ಹಿಜಾಬ್ ಗಲಾಟೆ, ಮೀಸಲಾತಿ ರದ್ದು: ವಿಧಾನಸಭಾ ಚುನಾವಣೆಯಲ್ಲಿ ಎಸ್‌ಡಿಪಿಐಗಿಂತ, ಕಾಂಗ್ರೆಸ್‌ಗೆ ಲಾಭ
ಮಂಗಳೂರು, ಏಪ್ರಿಲ್.24: ಒಂದು ವರ್ಷದ ಹಿಂದೆ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್ ವಿವಾದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ಗೆ ಲಾಭವಾಗುವ ಸಾಧ್ಯತೆಯಿಲ್ಲ ಎಂದು ರಾಜಕೀಯ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.
ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಹಿಜಾಬ್ ನಿಷೇಧದ ವಿರುದ್ಧದ ಅಭಿಯಾನವನ್ನು ಮುನ್ನಡೆಸುವ ಮೂಲಕ ಎಸ್‌ಡಿಪಿಐ ಕ್ರಮೇಣ ಮುಸ್ಲಿಮರನ್ನು ವಿಶೇಷವಾಗಿ ಯುವ ಸಮುದಾಯದ ಸುಮಾರು 20 ಪ್ರತಿಶತದಷ್ಟು ಆಕರ್ಷಿಸುತ್ತಿದೆ. ಆದರೆ, ಇದು ಮತವಾಗಿ ಪರಿವರ್ತನೆಯಾಗುವ ಸಂಭವವಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಮುಸ್ಲಿಂ ಕಾಲೇಜು ವಿದ್ಯಾರ್ಥಿಗಳ ಅಗಾಧ ಪ್ರತಿಕ್ರಿಯೆಯಿಂದ ಬಲಗೊಂಡ ಎಸ್‌ಡಿಪಿಐ ಮುಸ್ಲಿಂ ಸಮುದಾಯಗಳು ಗಣನೀಯ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಮಂಗಳೂರು, ಬಂಟ್ವಾಳ, ಪುತ್ತೂರು, ಮೂಡುಬಿದಿರೆ, ಬೆಳ್ತಂಗಡಿ ಮತ್ತು ಕಾಪುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಆದರೆ, ಕಳೆದ ಆರು ತಿಂಗಳಿನಿಂದ ಸರ್ಕಾರದ ನೀತಿಗಳು, ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸುವುದು, ಅವರನ್ನು ಆರ್ಥಿಕ ಹಿಂದುಳಿದ ವರ್ಗಗಳಿಗೆ ಸೇರಿಸಸಿರುವುದು ಸೇರಿಂದಂತೆ ಹಲವು ಕೋಮುಗಲಭೆಗಳಿಂದ ಮುಸ್ಲಿಂ ಸಮುದಾಯವು ಬಿಜೆಪಿ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದೆ. ಇದನ್ನು ಸಮರ್ಥವಾಗಿ ಎದುರಿಸಲಿ ಎಸ್‌ಡಿಪಿಐ ಬದಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂಬ ಮಾತುಗಳು ಸಮುದಾಯದಿಂದ ಕೇಳಿಬಂದಿವೆ.
ಮುಸ್ಲಿಮರು ಹೆಚ್ಚಿರುವ ಮಂಗಳೂರು ಮತ್ತು ಬಂಟ್ವಾಳ ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಸ್ವಲ್ಪ ಮತಗಳನ್ನು ಗಳಿಸಬಹುದು. ಆದರೆ ಅವರು ಕಾಂಗ್ರೆಸ್‌ನ ಮತಗಳನ್ನು ಹಾಳುಮಾಡಲು ಸಾಧ್ಯವಿಲ್ಲ ಎಂದು ರಾಜಕೀಯ ವಿಜ್ಞಾನಿ ಪ್ರೊ.ಮುಜಾಫರ್ ಅಸ್ಸಾದಿ ಅಭಿಪ್ರಾಯಪಟ್ಟಿದ್ದಾರೆ.
ಹಿಜಾಬ್ ವಿವಾದವನ್ನು ಬಳಸಿ ಎಸ್‌ಡಿಪಿಐ ಕೂಡ ಹೋರಾಡಿದೆ. ಪಕ್ಷವು ಸಮುದಾಯದಲ್ಲಿ ಭದ್ರತೆಯ ಭಾವನೆಯನ್ನು ಪ್ರಚೋದಿಸಲು ಪ್ರಯತ್ನಿಸಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ಮೀಸಲಾತಿ ರದ್ದತಿ ನಿರ್ಧಾರದ ನಂತರ ಸಮುದಾಯವು ಹೆಚ್ಚು ಆತಂಕಕ್ಕೆ ಒಳಗಾಗಿದ್ದು, ಮೀಸಲಾತಿಯನ್ನು ಪುರ್ನ ಜಾರಿಮಾಡುವುದಾಗಿ ಹೇಳುತ್ತಿರುವ ಕಾಂಗ್ರೆಸ್ ಕಡೆಗೆ ವಾಲುತ್ತಿದೆ. ಹೀಗಾಗಿ ಮುಸ್ಲಿಮರು ಎಸ್‌ಡಿಪಿಐಗಿಂತ ಹೆಚ್ಚಾಗಿ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾರೆ" ಎಂದು ಅವರು ಹೇಳಿದ್ದಾರೆ.
ಹಿಜಾಬ್ ವಿವಾದದ ಸಂದರ್ಭದಲ್ಲಿ ಸಿಎಫ್‌ಐ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಂಟ್ವಾಳದ ಮೊದಲ ಬಾರಿಗೆ ಮತ ಚಲಾಯಿಸಲು ಸಿದ್ಧವಾಗಿರುವ ಅಲ್ತಾಫ್ (ಹೆಸರು ಬದಲಾಯಿಸಲಾಗಿದೆ) ಜಾತ್ಯತೀತ ಮತಗಳನ್ನು ವಿಭಜಿಸದಿದ್ದರೆ ಸಮುದಾಯಕ್ಕೆ ಲಾಭವಾಗುತ್ತದೆ ಎಂದು ಭಾವಿಸುತ್ತಾರೆ. "2B ಮೀಸಲಾತಿ ಮತತ್ಎ ಜಾರಿಗೆ ಬರಬೇಕು ಎಂದು ನಾನು ಬಯಸುತ್ತೇನೆ. ಈ ಕಾರಣದಿಂದ ಮಿಸಲಾತಿ ಬಗ್ಗೆ ಭರವಸೆ ನೀಡುವ ಪಕ್ಷಕ್ಕೆ ಮತ ಹಾಕುತ್ತೇನೆ" ಎಂದು ತಿಳಿಸಿದ್ದಾರೆ.
ಅದರಲ್ಲೂ ಕರಾವಳಿ ಕರ್ನಾಟಕದ ಮುಸ್ಲಿಮರು ಈ ಚುನಾವಣೆಯಲ್ಲಿ ಅಲೆದು ತೂಗಿ ಮತ ಹಾಕಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ. "ದಕ್ಷಿಣ ಕನ್ನಡದ ಕಾಂಗ್ರೆಸ್ ನಾಯಕರ ನಾಮಪತ್ರ ಸಲ್ಲಿಕೆಯಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರಲಿಲ್ಲ. ಆದರೆ ಅವರು ತಮ್ಮ ದೊಡ್ಡ ಶತ್ರುವನ್ನು ಸೋಲಿಸಲು ಮೌನವಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications