Live

Karnataka Vidhan Sabha Election 2023 LIVE: ಮನೆಮನೆ ಪ್ರಚಾರಕ್ಕೆ ಸೀಮಿತ, ಹೊರಗಿನವರು ಕ್ಷೇತ್ರದಲ್ಲಿ ಇರುವಂತಿಲ್ಲ

ಬೆಂಗಳೂರು, ಮೇ 9: ಹದಿನಾರನೇ ಕರ್ನಾಟಕ ವಿಧಾನಸಭೆಗೆ ಬಹಿರಂಗ ಪ್ರಚಾರಕ್ಕೆ ಮೇ 8ರಂದು ತೆರೆಬಿದ್ದಿದೆ. ಇನ್ನೇನಿದ್ದರೂ ಮನೆಮನೆ ಪ್ರಚಾರ, ಸ್ಥಳೀಯ ಅಭ್ಯರ್ಥಿಗಳು ಮತ್ತು ಆಯಾಯ ಕ್ಷೇತ್ರದಲ್ಲಿ ಮತದಾನದ ಹಕ್ಕು ಇರುವವರು ಮಾತ್ರ ಪ್ರಚಾರದಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಮೇ 10ರಂದು ಚುನಾವಣೆ, ಮೇ 13ರಂದು ಫಲಿತಾಂಶ ಹೊರಬೀಳಲಿದೆ. 'ಒನ್ ಇಂಡಿಯಾ ಕನ್ನಡ' ಜಾಲತಾಣ ಓದುಗರಿಗೆ ಚುನಾವಣಾ ಬೆಳವಣಿಗೆಯ ಮಾಹಿತಿಯನ್ನು ಲೈವ್ ಬ್ಲಾಗ್ ಮೂಲಕ ನೀಡಲಿದೆ.

May 09, 2023, 11:50 am IST

ಕರ್ನಾಟಕ ಚುನಾವಣೆ: ಗೋವಾ ಸರ್ಕಾರದಿಂದ ಪಾವತಿ ರಜೆ ಘೋಷಣೆ

ಗೋವಾದ ಬಿಜೆಪಿ ಸರ್ಕಾರವು ಮೇ 10 ರಂದು ನೆರೆಯ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ವೇತನ ಸಹಿತ ರಜೆ ಎಂದು ಘೋಷಿಸಿದೆ. ಇದು ಖಾಸಗಿ ಸಂಸ್ಥೆಗಳು ಮತ್ತು ಕೈಗಾರಿಕಾ ಕಾರ್ಮಿಕರನ್ನು ಸಹ ಒಳಗೊಂಡಿರುತ್ತದೆ ಎಂದು ತಿಳಿಸಿದೆ
May 09, 2023, 11:39 am IST

ಮತಗಟ್ಟೆ ಅಧಿಕಾರಿಗಳಿಗೆ ಕಿಟ್ ವಿತರಣೆ: ತುಷಾರ್ ಗಿರಿನಾಥ್

ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆ ಅಧಿಕಾರಿಗಳು, ಇವಿಎಂ, ಸಿಯು, ವಿವಿ ಪ್ಯಾಟ್, ಮತದಾನದ ದಿನ ಅಗತ್ಯವಿರುವ ಎಲ್ಲಾ ರೀತಿಯ ಸಾಮಗ್ರಿಗಳು, ಮತಗಟ್ಟೆಗಳಲ್ಲಿ ರಾತ್ರಿ ಉಳಿಯಲು‌ ಮತಗಟ್ಟೆ ಅಧಿಕಾರಿಗಳಿಗೆ ಬೇಕಾದಂತಹ ವ್ಯವಸ್ಥೆ ಹಾಗೂ ಅವಶ್ಯಕ ಸಾಮಗ್ರಿಗಳ ಕಿಟ್ ಗಳ ವಿತರಣೆ ಮಾಡಿ ಮಧ್ಯಾಹ್ನದ ನಂತರ ಬಿ.ಎಂ.ಟಿ.ಸಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಮೂಲಕ ಮತಗಟ್ಟೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತುಷಾರ್ ಗಿರಿನಾಥ್ ಹೇಳಿದರು.
May 09, 2023, 11:19 am IST

ಮತದಾನ; ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಮಾಡಿದವರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯ ಗುರುತು ಹಾಕಲಾಗುತ್ತದೆ.
May 09, 2023, 11:17 am IST

ಶಿವಮೊಗ್ಗದಲ್ಲಿ ಮತದಾನಕ್ಕೆ ಸಿದ್ಧತೆ, ಒಟ್ಟು 1782 ಮತಗಟ್ಟೆಗಳು

ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್ ಮತದಾನದ ಸಿದ್ದತೆ ಕುರಿತು ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ ಶಿವಮೊಗ್ಗ ಗ್ರಾಮಾಂತರದಲ್ಲಿ 11, ಭದ್ರಾವತಿಯಲ್ಲಿ 14, ಶಿವಮೊಗ್ಗ ನಗರದಲ್ಲಿ 15, ತೀರ್ಥಹಳ್ಳಿಯಲ್ಲಿ 5, ಶಿಕಾರಿಪುರದಲ್ಲಿ 10, ಸೊರಬದಲ್ಲಿ 10 ಮತ್ತು ಸಾಗರದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಿಲ್ಲಾ ವ್ಯಾಪ್ತಿಯಲ್ಲಿ 1775 + 7 ಪೂರಕ ಸೇರಿದಂತೆ ಒಟ್ಟು 1782 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ ಎಂದರು
May 09, 2023, 11:12 am IST

