪಿಯಲ್ಲಿ ಟಿಕೆಟ್ ನಿರಾಕರಿಸಿದ್ದ ಕಾರಣ ಕಾಂಗ್ರೆಸ್ ಸೇರ್ಪಡೆಯಾದ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈ ಬಾರಿಯ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ಸ್ಥಾನ ಪಡೆದಿದ್ದಾರೆ. ದಶಕಗಳ ಕಾಲ ಬಿಜೆಪಿಯ ಬಗ್ಗೆ ಪ್ರಚಾರ ಮಾಡುತ್ತಾ, ಕಾಂಗ್ರೆಸ್ ಅನ್ನು ಖಂಡಿಸಿದ್ದ ಇವರು ಈಗ ಕಾಂಗ್ರೆಸ್ ಬಗ್ಗೆ ಒಳ್ಳೆಯ ಮಾತುಗಳನ್ನಾಡಬೇಕಿದೆ.

ನಾಲ್ಕು ದಶಕಗಳಿಂದ ಬಿಜೆಪಿಯನ್ನು ಕಟ್ಟಿ ಬೆಳಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈ ಬಾರಿ ಕಾಂಗ್ರೆಸ್ ಅಭಿವೃದ್ಧಿಗಳ ಬಗ್ಗೆ ಮಾತನಾಡಬೇಕಿದೆ. 70 ವರ್ಷಗಳ ಕಾಲ ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಆರೋಪಿಸುತ್ತಿದ್ದ ಅವರು, ಈಗ ಈ 70 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಕೆಲಸಗಳ ಬಗ್ಗೆ ಜನರ ಬಳಿ ಮಾತನಾಡಿ ಮತ ಕೇಳಿಬೇಕಿದೆ. ರಾಜ್ಯ ಕಾಂಗ್ರೆಸ್ ನಾಯಕರ ಬಗ್ಗೆ ಆರೋಪ ಮಾಡುತ್ತಿದ್ದವರು, ಅವರ ಬಗ್ಗೆಯೇ ಉತ್ತಮ ಮಾತಗಳನ್ನು ಆಡಬೇಕಿದೆ.

Karnataka elections 2023: Jagdish Shettar in the list of Congress star campaigners

ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಜಗದೀಶ್ ಶೆಟ್ಟರ್ ಅವರಿಗೆ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. ಈ ಕ್ಷೇತ್ರದಿಂದ 6 ಬಾರಿ ಗೆಲುವು ದಾಖಲು ಮಾಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ ಅವರದ್ದು. ಪ್ರಭಾವಿ ಲಿಂಗಾಯತ ಸಮುದಾಯದ ನಾಯಕರಾಗಿರುವ ಇವರಿಂದ ಆ ಸಮುದಾಯದ ಮತಗಳನ್ನು ಮತ್ತೆ ವಾಪಸ್ ಪಡೆಯವ ವಿಶ್ವಾಸದಲ್ಲಿದೆ ಕಾಂಗ್ರೆಸ್.

ಬುಧವಾರ ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು ನಲವತ್ತು ಮಂದಿ ಸ್ಟಾರ್ ಪ್ರಚಾರಕರನ್ನು ಪಕ್ಷ ಗುರುತಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಪಡೆಯಬೇಕು ಎಂಬ ಹಠದಲ್ಲಿ ಚುನಾವಣಾ ರಣತಂತ್ರಗಳನ್ನು ಕಾಂಗ್ರೆಸ್ ಹೆಣೆಯುತ್ತಿದೆ. ಸ್ಟಾರ್ ಪ್ರಚಾರಕ ಪಟ್ಟಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಉಮಾಶ್ರೀ, ನಟಿ ರಮ್ಯಾ, ಸಾಧುಕೋಕಿಲ ಸೇರಿದಂತೆ ಒಟ್ಟು ನಲವತ್ತು ಮಂದಿ ಪಟ್ಟಿಯಲ್ಲಿದ್ದಾರೆ.

ಕರ್ನಾಟಕ ವಿಧಾನಸಭೆಗೆ ಮುಂದಿನ ತಿಂಗಳು 10 ರಂದು ಚುನಾವಣೆ ನಡೆಯಲಿದ್ದು, 13 ರಂದು ಮತ ಏಣಿಕೆ ನಡೆಯಲಿದೆ. ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳನ್ನ ಘೋಷಿಸಿದ್ದ ಕಾಂಗ್ರೆಸ್‌ ಹೈಕಮಾಂಡ್‌ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನ ರಿಲೀಸ್‌ ಮಾಡಿತ್ತು. ಕಳೆದ ಶನಿವಾರ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, 43 ಅಭ್ಯರ್ಥಿಗಳಿಗೆ ಎಐಸಿಸಿ ಟಿಕೆಟ್‌ ನೀಡಿದೆ. ಮಂಗಳವಾರ ಮತ್ತೆ ಏಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅಲ್ಲದೇ ಇನ್ನೂ 8 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯನ್ನು ಕಾಂಗ್ರೆಸ್‌ ಬಾಕಿ ಉಳಿಸಿಕೊಂಡಿದೆ.

Karnataka elections 2023: Jagdish Shettar in the list of Congress star campaigners

*ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರು*

1. ಮಲ್ಲಿಕಾರ್ಜುನ ಖರ್ಗೆ

2 . ಸೋನಿಯಾ ಗಾಂಧಿ

3 . ರಾಹುಲ್ ಗಾಂಧಿ

4. ಪ್ರಿಯಾಂಕಾ ಗಾಂಧಿ ವಾದ್ರಾ

5 . ಡಿಕೆ ಶಿವಕುಮಾರ್

6 . ಸಿದ್ದರಾಮಯ್ಯ

7 . ಕೆ.ಸಿ. ವೇಣುಗೋಪಾಲ್

8 . ರಣದೀಪ್ ಸಿಂಗ್ ಸುರ್ಜೆವಾಲಾ

9 . ಬಿ.ಕೆ. ಹರಿಪ್ರಸಾದ್

10 . ಎಂ.ಬಿ. ಪಾಟೀಲ್

11. ಡಾ.ಜಿ.ಪರಮೇಶ್ವರ

12 . ಕೆ.ಎಚ್. ಮುನಿಯಪ್ಪ

13 . ಜೈರಾಮ್ ರಮೇಶ್

14 . ಡಾ. ಎಂ. ವೀರಪ್ಪ ಮೊಯ್ಲಿ

15 . ರಾಮಲಿಂಗಾ ರೆಡ್ಡಿ

16 . ಸತೀಶ್ ಜಾರಕಿಹೊಳಿ

17. ಜಗದೀಶ್ ಶೆಟ್ಟರ್

19 . ಜಿ.ಸಿ. ಚಂದ್ರಶೇಖರ್

20 . ಸೈಯದ್ ನಸೀರ್ ಹುಸೇನ್

21. ಜಮೀರ್ ಅಹ್ಮದ್ ಖಾನ್

22. ಎಚ್.ಎಂ. ರೇವಣ್ಣ

23. ಉಮಾಶ್ರೀ

24. ಅಶೋಕ್ ಗೆಹ್ಲೋಟ್

25. ಭೂಪೇಶ್ ಭಾಗೇಲ್

26. ಸುಖ್ವಿಂದರ್ ಸಿಂಗ್ ಸುಕ್ಕು

27. ಪಿ. ಚಿದಂಬರಂ

28. ಪೃಥ್ವಿರಾಜ್ ಚವಾಣ್

29 . ಅಶೋಕ್ ಚವಾಣ್

30 . ಶಶಿ ತರೂರ್

31 . ರೇವಂತ್ ರೆಡ್ಡಿ

32 . ರಮೇಶ್ ಚೆನ್ನಿತ್ತಲ

33 . ಬಿ.ವಿ.ಶ್ರೀನಿವಾಸ್

34 . ರಾಜ್ ಬಬ್ಬರ್

35 . ಮೊಹಮ್ಮದ್ ಅಜರುದ್ದೀನ್

36. ದಿವ್ಯ ಸ್ಪಂದನ / ರಮ್ಯಾ

37 . ಇಮ್ರಾನ್ ಪ್ರತಾಪಗರ್ಹಿ

38 . ಕನ್ಹಯ್ಯಾ ಕುಮಾರ್

39 . ರೂಪಾ ಶಶಿಧರ್

40 . ಸಾಧುಕೋಕಿಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+