ಫಲಿತಾಂಶ ನೋಡಿದ ಉಪೇಂದ್ರ ಶುಭಕೋರಿದ್ದು ಯಾರಿಗೆ ಗೊತ್ತಾ.?
ಕರ್ನಾಟಕ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಗುರುತಿಸಿಕೊಳ್ಳುತ್ತಿದೆ. ಬಹುಶಃ ಭಾರತೀಯ ಜನತಾ ಪಾರ್ಟಿ ಸರಳ ಬಹುಮತ ಪಡೆದು ಸರ್ಕಾರ ರಚನೆ ಮಾಡಬಹುದು ಎಂಬ ಲಕ್ಕಾಚಾರ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಮತ್ತೊಂದೆಡೆ ಅತಂತ್ರವಾಗಬಹುದು ಎಂಬ ಆಸೆ ಜೀವಂತವಾಗಿದೆ.
ಈ ನಡುವೆ ಕೆಪಿಜೆಪಿ ಪಕ್ಷದಿಂದ ಹೊರಬಂದು ಕರ್ನಾಟಕ ವಿಧಾನಸಭೆ ಚುನಾವಣೆಯಿಂದ ಹಿಂದೆ ಸರಿದಿದ್ದ ನಟ ಉಪೇಂದ್ರ ಟ್ವೀಟ್ ಮೂಲಕ ಬಿಜೆಪಿಗೆ ಶುಭಕೋರಿದ್ದಾರೆ.

ಫಲಿತಾಂಶದ ಬಗ್ಗೆ ಹೆಚ್ಚೇನೂ ಮಾತನಾಡದ ಮತ್ತು ವಿಶ್ಲೇಷಣೆ ಮಾಡದ ಉಪೇಂದ್ರ ಬರಿ ಶುಭಾಶಯ ತಿಳಿಸಿರುವುದು ವಿಶೇಷವಾಗಿದೆ.
CONGRATULATIONS !!! 💐💐💐 BJP 🌸🌸🌸
— Upendra (@nimmaupendra) May 15, 2018
ಮೊದಲಿನಿಂದಲೂ ಪ್ರದಾನಿ ನರೇಂದ್ರ ಮೋದಿ ಅವರ ಆದರ್ಶಗಳಿಗೆ ಮತ್ತು ಬಿಜೆಪಿಗೆ ಪರೋಕ್ಷ ಬೆಂಬಲ ನೀಡಿರುವ ಉಪೇಂದ್ರ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿರುವ ವಿಜಯಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಎಲ್ಲ ಅಂದುಕೊಂಡತೆ ಆಗಿದ್ದರೇ, ನಟ ಉಪೇಂದ್ರ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕೆಪಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕಿತ್ತು. ಆದ್ರೆ, ಪಕ್ಷದ ಆಂತರಿಕ ಸಮಸ್ಯೆಯಿಂದ ಪಕ್ಷದಿಂದ ಹೊರಬಂದರು. ಇದೀಗ, ಉತ್ತಮ ಪ್ರಜಾ ಪಾರ್ಟಿ ಎಂಬ ಹೆಸರಿನಲ್ಲಿ ಪಕ್ಷ ನೋಂದಾಣೆ ಮಾಡಿದ್ದು, ಮುಂದಿನ ಚುವಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ.












Click it and Unblock the Notifications