ಇಬ್ಬರೂ ಮಾಜಿ ಸಿಎಂ ಗಳಿಗೆ ಬಾರೀ ಹಿನ್ನಡೆ! ವರ್ಕೌಟ್‌ ಆಗಾದ ಗೆಲ್ಲುವ ಅಭ್ಯರ್ಥಿಗಳ ತಂತ್ರ ?

ಬೆಂಗಳೂರು, ಮೇ 13: ಕರ್ನಾಟಕ ವಿಧಾನಸಭೆ ಚುನಾವಣೆಯು ರಾಷ್ಟ್ರದಾದ್ಯಂತ ಭಾರೀ ಕುತೂಹಲ ಕೆರಳಿಸಿದೆ. ಯಾವ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯುತ್ತೇ ಎಂಬ ಲೆಕ್ಕಾಚಾರಗಳು ಒಂದು ಕಡೆಯಾದ್ರೆ, ಆರಂಭದಲ್ಲಿ ಘಟಾನುಘಟಿ ಮಾಜಿ ಮುಖ್ಯಮಂತ್ರಿಗಳಿಗೆ ಬಾಋೀ ಹಿನ್ನಡೆ ಅನುಭವಿಸಿದ್ದಾರೆ.

ಹೌದು, ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಆರಂಭಿಕ ಹಿನ್ನಡೆಯಾಗಿದೆ. ಈಗಾಗಲೇ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರನ್ನ ಸೋಲಿಸಲು ಹಲವು ತಂತ್ರಗಳನ್ನ ನಡೆಸಿದ್ದು, ಆರಂಭದಲ್ಲೇ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರು ಹಿನ್ನಡೆಯನುಭವಿಸಿದ್ದು, ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ಸಿಪಿ ಯೋಗೇಶ್ವರ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

karnataka election Results 2023

ಇನ್ನೂ ರಾಜ್ಯದ ಹೈ-ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸ್ಪರ್ಧಿಸಿರುವುದು ರಾಜ್ಯದ ಗಮನ ಸೆಳೆದಿದೆ. ಇತ್ತ ಬಿಜೆಪಿಪೊ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆ ಬಿಜೆಪಿಗೆ ಗುಡ್‌ ಬೈ ಹೇಳಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದ್ದಿದ್ದ ಜಗದೀಶ್‌ ಶೆಟ್ಟರ್‌ ಗೆ ಹಿನ್ನಡೆ ಉಂಟಾಗಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಮಹೇಶೆ ಟೆಂಗಿನಕಾಯಿ ಮುನ್ನಡೆ ಪಡೆದಿದ್ದಾರೆ.

ಇನ್ನೂ ಜೆಡಿಎಸ್‌ ಪಕ್ಷದಲ್ಲಿ ಏಕೈಕ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಹೆಚ್‌ ಡಿ ಕುಮಾರಸ್ವಾಮಿ ಅವರು ಈ ಬಾರೀ ಚನ್ನಪಟ್ಟಣದಲ್ಲಿ ಸುಲಭವಾಗಿ ಗೆಲ್ಲುತ್ತೇವೆ ಎಂಬ ಭರವಸೆಯನ್ನ ಇಟ್ಟುಕೊಂಡಿದ್ದ ಕುಮಾರಸ್ವಾಮಿ ಅವರಿಗೆ ಆರಂಭದಲ್ಲಿ ಹಿನ್ನಡೆಯನ್ನ ಸಾಧಿಸಿದ್ದು, ಈ ಬಾರೀ ಚನ್ನಪಟ್ಟಣದಲ್ಲಿ ಕಮಲ ಅರಳಿಸಲು ಪಣ ತೊಟ್ಟಿದ್ದ ಸಿ ಪಿ ಯೋಗೇಶ್ವರ್‌ ಮುನ್ನಡೆಯನ್ನ ಸಾಧಿಸಿದ್ದಾರೆ.

ಇತ್ತ ಜಗದೀಶ್‌ ಶೆಟ್ಟರ್‌ ಅವರನ್ನ ಸೋಲಿಸಲು ಬಿಜೆಪಿ ಘಟಾನುಘಟಿ ನಾಯಕರು ಅಬ್ಬರ ಪ್ರಚಾರ ಹಾಗೂ ತಂತ್ರಗಳನ್ನ ನಡೆಸಿದ್ದು, ಈ ತಂತ್ರಗಳು ವರ್ಕೌಟ್‌ ಆದಂತೆ ಕಾಣುತ್ತಿದೆ. ಸುಲಭವಾಗಿ ಗೆಲ್ಲುವ ವಿಶ್ವಾಸದಲ್ಲಿದ್ದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಗೆ ಸೋಲಿನ ಭೀತಿ ಶುರುವಾಗಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+