Basanagouda Patil Yatnal: 'ಮೋದಿ ನಾಗರಹಾವು ಆದರೆ ಸೋನಿಯಾ ಗಾಂಧಿ ವಿಷಕನ್ಯೆನಾ?' ಯತ್ನಾಳ್
ಕೊಪ್ಪಳ ಏಪ್ರಿಲ್ 28: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದು ಕೊಪ್ಪಳದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕರೆದಿದ್ದಾರೆ. ಮಾತ್ರವಲ್ಲದೆ ಸೋನಿಯಾ ಗಾಂಧಿ ಅವರನ್ನು ಚೀನಾ ಪಾಕಿಸ್ತಾನದ ಎಂಜೆಟ್ ಎಂದು ಕರೆದಿದ್ದಾರೆ.
ಗುರುವಾರ ಮಲ್ಲಿಕಾರ್ಜುನ ಖರ್ಗೆ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುವಾಗ, 'ಪ್ರಧಾನಿ ನರೇಂದ್ರ ಮೋದಿ ನಾಗರಹಾವು ಇದ್ದಂತೆ, ಅವರನ್ನು ಮುಟ್ಟಲು ಹೋಗಬೇಡಿ' ಎಂದು ಹೇಳಿದ್ದರು. ಈ ಹೇಳಿಕೆ ಬಳಿಕ ವಿಷಾದ ಕೂಡ ವ್ಯಕ್ತಪಡಿಸಿದ್ದರು. ಇದೇ ಮಾತಿಗೆ ಯತ್ನಾಳ್ ಇಂದು ಟಾಂಗ್ ಕೊಟ್ಟಿದ್ದಾರೆ.

ಕೊಪ್ಪಳದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಯತ್ನಾಳ್, 'ಮೋದಿ ನಾಗರಹಾವು ಆದರೆ ಸೋನಿಯಾ ಗಾಂಧಿ ವಿಷಕನ್ಯೆನಾ?' ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ 'ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಹುಚ್ಚ' ಎಂದು ಕರೆದಿದ್ದಾರೆ.
ಖರ್ಗೆ ಅವರನ್ನು ಟೀಕಿಸುವ ಭರದಲ್ಲಿ ಯತ್ನಾಳ್ ಸೋನಿಯಾರನ್ನು ವಿಷಕನ್ಯೆ ಎಂದಿದ್ದು ಸರಿಯೇ?#soniagandhi #basanagowdapatilyatnal #modi #vishakanye #KarnatakaElections2023 pic.twitter.com/bAcuBYQMYC
— oneindiakannada (@OneindiaKannada) April 28, 2023
ಜೊತೆಗೆ ಯತ್ನಾಳ್ ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. 'ಲಿಂಗಾಯತರನ್ನು ಭ್ರಷ್ಟರು ಅಂತಾರೆ ಸಿದ್ದರಾಮಯ್ಯ, ವೈಯಕ್ತಕವಾಗಿ ನಮ್ಮನ್ನು ಅವರು ಬಯ್ಯಲಿ, ಇಡೀ ಸಮುದಾಯದ ಬಗ್ಗೆ ಮಾತನಾಡುತ್ತಾರೆ, ನಿಮಗೆ ಧಮ್ ಇದ್ದರೆ ಲಿಂಗಾಯತ ಮುಖ್ಯಮಂತ್ರಿಯನ್ನು ಘೋಷಣೆ ಮಾಡಿ' ಎಂದು ಯತ್ನಾಳ್ ಸವಾಲ್ ಹಾಕಿದ್ದಾರೆ.

ಹೀಗೆ ಕಾಂಗ್ರೆಸ್ ನಾಯಕರ ಬಗ್ಗೆ ಯತ್ನಾಳ ಮತ್ತೆ ನಾಲಿಗೆ ಹರಿ ಬಿಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಮುಖಂಡ ವಿಎಸ್ ಉಗ್ರಪ್ಪ, ' ಯತ್ನಾಳ್ ಅವರು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ. ಹೆಣ್ಣನ್ನು ತಾಯಿ ಎಂದು ಗೌರವಿಸಬೇಕಾಗಿರುವುದು ಭಾರತದ ಸಂಸ್ಕೃತಿ. ಹೀಗಿರುವಾಗ ಒಬ್ಬ ತಾಯಿಗೆ ವಿಷಕನ್ಯೆ ಎಂದು ಕರೆಯಲು ನಾಚಿಕೆ ಆಗಬೇಕು. ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟವರು ಕಾಂಗ್ರೆಸ್ ನವರು, ದೇಶದ ಅಭಿವೃದ್ಧಿಗೆ ದುಡಿಯುತ್ತಿರುವವರು ಕಾಂಗ್ರೆಸ್‌ನವರು, ಯತ್ನಾಳ್ ಮಾತಿಗೆ ಹಿಡಿತನೇ ಇಲ್ಲ. ಒಬ್ಬ ಮನುಷ್ಯನ ಯೋಗ್ಯತೆ ಏನು ಎಂದು ಅವರ ಮಾತು ತೋರಿಸುತ್ತದೆ. ಇಂತವರನ್ನು ಒದ್ದು ಜೈಲಿಗೆ ಹಾಕಬೇಕು' ಎಂದು ಉಗ್ರಪ್ಪ ಕಿಡಿ ಕಾರಿದ್ದಾರೆ.
ಖರ್ಗೆ ಹೇಳಿಕೆಗೆ ಆರ್ ಅಶೋಕ್ ಪ್ರತಿಕ್ರಿಯೆ ನೀಡಿ ,'ಖರ್ಗೆ ಭ್ರಮೆಗೆ ಒಳಗಾಗಿದ್ದಾರೆ. ಹಾವಿನ ವಿಷವನ್ನು ನೆಕ್ಕಿದ್ದೇನೆ ಅಂತಾರೆ. ಯಾರಾದರೂ ಹಾವನ್ನು ನೆಕ್ಕಲು ಹೋಗ್ತಾರಾ? ಇಷ್ಟು ಸಾಮಾನ್ಯ ಜ್ಞಾನ ಇಲ್ವಾ?' ಎಂದು ಹೇಳಿದರು.












Click it and Unblock the Notifications