Get Updates
Get notified of breaking news, exclusive insights, and must-see stories!

CV Chandrasekhara: ಕೊಪ್ಪಳ ಜೆಡಿಎಸ್ ಗೆಲುವಿಗೆ ದೀಡ್ ನಮಸ್ಕಾರ ಹಾಕಿದ ಮಂಗಳಮುಖಿಯರು

ಕೊಪ್ಪಳ ಏಪ್ರಿಲ್ 28: ಕೊಪ್ಪಳದಲ್ಲಿರುವ ಮಂಗಳಮುಖಿಯರು ಜೆಡಿಎಸ್ ಅಭ್ಯರ್ಥಿ ಸಿವಿ ಚಂದ್ರಶೇಖರ ಗೆಲುವಿಗಾಗಿ ದೀಡ್ ನಮಸ್ಕಾರ ಹಾಕಿದ್ದಾರೆ. ಸುಮಾರು ಹತ್ತಕ್ಕೂ ಹೆಚ್ಚು ಮಂಗಳಮುಖಿಯರು ಅಂಬೇಡ್ಕರ್ ಭವನದಿಂದ ಗವಿಮಠದವರೆಗೂ ಇಂದು ದೀಡ್ ನಮಸ್ಕಾರ್ ಹಾಕಿದರು.

ಕೊಪ್ಪಳದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಘವೇಂದ್ರ ಹಿಟ್ನಾಳ್ ಹಾಗೂ ಬಿಜೆಪಿ ಅಭ್ಯರ್ಥಿ ಮಂಜುಳ ಅಮರೇಶ್ ವಿರುದ್ಧ ಜೆಡಿಎಸ್ ಅಭ್ಯರ್ಥಿ ಸಿವಿ ಚಂದ್ರಶೇಖ ಸ್ಪರ್ಧೆಗಿಳಿಯಲಿದ್ದಾರೆ.

Karnataka election: Mangalmukhis deed saluted the victory of Koppal JDS

2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ್ ಗೆಲುವು ಸಾಧಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಅಮರೇಶ್ ಸಂಗಣ್ಣ ಕರಡಿ 26351 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಕಳೆದ ವರ್ಷ ಜೆಡಿಎಸ್ ಸೈಯದ್ ಅವರನ್ನು ಕಣಕ್ಕೆ ಇಳಿಸಿತ್ತು. ಆದರೆ ಸೈಯದ್ ಜಯ ಸಾಧಿಸಿರಲಿಲ್ಲ. ಕಡಿಮೆ ಮತಗಳಿಂದ ಮೂರನೇ ಸ್ತಾನವನ್ನು ಸೈಯದ್ ಪಡೆದಿದ್ದರು. ಹೀಗಾಗಿ ಸದ್ಯ ಸಿವಿ ಚಂದ್ರಶೇಖರ ಅವರಿಗೆ ಜೆಡಿಎಸ್ ಈ ಬಾರಿ ಟಿಕೆಟ್ ನೀಡಿದೆ.

ಇದರ ನಡುವೆ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿಗೆ ಮಂಗಳಮುಖಿಯರು ದೀಡ್ ನಮಸ್ಕಾರ ಹಾಕಿರುವುದು ಭಾರೀ ಸುದ್ದಿಯಾಗಿದೆ. ಇದರಿಂದ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ಹೇಳಲಾಗುತ್ತಿದೆ.

ಮಂಗಳಮುಖಿಯರ ಆಶೀರ್ವಾದಕ್ಕೆ ಎಷ್ಟು ಮಹತ್ವವಿದೆ?

ನಮ್ಮ ಸಮಾಜದಲ್ಲಿ ಈಗ್ಲೂ ಮಂಗಳಮುಖಿಯರಿಗೆ ಸರಿಯಾದ ಗೌರವ ಸಿಗ್ತಿಲ್ಲ. ಆದರೆ ಮುಂಗಳಮುಖಿ ಮನೆಗೆ ಬಂದ್ರೆ ಬರಿಗೈರಲ್ಲಿ ಕಳುಹಿಸುವುದಿಲ್ಲ. ಮಂಗಳಮುಖಿ ಆಶೀರ್ವಾದ ಮಾಡಿದ್ರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ಪ್ರತಿಯೊಂದು ಶುಭಕಾರ್ಯಗಳಲ್ಲಿ ಹಾಗೂ ಮಂಗಳಕಾರ್ಯಗಳಲ್ಲಿ ಅವರ ಅಸ್ತಿತ್ವ ಖಂಡಿತವಾಗಿ ಇದ್ದೇ ಇರುತ್ತೆ ಎಂದರೆ ತಪ್ಪಾಗಲ್ಲ.

ಗರುಡ ಪುರಾಣ ಗ್ರಂಥಗಳಿಂದ ಹಿಡಿದು ಇಂದಿನವರೆಗೂ ಕೂಡ ಪ್ರತಿಯೊಂದು ವಿಚಾರಗಳಲ್ಲಿ ಕಿನ್ನರರು ಅಥವಾ ಮಂಗಳಮುಖಿಯರ ಬಗ್ಗೆ ಉಲ್ಲೇಖವಿದೆ. ಹೀಗಾಗಿ ಅರ್ಧನಾರೀಶ್ವರನ ಸ್ವರೂಪವಾಗಿರುವ ಮಂಗಳಮುಖಿಯರು ಎಲ್ಲಾದರೂ ಶುಭ ಕೆಲಸಕ್ಕೆ ಹೋದಾಗ ಅವರು ಆಶೀರ್ವಾದ ಮಾಡಿದರೆ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಇದೆ. ಹೀಗಿರುವಾಗ ಮಂಗಳಮುಖಿಯರೇ ಖುದ್ದು ದೀಡ್ ನಮಸ್ಕಾರ ಹಾಕಿ ಕೊಪ್ಪಳದಲ್ಲಿರುವ ಮಂಗಳಮುಖಿಯರು ಜೆಡಿಎಸ್ ಅಭ್ಯರ್ಥಿ ಸಿವಿ ಚಂದ್ರಶೇಖರ ಗೆಲುವಿಗಾಗಿ ಆಶೀರ್ವದಿಸುತ್ತಿದ್ದಾರೆ ಎಂದರೆ ಅದು ಸಾಮಾನ್ಯವಾದ ಮಾತಲ್ಲ. ಹೀಗಾಗಿ ಕೊಪ್ಪಳದಲ್ಲಿ ಸಿವಿ ಚಂದ್ರಶೇಖರ್ ಅವರ ಗೆಲುವು ಖಚಿತ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಕೊಪ್ಪಳದ ಚುನಾವಣಾ ಕಣ ರಂಗೇರುತ್ತಿದ್ದು ಈ ಬಾರಿ ಕಾಂಗ್ರೆಸ್ ಕೋಟೆ ಒಡೆದು ತೆನೆ ಹೊತ್ತ ಮಹಿಳೆ ಗಟ್ಟಿಯಾಗಿ ನಿಲ್ಲುತ್ತಾಳಾ ಕಾದು ನೋಡಬೇಕಿದೆ.

ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಈಗಾಗಲೇ ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಮುಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆದಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವೂ ಮುಗಿದಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+