ಪ್ರಧಾನಿಗೇ ವಿಷ ಸರ್ಪ ಎಂದ ಖರ್ಗೆ ಮನಸಲ್ಲಿ ಅದೆಷ್ಟು ವಿಷವಿರಬೇಕು: ಪ್ರಹ್ಲಾದ್ ಜೋಶಿ ಕಿಡಿ
ಬೆಂಗಳೂರು, ಏಪ್ರಿಲ್ 27: ಚುನಾವಣೆ ಹಿನ್ನಲೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಕುರಿತ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬಿಜೆಪಿ ನಾಯಕರಿಂದ ವ್ಯಾಪಕ ಟೀಕೆ ಎದುರಿಸುತ್ತಿದ್ದಾರೆ. ಪ್ರತಿ ಪಕ್ಷದ ವಿರುದ್ಧ ಒಂದೇ ಒಂದು ಅವಕಾಶವನ್ನು ಬಿಡದಂತೆ ಕಾಯುತ್ತಿರುವ ಬಿಜೆಪಿಗರು ಸಾಲು ಸಾಲಾಗಿ ಖರ್ಗೆಗೆ ತಿರುಗೇಟು ನೀಡುತ್ತಿದ್ದಾರೆ.
ಜನರಿಂದ ಪ್ರಜಾಪ್ರಭುತ್ವದ ಅಡಿ ಆಯ್ಕೆಯಾಗಿ, ರಾಷ್ಟ್ರವೇ ತನ್ನ ಕುಟುಂಬ ಎಂದು ಅವಿರತವಾಗಿ ಜನ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತ ಇಂದು ವಿಶ್ವ ನಾಯಕರಾಗಿರುವ ಪ್ರಧಾನಿ ಶ್ರೀ @narendramodi ಅವರು ದೇಶದ 140 ಕೋಟಿ ಭಾರತೀಯರ ಪ್ರಧಾನ ಸೇವಕರು. https://t.co/rkQ3CE3wCR
— Pralhad Joshi (@JoshiPralhad) April 27, 2023
ಪ್ರಧಾನಿ ನರೇಂದ್ರ ಮೋದಿ 'ವಿಷ ಸರ್ಪ' ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಗುರುವಾರ ಖಂಡಿಸಿದ್ದಾರೆ. ಈ ಕುರಿತು ಮಲ್ಲಿಕಾರ್ಜುನ್ ಖರ್ಗೆಯವರು ಹೇಳಿಕೆಯ ವಿಡಿಯೋವನ್ನು ಟ್ವೀಟ್ ಪೋಸ್ಟ್ ಮಾಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯವರು ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ದೇಶದ ಜನರಿಂದ ಆಯ್ಕೆ ಆಗಿರುವ ಪ್ರಧಾನಿ ನರೇಂದ್ರ ಮೋದಿಯವರನ್ನೇ ವಿಷ ಸರ್ಪ ಎನ್ನುವ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಮನಸ್ಸಿನಲ್ಲಿ ಅದೆಷ್ಟೊಂದು ವಿಷ ತುಂಬಿಕೊಂಡಿದ್ದಾರೆ ಎಂದು ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದರು.
ಇಂಥಹ ಮಾತಿನ ಮೂಲಕ ಖರ್ಗೆ ವಿಷ ಉಗಳಿದ್ದಾರೆ
ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಸೋಲುವ ಭಯ ಎದುರಾಗಿದೆ. ಆದ್ದರಿಂದಲೇ ಖರ್ಗೆ ಅವರು ಹೀಗೆ ಹೇಳಿಕೆ ನೀಡಿದ್ದಾರೆ. ಭಾರತದ ಜನರಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ದೇಶದ ಪ್ರಧಾನಿಯನ್ನು ವಿಷ ಸರ್ಪ ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ವಿಷ ಉಗುಳಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಕಿಂಚಿತ್ತೂ ಗೌರವವಿಲ್ಲ. ವಿದೇಶಿ ಪ್ರಜೆಯ ಸೇವೆ ಮಾಡುವ ಹಾಗೂ ಭಾರತದ ಪ್ರಧಾನಮಂತ್ರಿಯನ್ನು ನಿಂದಿಸುವ ನಾಯಕರೇ ಕಾಂಗ್ರೆಸ್ ಪಕ್ಷದ ತುಂಬಾ ತುಂಬಿದ್ದಾರೆ ಎಂದರು.

ಜನರಿಂದ ಪ್ರಜಾಪ್ರಭುತ್ವದ ಅಡಿಯಲ್ಲಿ ಆಯ್ಕೆಯಾಗಿ, ರಾಷ್ಟ್ರವೇ ತನ್ನ ಕುಟುಂಬ ಎಂದು ಅವಿರತವಾಗಿ ಜನ ಕಲ್ಯಾಣಕ್ಕಾಗಿ ಕಾರ್ಯ ನಿರ್ವಹಿಸುತ್ತ ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಶ್ವ ನಾಯಕರಾಗಿದ್ದಾರೆ. ಅವರು, ದೇಶದ 140 ಕೋಟಿ ಭಾರತೀಯರ ಪ್ರಧಾನ ಸೇವಕರು ನಮ್ಮ ನರೇಂದ್ರ ಮೋದಿ ಎಂಬುದನ್ನ ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಜೋಶಿ ಕೈ ನಾಯಕರಿಗೆ ತಿಳಿ ಹೇಳಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಕಿಡಿ
ಇದಕ್ಕು ಮೊದಲು ಸಂಸದ ತೇಜಸ್ವಿ ಸೂರ್ಯ ಅವರು ಟ್ವೀಟ್ ಮೂಲಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಯಾರ ವಿರುದ್ಧವೂ ವೈಯಕ್ತಿಕ ಟೀಕೆಗಳನ್ನು ಜನರು ಸ್ವೀಕರಿಸುವುದಿಲ್ಲ. ನಿಮಗೆ ಸೋಲಿನ ಭಯ ಕಾಡುತ್ತಿದೆ. ಅದಕ್ಕೆ ಹೀಗೆ ಹೇಳಿದ್ದೀರಿ. ಪ್ರಸ್ತುತ ಚುನಾವಣೆ ಮಹತ್ವದ ಸುಳಿವು ನೀಡಲಿದೆ ಎಂದರು.
ಮೇ 10ರಂದು ಕಾಂಗ್ರೆಸ್‌ನ ಶವ ಪಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವುದನ್ನು ನೀವೆಲ್ಲ ನೋಡುವಿರಿ, ಸ್ವಲ ದಿನವಷ್ಟೇ ಕಾಯಿರಿ ಎಂದು ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications