BJP Seven Gems: ಟಿಕೆಟ್ ಸಿಗದಿದ್ದರೂ ಪಕ್ಷವೇ ನನ್ನ ತಾಯಿ ಎಂದ ಬಿಜೆಪಿಯ 'ಸಪ್ತರತ್ನಗಳು' ಇವರು
ಬೆಂಗಳೂರು, ಏಪ್ರಿಲ್ 19: ಕರ್ನಾಟಕ ಆಡಳಿತಾರೂಢ ಬಿಜೆಪಿಯಲ್ಲಿ ಮೊದಲೆರಡು ಚುನಾವಣಾ ಸ್ಪರ್ಧಾಗಳುಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಟಿಕೆಟ್ ಸಿಗದ ಮುಖಂಡರ ಅಸಮಾಧಾನ ಭುಗಿಲೇಳಿತು. ಆಕ್ರೋಶಗೊಂಡರು. ಈ ಮಧ್ಯೆ ಟಿಕೆಟ್ ವಂಚಿತ ಅನೇಕ ನಾಯಕರು ಇನ್ನೂ ಸಹ ಬಿಜೆಪಿಯಲ್ಲಿಯೇ ಇರುವ ಮೂಲಕ ಪಕ್ಷ ನಿಷ್ಠೆ ಮೆರೆದಿದ್ದಾರೆ.
ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಳಿಕ ಬಿಜೆಪಿಗೆ ರಾಜೀನಾಮೆ ನೀಡದೇ ಪಕ್ಷದಲ್ಲಿರುವ ಈ 07 ನಾಯಕರು (ಸಪ್ತರತ್ನಗಳು) ತಾವು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಚುನಾವಣೆ ಎದುರಿಸುವುದಾಗಿ ಹೇಳಿಕೊಂಡಿದ್ದಾರೆ. ಪಕ್ಷಾಂತರ, ಬಂಡಾಯ ನಾಯಕರಿಗೆ ಹಾಗೂ ಟೀಕಿಸಿತ್ತಿರುವ ವಿಪಕ್ಷಗಳಿಗೆ ಬಿಜೆಪಿ ಪಕ್ಷ ಬಿಡದೇ ಮಾದರಿಯಾದವರನ್ನು ಉಲ್ಲೇಖಿಸಿದೆ.

ಬಿಜೆಪಿ ಪಕ್ಷಕ್ಕೆ ನಿಷ್ಠೆ ತೋರಿದ 'ಸಪ್ತರತ್ನಗಳು'
1. ಕೆ. ರಘುಪತಿ ಭಟ್ ಅವರು ಉಡುಪಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಮೂರು ಭಾರಿ ಶಾಸಕರಾಗಿ ಆಯ್ಕೆಯಾದವರು. ಅವರು ಈ 2023ರ ವಿಧಾನಸಭಾ ಚುನಾವನೆಯಲ್ಲಿ ಸ್ಪರ್ಧಿಸಲು ಬಯಲಸಿದ್ದರು. ಆದರೆ ಅವರಿಗೆ ಬಿಜೆಪಿ ಟಿಕೆಟ್ ನೀಡಲಿಲ್ಲ. ಇದರಿಂದ ಅವರಿಗೆ ನಿರಾಶೆಯಾಗಿದೆ. ಹೀಗಿದ್ದರು ಸಹ ಅವರು ಬಿಜೆಪಿ ಪಕ್ಷಕ್ಕೆ ನಿಷ್ಠಾವಂತ ನಾಯಕರೆನಿಸಿಕೊಂಡಿದ್ದಾರೆ. ಕಾರಣ ಅವರು ಪಕ್ಷವನ್ನು ಬಿಟ್ಟಿಲ್ಲ.
2. ಬಿಜೆಪಿ ಮತ್ತೊಬ್ಬ ನಾಯಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರದ್ದು ಕರಾವಳಿಯ ಉಡುಪಿ ಜಿಲ್ಲೆಯ ಕುಂದಾಪುರ ಕ್ಷೇತ್ರ. ಅವರು ಸದರಿ ವಿಧಾನಸಭಾ ಚುನಾವನೆಯಲ್ಲಿ ಬಿಜೆಪಿಯಿಂದ ಟಿಕೆಟ್ ಬಯಸಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದೆ. ಆದರೆ ಬೇರೆಯವರಂತೆ ಅವರು ಪಕ್ಷ ತೊರೆಯದೇ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.
3. ಹಾಲಿ ಶಾಸಕರಾದ ಎಸ್. ಅಂಗಾರ ಅವರು ಸುಳ್ಯ ಕ್ಷೇತ್ರದಿಂದಲೇ ಬಿಜೆಪಿ ಪಕ್ಷದಿಂದ 1994ರಿಂದಲೂ ಗೆಲ್ಲುತ್ತಲೇ ಬಂದ ಪ್ರಭಾವಿ ನಾಯಕರೆನಿಸಿಕೊಂಡಿದ್ದಾರೆ. ಆದರೆ ಅವರಿ ಭಾರಿ ಅಸೆಂಬ್ಲಿ ಟಿಕೆಟ್ ಮಿಸ್ ಆಗಿದೆ. ಆದರೆ ಅಂಗಾರ್ ಅವರು ಮಾತ್ರ ಕೇಸರಿ ಪಡೆಯಿಂದ ವಿಮುಖರಾಗಿಲ್ಲ. ಅವರ ಪಕ್ಷನಿಷ್ಠೆ ಬೇರೆಯವರಿಗೂ ಮಾದರಿ ಎಂದು ಬಿಜೆಪಿ ಹೇಳುತ್ತಿದೆ.

