ABP C-Voter Survey: ಬಿಜೆಪಿ ಭದ್ರಕೋಟೆ ಛಿದ್ರ: 'ಕೈ' ಹಿಡಿತಾನೆ ಮತದಾರ ಎಬಿಪಿ ಸಿ-ವೋಟರ್ ಸರ್ವೆಯಲ್ಲೂ ಕಾಂಗ್ರೆಸ್‌ಗೆ ಮುನ್ನಡೆ
ರಾಜ್ಯ ಚುನಾವಣಾ ಕಣ ರಂಗೇರಿದೆ, ರಾಷ್ಟ್ರದ ನಾಯಕರು ರಾಜ್ಯಕ್ಕೆ ಲಗ್ಗೆಯಿಟ್ಟು ಪಕ್ಷಗಳ ಪರವಾಗಿ ಭರ್ಜರಿ ಪ್ರಚಾರ ಮಾಡ್ತಿದ್ದಾರೆ. ಈಗಾಗಲೇ ಮತದಾರನ ಮನಸ್ಸಿನಲ್ಲಿ ಏನಿದೆ ಎಂದು ಹಲವು ಸರ್ವೆಗಳಿಂದ ಸೂಚನೆ ಸಿಕ್ಕಿದೆ. ಇದೀಗ ಎಬಿಪಿ ಸಿ-ವೋಟರ್ ಸಮೀಕ್ಷೆ ನಡೆಸಿದ್ದು, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದೆ.
ಎಬಿಪಿ ನ್ಯೂಸ್ ಮತ್ತು ಸಿ ವೋಟರ್ ಕರ್ನಾಟಕದ ಮತದಾರರ ಅಭಿಪ್ರಾಯವನ್ನು ಸಂಗ್ರಹಿಸಿದೆ. 17,772 ಜನರಿಂದ ಪ್ರತಿಕ್ರಯೆಗಳನ್ನು ಸ್ವೀಕರಿಸಲಾಗಿದೆ. ಸಮೀಕ್ಷೆ ಪ್ರಕಾರ 224 ವಿಧಾನಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ 107 ಇಂದ 119 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಅಂದಾಜಿಸಿದೆ. ಆಡಳಿತಾರೂಢ ಬಿಜೆಪಿ 74 ರಿಂದ 86 ಸ್ಥಾನಗಳಿಗೆ ಕುಸಿಯಬಹುದು ಎಂದು ಸಮೀಕ್ಷೆಯಲ್ಲಿ ತಿಳಿಸಿದೆ. ಇನ್ನು ಜೆಡಿಎಸ್ 23 ರಿಂದ 35 ಸ್ಥಾನಗಳಿಗೆ ಸೀಮಿತವಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ. ಪಕ್ಷೇತರ ಅಥವಾ ಇತರೆ ಪಕ್ಷಗಳ 0-5 ಸ್ಥಾನಗಳನ್ನು ಪಡೆಯುತ್ತಾರೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.

ಒಟ್ಟಾರೆ ರಾಜ್ಯದಲ್ಲಿ ಮತಹಂಚಿಕೆ ವಿಚಾರಕ್ಕೆ ಬಂದರೆ ಕಾಂಗ್ರೆಸ್ ಬಿಜೆಪಿಗಿಂತ ಶೇಕಡಾ 5ರಷ್ಟು ಮುಂದಿದೆ. ಕಾಂಗ್ರೆಸ್ ಶೇಕಡಾ 40 ರಷ್ಟು ಮತಗಳನ್ನು ಪಡೆದರೆ, ಬಿಜೆಪಿ ಶೇಕಡಾ 35ರಷ್ಟು ಮತ ಪಡೆಯಲಿದೆ, ಜೆಡಿಎಸ್ ಶೇಕಡಾ 17ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ. ಉಳಿದ 8 ಪ್ರತಿಶತ ಮತಗಳು ಪಕ್ಷೇತರ ಮತ್ತು ಇತರೆ ಪಕ್ಷಗಳ ಪಾಲಾಗಬಹುದು.
