Karnataka Elections 2023: ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದೇನು? ರೌಂಡಪ್ ಸ್ಟೋರಿ
ಬೆಂಗಳೂರು, ಮೇ 09: ಕರ್ನಾಟಕ ವಿಧಾನಸಭೆ ಚುನಾವಣೆಯು ನಾಳೆ ( ಮೇ 10 ) ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಭಾರೀ ಪೊಲೀಸ್ ಬಂದೋಬಸ್ತ್ ಅನ್ನು ಕಲ್ಪಿಸಲಾಗಿದೆ. ಕರ್ನಾಟಕದ ಕಣದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪ್ರಮುಖ ಪಾತ್ರ ವಹಿಸಿವೆ. ಉಳಿದಂತೆ ಎಎಪಿ ಹಾಗೂ ಎಸ್‌ಡಿಪಿಐ ಪಕ್ಷಗಳು ತಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಲಿವೆ. ಈ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ನೀಡಿದ ಪ್ರಮುಖ ಭರವಸೆಗಳೇನು ತಿಳಿಯಿರಿ.
ಕಾಂಗ್ರೆಸ್
*ಐದು ಚುನಾವಣಾ ಖಾತರಿಗಳು: ಮಹಿಳೆಯರಿಗೆ ತಿಂಗಳಿಗೆ ರೂ 2,000, ಪದವೀಧರರಿಗೆ ರೂ 3,000 ಮತ್ತು ಡಿಪ್ಲೊಮಾ ಹೊಂದಿರುವವರಿಗೆ ರೂ 1,500 ನಿರುದ್ಯೋಗ ಭತ್ಯೆ ನೀಡಲಾಗುವುದು. ಬಿಪಿಎಲ್ ಕುಟುಂಬಗಳಿಗೆ 10 ಕೆಜಿ ಅಕ್ಕಿ, ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು.
*ಮೀಸಲಾತಿ ಮಿತಿಯನ್ನು ಶೇ 50 ರಿಂದ ಶೇ 75 ಕ್ಕೆ ಹೆಚ್ಚಿಸಲಾಗುವುದ. ಮುಸ್ಲಿಮರಿಗೆ ಶೇ 4 ಮೀಸಲಾತಿಯನ್ನು ಮರುಸ್ಥಾಪಿಸಲಾಗುವುದು.
*ಮೆಗಾ ಬೆಂಗಳೂರು ಪ್ರದೇಶ ರಚಿಸಲಾಗುವುದು.
*3,000 ಕೋಟಿ ಹಣದಲ್ಲಿ ಗಿಗ್ ವರ್ಕರ್ಸ್ ಕಲ್ಯಾಣ ಮಂಡಳಿ ರಚನೆ

*ಎಲ್ಲಾ ನಿರಾಶ್ರಿತ ಕುಟುಂಬಗಳಿಗೆ 5 ವರ್ಷಗಳಲ್ಲಿ ವಸತಿ ನೀಡಲಾಗುವುದು
*ಹೈನುಗಾರರಿಗೆ ಪ್ರೋತ್ಸಾಹಧನವಾಗಿ ಪ್ರತಿ ಲೀಟರ್ ಹಾಲಿಗೆ 7 ರೂ ನೀಡಲಾಗುವುದು
*ಬಜರಂಗದಳ ಮತ್ತು ಪಿಎಫ್‌ಐನಂತಹ ದ್ವೇಷವನ್ನು ಹರಡುವ ವ್ಯಕ್ತಿಗಳು ಮತ್ತು ಸಂಘಟನೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು
ಬಿಜೆಪಿ
*ಏಕರೂಪ ನಾಗರಿಕ ಸಂಹಿತೆ, ಎನ್‌ಆರ್‌ಸಿ ಮತ್ತು ಧಾರ್ಮಿಕ ಮೂಲಭೂತವಾದ ಹಾಗೂ ಭಯೋತ್ಪಾದನೆಯ ವಿರುದ್ಧ ರಾಜ್ಯ ವಿಭಾಗವನ್ನು (ಕೆ-ಸ್ವಿಫ್ಟ್) ರಚಿಸಲಾಗುವುದು
*ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ 3 ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗುವುದು
*ಅರ್ಧ ಲೀಟರ್ ನಂದಿನಿ ಹಾಲು ಮತ್ತು 5 ಕೆಜಿ ಅಕ್ಕಿ / ರಾಗಿ ನೀಡಲಾಗುಗುವುದು.
*ಬೆಂಗಳೂರಿನ ರಾಜ್ಯ ರಾಜಧಾನಿ ಪ್ರದೇಶವನ್ನಾಗಿ ಮಾಡಲಾಗುವುದು
*ನಿವೇಶನ ರಹಿತ/ ವಸತಿ ರಹಿತ ಫಲಾನುಭವಿಗಳಿಗೆ ರಾಜ್ಯಾದ್ಯಂತ 10 ಲಕ್ಷ ವಸತಿ ನಿವೇಶನ ನೀಡಲಾಗುವುದು
*ಪ್ರತಿ ಲೀಟರ್ ಹಾಲು ಉತ್ಪಾದನೆಗೆ ಪ್ರೋತ್ಸಾಹಧನವಾಗಿ 7 ರೂ ನೀಡಲಾಗುವುದು

ಜೆಡಿ(ಎಸ್)
*5 ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗುವುದು
*ರೈತರನ್ನು ಮದುವೆಯಾದ ಮಹಿಳೆಯರಿಗೆ 2 ಲಕ್ಷ ಸಹಾಯಧನ, ಎಲ್ಲ ರೈತರಿಗೆ ಎಕರೆಗೆ 10 ಸಾವಿರ ಸಹಾಯಧನ
*60,000 ವಿದ್ಯಾರ್ಥಿನಿಯರಿಗೆ ಉಚಿತ ಇವಿ ದ್ವಿಚಕ್ರ ವಾಹನಗಳು, 6. 8 ಲಕ್ಷ ಬೈಸಿಕಲ್‌ಗಳು ಕೊಡಲಾಗುವುದು
*ಮಹಿಳಾ ಸ್ವಸಹಾಯ ಗುಂಪುಗಳ ಸಾಲ ಮನ್ನಾ
*ಉಚಿತ ಡಯಾಲಿಸಿಸ್ ಮತ್ತು ಲ್ಯಾಬ್ ಸೌಲಭ್ಯಗಳೊಂದಿಗೆ ಪ್ರತಿ ಜಿಲ್ಲಾ ಪಂಚಾಯ್ತಿಯಲ್ಲಿ 30 ಹಾಸಿಗೆ ಆಸ್ಪತ್ರೆಗಳು
*ಗರ್ಭಿಣಿಯರಿಗೆ ಆರು ತಿಂಗಳವರೆಗೆ 6,000 ಭತ್ಯೆ ನೀಡಲಾಗುವುದು
ಎಎಪಿ
*ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಲಾಗುವುದು
*ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ, ನಗರದಲ್ಲಿನ ಎಲ್ಲಾ ಮೂಲಸೌಕರ್ಯ ಕಾಮಗಾರಿಗಳಿಗೆ ಸಂಸ್ಥೆಯನ್ನು ರಚಿಸಲಾಗುವುದು.
*ಕಡಿಮೆ ಆದಾಯದ ಗುಂಪುಗಳಿಗೆ ಬಾಡಿಗೆ ವಸತಿಗಾಗಿ ಭೂಮಿಯನ್ನು ಕಾಯ್ದಿರಿಸುವುದು.
*ದ್ವಿ-ಭಾಷಾ ನೀತಿ (ಕನ್ನಡ ಮತ್ತು ಇಂಗ್ಲಿಷ್)
*ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ
ಎಸ್‌ಡಿಪಿಐ
*ರಾಜ್ಯದ ಸಂಪನ್ಮೂಲಗಳ ಸಮಾನ ಹಂಚಿಕೆ, ನಿರ್ದಿಷ್ಟವಾಗಿ 1. 3 ಕೋಟಿ ದಲಿತರು ಮತ್ತು 1 ಕೋಟಿ ಅಲ್ಪಸಂಖ್ಯಾತ ಜನಸಂಖ್ಯೆಗೆ ನೀಡಲಾಗುವುದು.
*ಒಂದು ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಹೊಂದಿರುವ ಪ್ರತಿ ಮನೆಗೆ ಸಾಮಾಜಿಕ ಭದ್ರತೆ
*ವಾಸಿಸಲು ಶಾಂತಿಯುತ ವಾತಾವರಣ; ಕೋಮು ಸೌಹಾರ್ದತೆ
*ಮುಸ್ಲಿಂ ಸಮುದಾಯಕ್ಕೆ ಶೇ.4ರಷ್ಟು ಮೀಸಲಾತಿ ಮರುಸ್ಥಾಪನೆ












Click it and Unblock the Notifications