Opinion Poll: ಮೆಲ್ಲಗೆ ಗೆಲುವಿಗೆ ಹತ್ತಿರವಾಗುತ್ತಿದೆ ಬಿಜೆಪಿ!
ಬೆಂಗಳೂರು: ಸಮೀಕ್ಷೆಗಳ ಪ್ರಕಾರ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಪಡೆಯುವುದು ಕಷ್ಟ. ಅದರಲ್ಲೂ ಇಂದು ಬಹಿರಂಗವಾದ ಟಿವಿ9 ಮತ್ತು ಸಿ-ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿ 79-89 ಸ್ಥಾನ ಪಡೆಯುವ ನಿರೀಕ್ಷೆ ಇದೆ. ಆದರೆ 28 ದಿನದ ಹಿಂದಿನ ಸಮೀಕ್ಷೆಯಲ್ಲಿ ಬಿಜೆಪಿ ಇನ್ನೂ ಹಿಂದೆ ಇತ್ತು. ಆದರೆ 10 ಸ್ಥಾನ ಮುಂದಕ್ಕೆ ಜಿಗಿದಿದೆ. ಆ ಬಗ್ಗೆ ಎಕ್ಸ್‌ಕ್ಲೂಸಿವ್ ಡೀಟೇಲ್ಸ್ ಇಲ್ಲಿದೆ.
ಹೌದು, ಕಳೆದ ತಿಂಗಳು ಬಹಿರಂಗವಾಗಿದ್ದ ಸಿ-ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿ ಈ ಚುನಾವಣೆಯಲ್ಲಿ 68ರಿಂದ 80 ಸ್ಥಾನ ಪಡೆಯುವ ನಿರೀಕ್ಷೆ ಇತ್ತು. ಆದರೆ ಇದೀಗ ಅದು ಮುಂದಕ್ಕೆ ಹೋಗಿದೆ, ಬಿಜೆಪಿ ಈಗಿನ ಸಮೀಕ್ಷೆ ಪ್ರಕಾರ 79ರಿಂದ 89 ಸ್ಥಾನ ಪಡೆಯುವ ನಿರೀಕ್ಷೆ ಇದೆ. ಅಂದರೆ 10 ಸ್ಥಾನ ಬಿಜೆಪಿ ಖಾತೆಗೆ ಸೇರಿಕೊಂಡಿದೆ. ಈ ಮೂಲಕ ನಿಧಾನವಾಗಿ ಬಿಜೆಪಿ ರಿಕವರಿ ಆಗುತ್ತಿರುವುದು ಪಕ್ಕಾ ಆಗಿದೆ. ಹಾಗಾದರೆ ಬಿಜೆಪಿಗೆ ಪ್ಲಸ್ ಆಗುತ್ತಿರುವ ವಿಚಾರಗಳು ಯಾವುವು ಎಂಬುದನ್ನ ಮುಂದೆ ತಿಳಿಯೋಣ.

ಪ್ರಧಾನಿ ಮೋದಿ ವಿಸಿಟ್
ಕರ್ನಾಟಕ ವಿಧಾನಸಭೆ ಚುನಾವಣೆಗೂ ಕೆಲ ತಿಂಗಳ ಹಿಂದಿನಿಂದ ಪ್ರಧಾನಿ ಮೋದಿ ಅವರು ನಿರಂತರವಾಗಿ ಕರ್ನಾಟಕಕ್ಕೆ ಪ್ರವಾಸ ಹಮ್ಮಿಕೊಳ್ಳುತ್ತಿದ್ದಾರೆ. ಅದರಲ್ಲೂ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವಾರು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಪ್ರಮುಖವಾಗಿ ಬಿಜೆಪಿಗೆ ಹಿನ್ನಡೆ ಉಂಟಾಗಬಹುದಾದ ಜಾಗದಲ್ಲಿ ಪ್ರಧಾನಿ ಮೋದಿ ಭೇಟಿ ನೀಡಿರುವುದು ಬಿಜೆಪಿಗೆ ಮತ್ತಷ್ಟು ಬಲ ನೀಡುತ್ತಿದೆ. ಈ ಮೂಲಕ ಪಿಎಂ ಮೋದಿ ವರ್ಚಸ್ಸಿನ ಪ್ರಭಾವ ವಿಪಕ್ಷಗಳಿಗೆ ಹಿನ್ನಡೆ ಉಂಟಾಗುತ್ತಿದೆ ಎನ್ನಬಹುದು.
ಅಮಿತ್ ಶಾ ತಂತ್ರಗಾರಿಕೆ
ಚುನಾವಣಾ ಚಾಣಕ್ಯ ಎಂಬ ಬಿರುದು ಪಡೆದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕರ್ನಾಟಕ ವಿಧಾನಸಭೆಯ ಮೇಲೆ ನಿಗಾ ವಹಿಸಿದ್ದಾರೆ. ಈ ಬಾರಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬುದು ಅಮಿತ್ ಶಾ ನಿರ್ಧಾರ. ಈ ಕಾರಣಕ್ಕೆ ಪದೇ ಪದೆ ಅಮಿತ್ ಶಾ ಕರ್ನಾಟಕಕ್ಕೆ ಭೇಟಿ ನೀಡಿ, ಪಕ್ಷದ ವರಿಷ್ಠರ ಜೊತೆ ಸಭೆ ನಡೆಸಿ ರಣತಂತ್ರ ರೂಪಿಸಿದ್ದು, ಕಳೆದ 1 ತಿಂಗಳಲ್ಲಿ ಸಾಕಷ್ಟು ಪ್ರಭಾವ ಬೀರಿದೆ ಈ ಎಲ್ಲಾ ಕಾರಣಕ್ಕೆ ಕಳೆದ 1 ತಿಂಗಳ ಹಿಂದೆ ಇದ್ದ ಟ್ರೆಂಡ್ ಬದಲಾಗಿ, ಈಗ ಬಿಜೆಪಿ ಮತ್ತಷ್ಟು ಮುಂದೆ ಸಾಗಲು ಅನುಕೂಲವಾಗಿದೆ.

