ದಕ್ಷಿಣ ಭಾರತದಿಂದ ಬಿಜೆಪಿ ಔಟ್‌: ರಾಷ್ಟ್ರ ರಾಜಕಾರಣದ ದಿಕ್ಕು ಬದಲಿಸಲಿದೆಯೇ ಕರ್ನಾಟಕದ ಫಲಿತಾಂಶ?

ಬೆಂಗಳೂರು, ಮೇ 13: ಕರ್ನಾಟಕ ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ. ಹೆಚ್ಚುಕಮ್ಮಿ ಕಾಂಗ್ರೆಸ್‌ ಭಾರೀ ಬಹುಮತದತ್ತ ಹೆಜ್ಜೆ ಇಟ್ಟಿದೆ. ಚುನಾವಣೆಯ ಆರಂಭಿಕ ಟ್ರೆಂಡ್‌ಗಳ ಪ್ರಕಾರ ಕಾಂಗ್ರೆಸ್ ಅರ್ಧದಾರಿಯ ಗಡಿಯನ್ನು ದಾಟಿದೆ. 115 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಈ ಚುನಾವಣೆಯು ಕಾಂಗ್ರೆಸ್, ಭಾರತೀಯ ಜನತಾ ಪಕ್ಷ ಮತ್ತು ಜನತಾದಳ ನಡುವೆ ತೀವ್ರ ಪೈಪೋಟಿಗೆ ಸಾಕ್ಷಿಯಾಗಿತ್ತು. ಆದರೆ, ಕಾಂಗ್ರೆಸ್‌ಗೆ ಭಾರೀ ಬಹುಮತ ಬರುವ ಸಾಧ್ಯತೆ ನಿಶ್ಚಳವಾಗಿವೆ.

narendra modi

ಆಡಳಿತಾರೂಢ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ರಾಜ್ಯ ನಾಯಕರು ಪ್ರಧಾನಿ ಮೋದಿ ಅವರನ್ನು ಕರ್ನಾಟಕಕ್ಕೆ ಕರೆಸಿ ಹಲವು ಬಾರಿ ಪ್ರಚಾರ ಮಾಡಿಸಿದ್ದರು. ರೋಡ್‌ ಶೋ, ರ್ಯಾಲಿಗಳು ಸೇರಿದಂತೆ ಬಿಜೆಪಿಯ ರಾಷ್ಟ್ರ ನಾಯಕರು ಕರ್ನಾಟಕದಲ್ಲಿ ವಾಸ್ತವ್ಯ ಹೂಡಿ ಪ್ರಚಾರ ಮಾಡಿದ್ದರು. ಆದರೂ, ಬಿಜೆಪಿ ಗೆಲುವು ಸಾಧಿಸದಿರುವುದು ಭಾರೀ ಮುಖಭಂಗ ಅನುಭವಿಸಿದೆ.

ದಕ್ಷಿಣ ಭಾರತದಿಂದ ಕಾಲ್ಕಿತ್ತ ಬಿಜೆಪಿ

ಮೋದಿ ನೇತೃತ್ವದ ಬಿಜೆಪಿಯು ದಕ್ಷಿಣ ಭಾರತದಿಂದ ಕಾಲ್ಕಿತ್ತಿದೆ. ದಕ್ಷಿಣ ಭಾರತದ ರಾಜ್ಯಗಳಾದ ತೆಲಂಗಾಣ, ಆಂದ್ರ ಪ್ರದೇಶ, ಕೇರಳ ಹಾಗೂ ತಮಿಳುನಾಡುಗಳಲ್ಲಿ ಬಿಜೆಪಿಗೆ ಅಸ್ತಿತ್ವವಿಲ್ಲ. ಇನ್ನು ಕರ್ನಾಟಕದಲ್ಲಿ ಮಾತ್ರ ಬಿಜೆಪಿ ನೆಲೆಕಂಡುಕೊಂಡಿದೆ. ಇದಕ್ಕೆ ಕಾರಣವಾಗಿದ್ದು ಇಲ್ಲಿನ ಸ್ಥಳೀಯ ನಾಯಕತ್ವವೇ ಹೊರತು ರಾಷ್ಟ್ರೀಯ ನಾಯಕತ್ವವಲ್ಲ ಎಂಬು ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.

narendra modi

ಈಗ ಕರ್ನಾಟಕವನ್ನು ಕಳೆದುಕೊಂಡಿರುವ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ನೆಲೆ ಇಲ್ಲದಂತಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೇರಿಯಲ್ಲಿ ಮಾತ್ರ ಬಿಜೆಪಿ ಅಸ್ತಿತ್ವದಲ್ಲಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಉತ್ತರ ಪ್ರದೇಶ, ಗುಜರಾತ್‌ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹಿಂದಿ ಭಾಷಿಗರ ಪ್ರಭಾವವಿರುವ ರಾಜ್ಯಗಳಲ್ಲಿ ಬಿಜೆಪಿ ನೆಲೆ ಕಂಡುಕೊಂಡಿದೆ. ಕರ್ನಾಟಕ ಚುನಾವಣೆ ಫಲಿತಾಂಶ ರಾಷ್ಟ್ರ ರಾಜಕಾರಣದ ಮಹತ್ವದ ಪರಿಣಾಮ ಬೀರಲಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದನ್ನು ಕಾದು ನೋಡಬೇಕಿದೆ.

ಮುಗಿಯಿತೇ ಮೋದಿ ಪ್ರಭಾವ?

ಕರ್ನಾಟಕದಲ್ಲಿ ಮೋದಿ ಮೇನಿಯಾವನ್ನು ಬಳಸಿಕೊಳ್ಳಲು ಬಿಜೆಪಿ ಯೋಜಿಸಿತ್ತು. ಹಲವು ರ್ಯಾಲಿ ಹಾಗೂ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮೋದಿ ಮಾತನಾಡಿದ್ದರು. ಆದರೆ, ರಾಜ್ಯ ಸರ್ಕಾರದ ಭ್ರಷ್ಟಾಚಾರ, ಅಲ್ಪಸಂಖ್ಯಾತ ವಿರೋಧಿ ನಿಲುವ, ಬೆಲೆ ಏರಿಕೆಯಂತಹ ಹಲವಾರು ಸಮಸ್ಯೆಗಳನ್ನು ರಾಜ್ಯದ ಜನರು ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮೋದಿ ಮೇನಿಯಾ ಕೆಲಸ ಮಾಡಿಲ್ಲವೆಂಬುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+