4. ಮಾಜಿ ಸಚಿವ ಮತ್ತು ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪನವರು ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಹಿಂದಿನಿಂದ ಶ್ರಮಿಸಿದವರು. ಈ ಬಾರಿ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಸುಳಿವು ಸಿಗುತ್ತಿದ್ದಂತೆ ಅವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದರು. ಸ್ವ ಕ್ಷೇತ್ರದ ಟಿಕೆಟ್ ತಮ್ಮ ಮಗ ಅಥವಾ ಸೊಸೆಗೆ ನೀಡಲು ಕೇಳಿದ್ದಾರೆ. ಈ ಕ್ಷೇತ್ರಕ್ಕೆ ಇನ್ನೂ ಟಿಕೆಟ್ ಘೋಷಣೆ ಆಗಿಲ್ಲ. ಆದರೆ ಈಶ್ವರಪ್ಪನವರು ಬಿಜೆಪಿಯಲ್ಲಿದ್ದುಕೊಂಡು ಕ್ಷೇತ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ.
5. ಬಿ.ಎಂ.ಸುಕುಮಾರ್ ಶೆಟ್ಟಿ ಬೈಂದೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರು. ಕಳೆದ 2018ರಲ್ಲಿ ಪಕ್ಷವನ್ನು ಕ್ಷೇತ್ರದಲ್ಲಿ ಗೆಲ್ಲಿಸಿದವರು. ಈ ಬಾರಿಯ ವಿಧಾನಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಆದರೆ ಅವರು ಈಗಲೂ ಸಹ ಪಕ್ಷದಲ್ಲಿದ್ದುಕೊಂಡೆ ಸಕ್ರಿಯವಾಗಿದ್ದಾರೆ.
6. ಎಸ್.ಎ.ರಾಮದಾಸ್ ಮೈಸೂರು ಜಿಲ್ಲೆಯ ಕೃಷ್ಣರಾಜ ಕ್ಷೇತ್ರದಿಂದ ಕೆಲವು ಬಾರಿ ಬಿಜೆಪಿಯಿಂದಲೇ ಶಾಸಕರಾಗಿ ಆಯ್ಕೆಯಾದವರು. ಕ್ಷೇತ್ರದಾದ್ಯಂತ ಅಪಾರ ಬೆಂಬಲಿಗರನ್ನು ಹೊಂದಿದ್ದು, ಅಭಿವೃದ್ಧಿಯನ್ನು ಮಾಡಿದ್ದಾರೆ. ಆದರೆ ಅವರಿಗೆ ಈ ಸಲ ಅಸೆಂಬ್ಲಿ ಟಿಕೆಟ್ ನಿರಾಕರಿಸಿದ್ದರಿಂದ ಅವರು ಬೇಸರಗೊಳ್ಳದೇ ಪಕ್ಷಾಂತರ ಮಾಡದೇ ಪಕ್ಷದಲ್ಲಿಯೆ ಇದ್ದಾರೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕಿಳಿದಿದ್ದಾರೆ.
7. ಲಾಲಾಜಿ ಮೆಂಡನ್ ಅವರು ಉಡುಪಿ ಜಿಲ್ಲೆಯ ಕಾಪು ಕ್ಷೇತ್ರ ವಿಧಾನಸಭಾ ಕ್ಷೇತ್ರದಿಂದ ಎರಡು ಭಾರಿ ಚುನಾಯಿತರಾದವರು. ಇವರಿಗೂ ಸಹ ತಮ್ಮ ಕ್ಷೇತ್ರದಿಂದ ಟಿಕೆಟ್ ವಂಚಿತರಾಗಿದ್ದಾರೆ. ಆದರೆ ಪಕ್ಷದಲ್ಲಿದ್ದುಕೊಂಡು ಬಿಜೆಪಿ ಅಭ್ಯರ್ಥಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ.












Click it and Unblock the Notifications