ವಿವಿಧ ಮಸ್ಟರಿಂಗ್ ಕೇಂದ್ರಗಳಿಗೆ ತುಷಾರ್ ಗಿರಿ ನಾಥ್ ಭೇಟಿ

ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿರುವ ಮಸ್ಟರಿಂಗ್ ಕೇಂದ್ರಗಳ ಪೈಕಿ, ಶೇಷಾದ್ರಿಪುರಂ ಕಾಲೇಜು(ಯಲಹಂಕ), ಬಿಇಎಲ್ ಹೈ ಸ್ಕೂಲ್(ಬ್ಯಾಟರಾಯನಪುರ), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ದಾಸರಹಳ್ಳಿ), ವಿದ್ಯಾ ವರ್ಧಕ ಸಂಘ(ಮಹಾಲಕ್ಷ್ಮಿ ಲೇಔಟ್)ದ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
May 09, 2023, 11:09 am IST

ಶಾಂತಿಯುತ ಚುನಾವಣೆಗೆ ಸಕಲ ಸಿದ್ದತೆ: ಮನೋಜ್‌ ಕುಮಾರ್‌ಮೀನಾ

ವ್ಯಾಪಕ ಮಳೆ ಮುನ್ಸೂಚನೆ ನಡುವೆಯೂ ಚುನಾವಣಾ ಆಯೋಗ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಶಾಂತಿಯುತ ಚುನಾವಣೆಗೆ ಸಕಲ ರೀತಿಯಲ್ಲೂ ಸಿದ್ದತೆಯನ್ನ ನಡೆಸಿದೆ. ಇನ್ನೂ ಮಳೆಯಿಂದ ವಿದ್ಯುನ್ಮಾನ ಮತಯಂತ್ರಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಿದ್ದೇವೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.
May 09, 2023, 11:07 am IST

ಮತದಾನಕ್ಕೆ ಕ್ಷಣಗಣನೆ: 2615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಮೇ 10 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮೇ 13 ರಂದು ರಾಜ್ಯದ 2615 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಆಗಲಿದೆ.

ಭಾರೀ ಪ್ರಮಾಣದ ಮದ್ಯವಶ

ಚುನಾವಣೆಗೂ ಮುನ್ನ ಅಬಕಾರಿ ಇಲಾಖೆ, ಫ್ಲೈಯಿಂಗ್ ಸ್ಕ್ಯಾಡ್ ಮತ್ತು ಪೊಲೀಸರು ಭಾರೀ ಪ್ರಮಾಣದಲ್ಲಿ ಮದ್ಯ ಮತ್ತು ಡ್ರಗ್ಸ್ ಅನ್ನು ವಶ ಪಡಿಸಿಕೊಂಡಿದ್ದಾರೆ. ಜೊತೆಗೆ, ಮತದಾರರಿಗೆ ಹಂಚಲು ಇಟ್ಟಿದ್ದ ಹಣ, ಸೀರೆ, ಕುಕ್ಕರ್ ಮುಂತಾದ ವಸ್ತುಗಳನ್ನೂ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮೇ ಎಂಟರ ಸಂಜೆ ಐದರಿಂದ, ಮೇ ಹತ್ತು ಮಧ್ಯರಾತ್ರಿಯವರೆಗೆ ಮದ್ಯಮಾರಾಟಕ್ಕೆ ಚುನಾವಣಾ ಆಯೋಗ ನಿಷೇಧ ಹೇರಿದೆ.

karnataka elections 2023

ಚಿಕ್ಕಮಗಳೂರು ಕೌಂಟಿಂಗ್ ನಡೆಯುವ ಸ್ಥಳ

ಮೇ 13 ರಂದು ಚಿಕ್ಕಮಗಳೂರು ನಗರದಲ್ಲಿರುವ ಐಡಿಎಸ್‌ಜಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಸ್ಥಳಕ್ಕೆ ಸಾರ್ವಜನಿಕರು ವಾಹನಗಳಲ್ಲಿ ಆಗಮಿಸುವುದರಿಂದ, ಬೈಪಾಸ್ ರಸ್ತೆಯಲ್ಲಿ ಎಐಟಿ ಸರ್ಕಲ್‌ನಿಂದ ನರಿಗುಡ್ಡನಹಳ್ಳಿವರೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಮೈಸೂರು ಜಿಲ್ಲೆಯ ಮತದಾರರು

ಮೈಸೂರು ಜಿಲ್ಲೆಯಲ್ಲಿ ಒಟ್ಟು 2,905 ಮತಗಟ್ಟೆಗಳಿದ್ದು, 13,17,121 ಪುರುಷ ಮತದಾರರು, 13,38,637 ಮಹಿಳಾ ಮತದಾರರು ಹಾಗೂ 230 ಇತರೆ ಮತದಾರರಿದ್ದು, ಒಟ್ಟು 26,55,988 ಮತದಾರರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+