ಸರ್ಕಾರದ ಆಡಳಿತ ವಿರುದ್ಧ ಮತದಾರನ ಅಸಮಾಧಾನ
ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ರಾಜ್ಯದ ಮತದಾರ ಕೆಟ್ಟದಾಗಿದೆ ಎಂದು ಹೇಳುವ ಮೂಲಕ, ಆಡಳಿತ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಸಿಎಂ ಬೊಮ್ಮಾಯಿ ಆಡಳಿತ ಬಗ್ಗೆ ಕೂಡ ಮತದಾರ ಸಂತೋಷವಾಗಿಲ್ಲ, ಶೇಕಡಾ 51 ರಷ್ಟು ಮಂದಿ ಕೆಟ್ಟದಾಗಿದೆ ಎಂದು ಹೇಳಿದ್ದಾರೆ. ಆದರೆ, ರಾಜ್ಯದ ಜನತೆ ಪ್ರಧಾನಿ ನರೇಂದ್ರ ಮೋದಿ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರದ ಕಾರ್ಯವೈಖರಿ ಬಗ್ಗೆ ಮತದಾರನ ಅಭಿಪ್ರಾಯ
ಉತ್ತಮವಾಗಿದೆ - 29 %
ಪರವಾಗಿಲ್ಲ - 19 %
ಕೆಟ್ಟದಾಗಿದೆ - 52 %
ಮುಖ್ಯಮಂತ್ರಿ ಕೆಲಸ ಹೇಗಿದೆ?
ಪರವಾಗಿಲ್ಲ - 25 %
ಉತ್ತಮವಾಗಿದೆ - 24 %
ಕೆಟ್ಟದಾಗಿದೆ - 51 %
ಪ್ರಧಾನಿ ಮೋದಿ ಕೆಲಸದ ಬಗ್ಗೆ ಜನಾಭಿಪ್ರಾಯ
ಉತ್ತಮವಾಗಿದೆ - 49 %
ಪರವಾಗಿಲ್ಲ - 18 %
ಕೆಟ್ಟದಾಗಿದೆ - 33 %
ಕರ್ನಾಟಕ ರಾಜ್ಯಕ್ಕೆ ಮುಂದಿನ ಸಿಎಂ ಯಾರಾಗಬೇಕು ಎನ್ನುವ ಪ್ರಶ್ನಗೆ ಮತದಾರ ಉತ್ತರ ನೀಡಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಪರ ಹೆಚ್ಚಿನ ಜನ ಒಲವು ತೋರಿದ್ದಾರೆ. ಡಿಕೆ ಶಿವಕುಮಾರ್ ಈ ಸಮೀಕ್ಷೆಯಲ್ಲಿ ಸಂಪೂರ್ಣವಾಗಿ ಹಿಂದೆ ಉಳಿದಿದ್ದಾರೆ.
ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು?
ಬಸವರಾಜ ಬೊಮ್ಮಾಯಿ- 31%
ಸಿದ್ದರಾಮಯ್ಯ - 41 %
ಎಚ್.ಡಿ.ಕುಮಾರಸ್ವಾಮಿ- 22%
ಡಿ.ಕೆ.ಶಿವಕುಮಾರ್ - 03%
ಇತರೆ - 03%
ಕರ್ನಾಟಕದ ದೊಡ್ಡ ಸಮಸ್ಯೆ ಏನು?
ನಿರುದ್ಯೋಗ - 30 %
ಮೂಲ ಸೌಕರ್ಯಗಳು - 24 %
ಶಿಕ್ಷಣ - 14 %
ಭ್ರಷ್ಟಾಚಾರ - 13 %
ಕಾನೂನು ಮತ್ತು ಸುವ್ಯವಸ್ಥೆ - 03 %
ಇತರೆ - 16%
ಎಬಿಪಿ ನ್ಯೂಸ್ ಮಾರ್ಚ್ 29ರಂದು ಕೂಡ ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆ ಸಮೀಕ್ಷೆಯ ವರದಿಯನ್ನು ಪ್ರಕಟಿಸಿತ್ತು. ಆಗಿನ ಸಮೀಕ್ಷೆಯಲ್ಲಿಯೂ ಕಾಂಗ್ರೆಸ್ ಸ್ಪಷ್ಟ ಮುನ್ನಡೆ ಪಡೆದುಕೊಂಡಿತ್ತು. ಕಾಂಗ್ರೆಸ್‌ಗೆ 115-127 ಸ್ಥಾನಗಳು, ಬಿಜೆಪಿಗೆ 68-80 ಸ್ಥಾನಗಳು, ಜೆಡಿಎಸ್‌ಗೆ 23-35 ಸ್ಥಾನಗಳು ಮತ್ತು ಇತರರಿಗೆ 0-2 ಸ್ಥಾನಗಳು ಸಿಗುತ್ತವೆ ಎಂದು ತಿಳಿಸಿತ್ತು.












Click it and Unblock the Notifications