ಗುಜರಾತ್ ಮಾದರಿ ಎಫೆಕ್ಟ್?
ರಾಜ್ಯದಲ್ಲಿ ಧೈರ್ಯವಾಗಿ ಗುಜರಾತ್ ಮಾಡೆಲ್ ಅಪ್ಲೈ ಮಾಡಿದ್ದು ಕೂಡ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆಯಾ ಎಂಬ ಡೌಟ್ ಶುರುವಾಗಿದೆ. ಏಕೆಂದರೆ ಸಾಕಷ್ಟು ವಿರೋಧಗಳ ನಡುವೆ ಹಲವು ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಮಾಡಲಾಗಿತ್ತು. ಆರೋಪ ಇರುವ ಶಾಸಕರನ್ನು ಮುಲಾಜೆ ಇಲ್ಲದೆ ಕೈಬಿಡಲಾಗಿತ್ತು. ಈ ಮೂಲಕ ಗುಜರಾತ್ ಮಾದರಿ ಅನುಸರಿಸಿ 2023ರ ವಿಧಾನಸಭೆ ಚುನಾವಣೆ ಗೆಲುವಿಗೆ ರಣತಂತ್ರ ರೂಪಿಸಲಾಗಿದೆ. ಆದರೆ ಇದು ಚುನಾವಣೆ ಮೇಲೆ ಅಂತಿಮವಾಗಿ ಯಾವ ರೀತಿ ಎಫೆಕ್ಟ್ ಬೀರಲಿದೆ ಎಂಬುದನ್ನ ಕಾದು ನೋಡಬೇಕು.
ಮಾಜಿ ಸಿಎಂ ಬಿಎಸ್‌ವೈ ನಾಯಕತ್ವ
ಇಷ್ಟೆಲ್ಲದರ ಮಧ್ಯೆ ಮಾಜಿ ಸಿಎಂ ಯಡಿಯೂರಪ್ಪ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಅಲರ್ಟ್ ಆಗಿದ್ದು ಕೂಡ ಡ್ಯಾಮೇಜ್ ಕಂಟ್ರೋಲ್ ಮಾಡಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಯಡಿಯೂರಪ್ಪ ಸೇರಿದಂತೆ ಲಿಂಗಾಯತ ನಾಯಕರನ್ನು ಬಿಜೆಪಿ ಮೂಲೆಗುಂಪು ಮಾಡುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪವನ್ನ ಸುಳ್ಳಾಗಿಸಲು ಬಿಜೆಪಿ ಕೂಡ ಪ್ರತಿತಂತ್ರ ಹೂಡಿತ್ತು. ಪರಿಣಾಮವಾಗಿ ಬಿಎಸ್‌ವೈ ಅವರಿಗೆ ಚುನಾವಣೆ ಮುಂದಾಳತ್ವ ನೀಡಿದ್ದು ಮತ್ತೊಂದು ಪ್ಲಸ್ ಪಾಯಿಂಟ್ ಎನ್ನಬಹುದು.

ಒಟ್ನಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಏನೇ ಇದ್ದರೂ ಮತದಾರ ಪ್ರಭು ಯಾವ ನಿಲುವು ಕೈಗೊಳ್ಳಲಿದ್ದಾನೆ ಎಂಬ ಅಂಶದ ಮೇಲೆ ಎಲ್ಲಾ ನಿರ್ಧಾರ ಆಗಲಿದೆ. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಕೂಡ ಪ್ರಕಟವಾಗಲಿದೆ. ಅಂದೇ ರಾಜ್ಯದಲ್ಲಿ ಅಧಿಕಾರ ನಡೆಸುವ ಪಕ್ಷ ಯಾವುದು ಎಂಬುದು ಡಿಸೈಡ್ ಆಗಲಿದೆ. ಅಲ್ಲಿಯತನ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರ ಎಲೆಕ್ಷನ್ ಫೈಟ್ ಕಂಟಿನ್ಯೂ ಆಗೋದು ಪಕ್ಕಾ.












Click it and Unblock the Notifications